ಬೈಂದೂರು ( ಏ, 20) : ಕೋವಿಡ್-19 ಮಾರ್ಗಸೂಚಿಯಲ್ಲಿ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಿರುವುದರಿಂದ ಎಪ್ರಿಲ್ 22ರಿಂದ 29 ರ ತನಕ ನಡೆಯಬೇಕಿದ್ದ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ನಾಕಟ್ಟೆ ಯಡ್ತೆರೆ ಇದರ ನವೀಕೃತ ಗರ್ಭಗೃಹ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ, ಗೆಂಡ ಸೇವೆ- ಪಂಜುರ್ಲಿ ನೇಮೋತ್ಸವ, ಶ್ರೀ ಬ್ರಹ್ಮಬೈದರ್ಕಳ ಜಾತ್ರಾಮಹೋತ್ಸವ, ಧಾರ್ಮಿಕ – ಸಾಂಸ್ಕೃತಿಕ ವೈಭವೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕೋವಿಡ್ ನಿಯಮಗಳು ಸಡಿಲಗೊಂಡ ಬಳಿಕ ಕಾರ್ಯಕ್ರಮಗಳ […]
Day: April 21, 2021
ಬಾಲ್ಯದ ಗೆಳತಿ
ಬಾಲ್ಯದ ಗೆಳತಿಮಳೆಗಾಲದ ಸಮಯ….ಶಾಲೆಯ ಮೊದಲ ದಿನ. ಅಮ್ಮ ನನಗೆ ಸಮವಸ್ತ್ರ ತೊಡಿಸಿ, ರೆಡಿ ಮಾಡಿಸಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು. ಮನಸ್ಸಿನಲ್ಲಿ ತುಂಬಾ ಭಯ ಮತ್ತು ಕಳವಳ. ನನ್ನ ಹಾಗೆ ಎಲ್ಲಾ ಮಕ್ಕಳು ಶಾಲೆಗೆ ಬರುತ್ತಿದ್ದರು. ಕೆಲವರು ಅಳುತ್ತಿದ್ದರು, ನನಗೆ ಭಯ, ಅತ್ತರೆ ಅಮ್ಮ ಬೈಯುತ್ತಾರೆಂದು. ಬೆಂಚಿನ ಮೇಲೆ ಹೋಗಿ ಕುಳಿತೆ. ಅಮ್ಮ ಮನೆಗೆ ಹೋಗುದನ್ನು ನೋಡಿ ಉಸಿರು ಬಿಗುವಾಯಿತು, ಕಣ್ಣಲ್ಲಿ ನೀರು ತುಂಬಿಬಂತು. ತಕ್ಷಣ ಅಮ್ಮನ ಹಿಂದೆ ಓಡಬೇಕೆಂದುಕೊಂಡೆ! ಧೈರ್ಯ […]
ಶ್ರೀ ಗಣೇಶ್ ಗಂಗೊಳ್ಳಿ ಯವರಿಗೆ ಕರ್ನಾಟಕ ಜನಪದ ಭೂಷಣ ಪ್ರಶಸ್ತಿ ಪ್ರಧಾನ
ಬೈಂದೂರು (ಏ, 21): ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಹಾಗೂ ಮಂದಾರ ಕಲಾವಿದರ ವೇದಿಕೆ ಬೀದರ್ ವತಿಯಿಂದ ಸಾಹಿತ್ಯ ಮತ್ತು ಇತರ ಕ್ಷೇತ್ರಗಳ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಉಪ್ಪುಂದ- ಕಂಬದ ಕೋಣೆಯ ‘ರೈತಸಿರಿ’ ಸಭಾಭವನ, ಕೆ.ಆರ್.ಎಸ್.ಎಸ್. ಎಸ್. ನಿ.,ನಲ್ಲಿ ಎಪ್ರಿಲ್ 18 ರಂದು ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಜನಪದ ಪರಿಷತ್ ಇದರ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ಆಕಾಶವಾಣಿ […]
ಶ್ರೀ ನರೇಂದ್ರ ಎಸ್. ಗಂಗೊಳ್ಳಿ ಯವರಿಗೆ ಪ್ರತಿಭಾ ಚೂಡಾಮಣಿ ರತ್ನ ಪ್ರಶಸ್ತಿ ಪ್ರಧಾನ
ಬೈಂದೂರು (ಏ, 21): ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಹಾಗೂ ಮಂದಾರ ಕಲಾವಿದರ ವೇದಿಕೆ ಬೀದರ್ ವತಿಯಿಂದ ಸಾಹಿತ್ಯ ಮತ್ತು ಇತರ ಕ್ಷೇತ್ರಗಳ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಉಪ್ಪುಂದ- ಕಂಬದ ಕೋಣೆಯ ‘ರೈತಸಿರಿ’ ಸಭಾಭವನ, ಕೆ.ಆರ್.ಎಸ್.ಎಸ್. ಎಸ್. ನಿ.,ನಲ್ಲಿ ಎಪ್ರಿಲ್ 18 ರಂದು ನಡೆಯಿತು. ಈ ಸಂದರ್ಭದಲ್ಲಿ ಯುವ ಲೇಖಕ ಹಾಗೂ ಉಪನ್ಯಾಸಕರಾದ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಇವರಿಗೆ ಪ್ರತಿಭಾ […]
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ : ಯುಜಿಸಿ -ನೆಟ್ ಪರೀಕ್ಷೆ ಮುಂದೂಡಿಕೆ
ನವದೆಹಲಿ (ಏ, 21) : ಕೋವಿಡ್ ಎರಡನೇ ಅಲೆ ನಿಯಂತ್ರಣ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯುಜಿಸಿ-ನೆಟ್ (NET-ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆ ಯನ್ನು ಮುಂದೂಡಲಾಗಿದೆ.ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್ಟಿಎ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಹಿಂದೆ ನಿರ್ಧರಿಸಿದಂತೆ ಮೇ 2ರಿಂದ 17ರ ವರೆಗೆ ನೆಟ್ ಪರೀಕ್ಷೆ ನಡೆಯಬೇಕಿತ್ತು.ಆದರೆ ಕರೋನಾ ಕಾರಣದಿಂದಾಗಿ ಪರೀಕ್ಷೆಯನ್ನು ನಡೆಸಲಾಗುತ್ತಿಲ್ಲ. ಮುಂದೆ ನಡೆಯಲಿರುವ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪರೀಕ್ಷೆ ನಡೆಯುವ 15 ದಿನಗಳ ಮುಂಚಿತವಾಗಿ […]










