ಹೌದು ಸ್ನೇಹಿತರೇ,ಗಾಳಿಬಂದ ಕಡೆಯಲ್ಲಿ ತೂರಿಕೊಂಡು ಅತೀ ಧಾವಂತದಲ್ಲಿ ಮುನ್ನೆಡೆಯುತ್ತಿರುವ ನಾವು ಹಾಗೂ ನಮ್ಮ ಯುವ ಪೀಳಿಗೆ ಸಂಸ್ಕಾರವನ್ನು ಮರೆಯುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ.. ಇಲ್ಲಿವೆ ನೋಡಿ ಸಂಸ್ಕಾರದ ಪಾಠಕೈಯಲ್ಲಿ ಕೋಟಿ ಇದ್ದರು ಗುರು ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..! ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..! ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆಯ ತುಂಬ ಹೂವು ಸಂಸ್ಕಾರ..! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ […]
Day: April 7, 2021
ಇ ಸಿ ಆರ್ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ : ವಿಶ್ವ ಆರೋಗ್ಯ ದಿನಾಚರಣೆ
ಮಧುವನ (ಏ, 7): ಇಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಧು ಟಿ. ಭಾಸ್ಕರನ್ ರವರು ಕಾರ್ಯಕ್ರಮವನ್ನುಉದ್ಘಾಟಿಸುವುದರ ಜೊತೆಗೆ ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿದರು. ಇಂದಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಒಬ್ಬರ ಸಮಸ್ಯೆಯಾಗಿರದೆ ವಿಶ್ವದ ಸಮಸ್ಯೆಯಾಗಿದೆ ಆದ್ದರಿಂದ ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದ ಸಂಯೋಜಕರು ಪ್ರಾಂಶುಪಾಲರಾದ ಪ್ರೊ. ನಟರಾಜ್ ಕೆ, ಮಾತನಾಡಿ ಆರೋಗ್ಯದ […]
ಡಾ. ಮಹಾಂತೇಶ ಏಳಮ್ಮಿ ರವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ
ಬೆಳಗಾವಿ (ಏ, 7): ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸಂಶೋಧನೆ ಮಹಾವಿದ್ಯಾಲಯದ ಗಣಕಯಂತ್ರ-ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಮಹಾಂತೇಶ ಏಳಮ್ಮಿ ರವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಬಾಗಲಕೋಟೆ ಜಿಲ್ಲೆಯ ನಿವಾಸಿಯಾದ ಡಾ.ಮಹಾಂತೇಶ ಏಳಮ್ಮಿ ಯವರು ಡಾ. ಬಸವರಾಜ್ ಅನಾಮಿ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “CHARACTERIZATION AND CLASSIFICATION OF COMMON FABRIC MATERIALS AND THEIR DEFECTS” ಎನ್ನುವ ವಿಷಯಕ್ಕೆ ಪಿ.ಎಚ್.ಡಿ […]
ಏಪ್ರಿಲ್ 8 ರಿಂದ 10 ರ ತನಕ ನಡೆಯ ಬೇಕಿದ್ದ ಮಂಗಳೂರು ವಿ. ವಿ. ಪದವಿ ಸೆಮಿಸ್ಟರ್ ಪರೀಕ್ಷೆ ಮುಂಡೂಡಿಕೆ
ಮಂಗಳೂರು (ಏ, 7): ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಆನಿರ್ದಿಷ್ಟಾವಧಿಗೆ ಮುಂದುವರೆದಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯವು ದಿನಾಂಕ 08-04-2021 ರಿಂದ 10-04-2021ರ ವರೆಗೆ ನಿಗದಿಪಡಿಸಿದ್ದ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು,ಉಳಿದ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಈ ಕುರಿತು ಕೂಡಲೇ ವಿದ್ಯಾರ್ಥಿಗಳ ಗಮನಕ್ಕೆ ತರಲಾಗುವುದು ಎಂದು […]
ಕೋವಿಡ್ ಲಸಿಕೆ ಅಭಿಯಾನಕ್ಕೆ ಗೋಪಾಡಿ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಟನೆಗಳ ಸಹಕಾರ
ಕೋಟೇಶ್ವರ (ಏ, 7): ಪಡು ಗೋಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 75ಕ್ಕೂ ಮಿಕ್ಕಿ ಗ್ರಾಮಸ್ಥರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ,ಪಂಚಾಯತ್ ನ ಹಿರಿಯ ಸದ್ಯಸರಾದ ಶ್ರೀ ಸುರೇಶ್ ಶೆಟ್ಟಿ ಗೋಪಾಡಿ, ಸದ್ಯಸರಾದ ಪ್ರಕಾಶ್ ಗೋಪಾಡಿ, ಶ್ರೀಮತಿ ನೇತ್ರಾವತಿ ಮಡಿವಾಳ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ್ ಶೆಟ್ಟಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಸಂಗಮ್, ಗೋಪಾಡಿ, ಗೋಮಾತಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ […]
ಕೆಎಸ್ಇಟಿ (KSET) ಪರೀಕ್ಷಾ ಕೇಂದ್ರಗಳ ವಿವರ ವೆಬ್ ಸೈಟ್ ನಲ್ಲಿ ಲಭ್ಯ
ಉಡುಪಿ (ಏ, 7): ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆ.ಎಸ್.ಇ.ಟಿ. (KSET) ಇದೇ ಎಪ್ರಿಲ್ 11 ರಂದು ನಡೆಯಲಿದ್ದು, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ವಿವರವನ್ನು ಮೈಸೂರು ವಿಶ್ವವಿದ್ಯಾಲಯ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ kset.uni-mysore.ac.in ಗೆ ಭೇಟಿ ನೀಡಬೇಕೆಂದು ಸೂಚಿಸಲಾಗಿದೆ.