ಆಗದು ಎಂದು… ಕೈಲಾಗದು ಎಂದು … ಕೈಕಟ್ಟಿ ಕುಳಿತರೇ… ಸಾಗದು ಕೆಲಸವು ಮುಂದೆ…. ಮನಸೊಂದಿದ್ದರೆ ಮಾರ್ಗವು ಉಂಟು… ಕೆಚ್ಚೆದೆ ಇರಬೇಕೆಂದು …ಕೆಚ್ಚೆದೆ ಇರಬೇಕೆಂದು… ಈ ಮಾತನ್ನು ಅಕ್ಷರಶಃ ಪಾಲಿಸಿ ಶಾರೀರಿಕ ನ್ಯೂನತೆಗೆ ಸವಾಲೆಸೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ದಿಟ್ಟ ಮಹಿಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಾಡಿ ಗ್ರಾಮದ ಲಲಿತಾ ಕೊರವಾಡಿ.ಚಿಕ್ಕವರಿರುವಾಗ ಅನಿರೀಕ್ಷಿತ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಯಲ್ಲೇ ಇರುವಂತಾಯಿತು. ದುರದ್ರಷ್ಟಷಾತ್ ಬಾಲ್ಯದಲ್ಲಿಯೇ […]
Day: March 7, 2021
ಶಿಕ್ಷಣದಿಂದಲೇ ಸಮಾಜದ ಪರಿವರ್ತನೆ ಸಾಧ್ಯ – ಶಾಸಕ ಬಿ .ಎಂ. ಸುಕುಮಾರ್ ಶೆಟ್ಟಿ
ಶಿಕ್ಷಣ ಪ್ರತಿಯೊಂದು ಮಗುವಿಗೂ ಅವಶ್ಯಕ. ಶಿಕ್ಷಣ ಎಂದೆಂದಿಗೂ ನನ್ನ ಮೊದಲ ಆದ್ಯತೆ, ಸದೃಡ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಡಿಪಾಯ ಎಂದು ಬೈಂದೂರಿನ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು.
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಹೆಣ್ಣುಸಂಸ್ಕಾರದ ಹೊನ್ನು ಹೆಣ್ಣುಮಣ್ಣಿಗೆ ಉಪಮಾನ ಹೆಣ್ಣುಮನೆಗೆ ಸಮಾಧಾನ ಹೆಣ್ಣುಶಕ್ತಿಗೆ ಉಪಮೆಯ ಹೆಣ್ಣುಭಕ್ತಿಗೆ ಪ್ರಮೇಯ ಹೆಣ್ಣುಪುಷ್ಟಿಯ ಪ್ರಮಾಣ ಹೆಣ್ಣುಸೃಷ್ಟಿಯ ನಿರ್ಮಾಣ ಹೆಣ್ಣುಮುಕ್ತಿಯ ನಿರ್ವಾಣ ಹೆಣ್ಣುಯುಕ್ತಿಯ ವ್ಯವಧಾನ ಹೆಣ್ಣುಹೆಣ್ಣು, ಸ್ವಾಭಿಮಾನ ಹೆಣ್ಣುಹೆಣ್ಣು, ಅಭಿಮಾನ ಹೆಣ್ಣು. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಯಡ್ತರೆ ಮೊಗವೀರ ಗರಡಿ ಕಿರು ಸೇತುವೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ
ಬೈಂದೂರು (ಮಾ.5) ಯಡ್ತರೆ ಮೊಗವೀರ ಗರಡಿಯು ಮೊಗವೀರ ಸಮಾಜ ಬಾಂಧವರ ಅತ್ಯಂತ ಪೂಜನೀಯ ಮತ್ತು ಪ್ರತಿಷ್ಠಿತ ಗರಡಿಗಳಲ್ಲಿ ಒಂದಾಗಿದೆ. ಈ ಗರಡಿಗೆ ಕಳೆದ ಬಾರಿ ಭೇಟಿ ನೀಡಿದಾಗ ಸುಗಮ ಸಂಚಾರಕ್ಕೆ ಕಿರು ಸೇತುವೆಯ ಅವಶ್ಯಕತೆ ಇದೆ ಎನ್ನುವುದಾಗಿ ನನಗೆ ಬೇಡಿಕೆಯನ್ನು ಈ ಭಾಗದ ಜನತೆ ಸಲ್ಲಿಸಿದ್ದರು. ಅದನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿ ಕಿಂಡಿ ಅಣೆಕಟ್ಟು ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು. ಅವರು ಯಡ್ತರೆ […]
ಶ್ರೀ ಧವಲಾ ಕಾಲೇಜು ಮೂಡಬಿದ್ರೆ : ನಾಯಕತ್ವ ತರಬೇತಿ ಶಿಬಿರ
ಉಡುಪಿ (ಮಾ.6) ಶ್ರೀ ಧವಲಾ ಕಾಲೇಜಿನಲ್ಲಿ ವಿಧ್ಯಾರ್ಥಿ ನಾಯಕರಿಗೆ ಒಂದು ದಿನದ ನಾಯಕತ್ವ ತರಬೇತಿ ಶಿಬಿರವು ಮಾರ್ಚ್ 4 ರಂದು ಜರುಗಿತು. ಈ ಶಿಬಿರವನ್ನು ಕಾಲೇಜಿನ ಹಳೆ ವಿಧ್ಯಾರ್ಥಿ ಹಾಗೂ ಶ್ರೀ ನವದುರ್ಗ, ಇಂಡಸ್ಟ್ರೀಸ್ ಸಚ್ಚರಿಪೇಟೆ ಇದರ ಮಾಲಕರಾದ ಶ್ರೀಯುತ ಶ್ರೀಕಾಂತ್ ಕಾಮತ್ರವರು ಉದ್ಘಾಟಿಸಿದರು. ವಿಧ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ತಿಳಿದುಕೊಂಡರೆ ಮುಂದೆ ದೇಶದ ನಾಯಕರಾಗುವ ಸೌಭಾಗ್ಯವಂತರಾಗಬಹುದು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಮಾತನಾಡಿದರು. ಶಿಬಿರದ […]
ಭಾರತೀಯ ಸೇನಾ ನೇಮಕಾತಿ ರ್ಯಾಲಿ – ಸೈನಿಕ ಪ್ರಶಾಂತ್ ದೇವಾಡಿಗರಿಂದ ಉಚಿತ ತರಬೇತಿ & ಮಾಹಿತಿ ಕಾರ್ಯಕ್ರಮ
ಭಾರತೀಯ ಸೈನ್ಯಕ್ಕೆ ಸೇರಲಿಚ್ಚಿಸುವ ಯುವಕರಿಗೆ ಇದೇ ತಿಂಗಳ 16 ರಿಂದ ಉಡುಪಿಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು ಅದಕ್ಕೆ ಪೂರ್ವತಯಾರಿ ಹಿನ್ನೆಲೆಯಲ್ಲಿ ಬೇಕಾಗುವ ಕೆಲವು ತರಬೇತಿ ಹಾಗೂ ಸಲಹೆಯನ್ನು ಬೈಂದೂರಿನ ಹೆಮ್ಮೆಯ ಯುವ ಸೈನಿಕರಾದ ಪ್ರಶಾಂತ್ ದೇವಾಡಿಗರವರು ಉಚಿತವಾಗಿ ನೀಡಲಿದ್ದಾರೆ.
ಶಿರ್ವ ಸಂತ ಮೇರಿ ಕಾಲೇಜು : ರಕ್ಷಕ – ಶಿಕ್ಷಕ ಸಭೆ
ಉಡುಪಿ(ಮಾ.6): ಸಂತ ಮೇರಿ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಆಯೋಜನೆಯಲ್ಲಿ ರಕ್ಷಕ-ಶಿಕ್ಷಕ ಸಭೆಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ರವರು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹಳ ಪ್ರಾಮುಖ್ಯವಾಗಿದೆ. ಇಂದಿನ ಯುವ ಜನತೆಗೆ ಮಾರ್ಗದರ್ಶನ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ, ಯುವಜನತೆಯ ಮನಸ್ಸನ್ನು ಇಂದಿನ ಜಗತ್ತು ನಾನಾ ಧುಶ್ಚಟಗಳಿಗ್ಗೆ ಸೆಳೆಯುತ್ತಿದೆ ಇದರಿಂದ ದೂರವಿರಿಸಿ […]