ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
Month: March 2021
ಡಾ| ಬಿ.ಬಿ. ಹೆಗ್ಡೆ ಕಾಲೇಜು : ಸಾಂಪ್ರದಾಯಿಕ ದಿನಾಚರಣೆ
ಸಂಸ್ಕೃತಿ, ಆಚರಣೆಗಳು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಬಾರದು. ಧಾರ್ಮಿಕ ಕಾರ್ಯಕ್ರಮಗಳಿಗಾದರೂ ಸಾಂಪ್ರದಾಯಿಕ ಉಡುಗೆ ತೊಡುವಂತಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಉಳಿಯುವಂತಾದರೆ ಈ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ.
ಶ್ರೀ ಧವಲಾ ಕಾಲೇಜು : ಶಿಕ್ಷಕರ ತರಬೇತಿ ಕಾರ್ಯಕ್ರಮ
ಉಡುಪಿ (ಮಾ. 21) ಶ್ರೀ ಧವಲಾ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ “ಮೆಂಟರಿಂಗ್ ಸ್ಕಿಲ್ಸ್” ಬಗ್ಗೆ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆಡಳಿತ ಮಂಡಳಿ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ (ರಿ) ಮೂಡಬಿದ್ರೆ ಇದರ ಸಂಚಾಲಕರಾದ ಶ್ರೀ ಕೆ. ಹೇಮರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದ್ದರು.ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಅಂತರ್ ಕಾಲೇಜು ಸಾಂಪ್ರದಾಯಿಕ ಕ್ರೀಡೆಗಳ ಪಂದ್ಯಾಟ ಉದ್ಘಾಟನೆ
ಕುಂದಾಪುರ (ಮಾ. 20): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಸಾಂಪ್ರದಾಯಿಕ ಕ್ರೀಡೆಗಳ ಪಂದ್ಯಾಟವನ್ನು ಬ್ರಹ್ಮಾವರದ ಎಸ್. ಎಮ್. ಎಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಮಾರ್ಚ್ 19ರಂದು ಉದ್ಘಾಟಿಸಿದರು. ವಿದ್ಯುನ್ಮಾನ ಯುಗದ ಭರಾಟೆಯಲ್ಲಿ ಸಾಂಪ್ರದಾಯಿಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಕೈಂಕರ್ಯದಲ್ಲಿ ತೊಡಗಿರುವುದು ಸ್ತುತ್ಯಾರ್ಹ. ಇಂತಹ ಗ್ರಾಮೀಣ […]
ಅಂಕಣ – 1 : ಅನಧಿಕೃತ ಇನ್ಸ್ಟಂಟ್ ಲೋನ್ ಆ್ಯಪ್ ಗಳ ಕುರಿತು ಎಚ್ಚರ ವಹಿಸುವಿಕೆ.
ತಕ್ಷಣವೇ ಸಾಲ ಕೊಡುತ್ತೇವೆ ಎಂದು ನಂಬಿಸುವ ಅನುಮಾನಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಇದರಿಂದ ಮೋಸ ಹೋದವರು ಹೆಚ್ಚು, ನೆನಪಿರಲಿ. ಈ ಆ್ಯಪ್ ಗಳಿಗೆ ನೀವು ಏನು ಅನುಮತಿಯನ್ನು ನೀಡುತ್ತಿದ್ದೀರಿ ಎಂಬುದರ ಮೇಲೆ ಒಂದು ಕಣ್ಣಿಡಿ. ದಯವಿಟ್ಟು ನಿಮ್ಮ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಈ ಲೋನ್ ಆ್ಯಪ್ಗಳು ಆರ್ .ಬಿ.ಐ. (Reserve Bank of India ) ಅಡಿಯಲ್ಲಿ ಬರುವುದಿಲ್ಲ ಹಾಗೂ ಸಾಲ ತೀರಿಸದೇ ಹೋದರೆ ಇವರು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೆ ನುಡಿನಮನ
ಬರಿ ಪದಕ್ಕೆ ಪದ ಸೇರಿಸಿ ಹಾಡು ಕಟ್ಟಿ, ಒಂದೊಂದು ಅಕ್ಷರವನ್ನೂ ತುಂಬಾ ಅನುಭವಿಸಿ ಭಾವಗಳನ್ನೇ ಎದೆಗಿಳಿಸಿದ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳು ಬದುಕಿನ ಗೀತೆಗಳು ಎಂದು ಸಾಂಸ್ಕೃತಿಕ ಚಿಂತಕ ಶ್ರೀ ಮುಸ್ತಾಕ್ ಹೆನ್ನಾಬೈಲು ಹೇಳಿದರು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ ಮತ್ತು ನಿಪುಣ ಪರೀಕ್ಷೆ ತರಬೇತಿ
ಭಾರತ್ ಸೈಟ್ ಮತ್ತು ಗೈಡ್ಸ್ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಘಟಕರಾದ ಶ್ರೀಮತಿ ಸುಮನ ಶೇಖರ್ ಮಾರ್ಚ್ 16ರಂದು ಡಾ.ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೂವರ್ಸ್ ಮತ್ತು ರೇಂಜರ್ಸ್ ಘಟಕಗಳ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಡಿಜಿಟಲ್ ಮಾರ್ಕೆಟಿಂಗ್ ಮಾಹಿತಿ ಕಾರ್ಯಕ್ರಮ
ಕುಂದಾಪುರ (ಮಾ. 18): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ, ವ್ಯವಹಾರ ನಿರ್ವಹಣೆ ಶಾಸ್ತ್ರ ವಿಭಾಗ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಶಾಸ್ತ್ರ ಸಂಘದ ಆಶ್ರಯದಲ್ಲಿ ‘ಡಿಜಿಟಲ್ ಮಾರ್ಕೆಟಿಂಗ್ ಮಾಹಿತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿಜಿಟಲ್ ರಾಯ್ ಅಕಾಡೆಮಿ, ಬೆಂಗಳೂರಿನ ಸಂಸ್ಥಾಪಕರಾದ ಶ್ರೀ ರಾಜೀವ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ನ ಮಹತ್ವ ಮತ್ತು ಅದರಿಂದ ಮುಂದಿನ ದಿನಗಳಲ್ಲಿ ಸಿಗುವ ಉದ್ಯೋಗಾವಕಾಶಗಳ […]
ಮಾರ್ಚ್ 21ರಂದು ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ ಉದ್ಘಾಟನೆ
ಗಂಗೊಳ್ಳಿ (ಮಾ.18) ಕರ್ನಾಟಕ ಸರಕಾರ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಕೊಂಕಣಿ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು, ಎಸ್.ಎಮ್.ಎಸ್. ಕಲಾವೈಭವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯಚಿತ್ರಗಾರ, ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ, ಪ್ರದರ್ಶನಕಾರ ಮತ್ತು ಛಾಯಾ ಚಿತ್ರಗ್ರಾಹಕ ಗಂಗೊಳ್ಳಿ ಶ್ರೀ ಭಾಸ್ಕರ ಕಲೈಕಾರ್ ರವರು ಮುಂದಿನ ಯುವ ಪೀಳಿಗೆಗಾಗಿ ನಿರ್ಮಿಸಿರುವ ಮ್ಯೂಸಿಯಂ ಉದ್ಘಾಟನೆ ಇದೇ ಮಾರ್ಚ್ 21ರ ಬೆಳಿಗ್ಗೆ 10-30 ಗಂಟೆಗೆ ಗಂಗೊಳ್ಳಿಯ. ‘ಶ್ರೀ ದೇವಿಪ್ರಸಾದ್’ ಕಲೈಕಾರ್ ಮಠದ ಬಳಿ ನಡೆಯಲಿದೆ. ಈ […]
ಸೈಬರ್ ಸೆಕ್ಯೂರಿಟಿ : ಒಂದಿಷ್ಟು ಮಾಹಿತಿ – ಜಾಗೃತಿ
ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ಗಳ ವಿವಿಧ ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ದುಷ್ಕರ್ಮಿಗಳು ಸಾರ್ವಜನಿಕರನ್ನು ಮೋಸಗೊಳಿಸುವುದು, ವೈಯಕ್ತಿಕ ಬ್ಯಾಂಕ್ ಖಾತೆಗೆ ಕನ್ನ ಹಾಕುವಂಥದ್ದು, ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುವಂತದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.










