ಕುಂದಾಪುರ (ಏ, 23) : ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದು ಅಗ್ರ ಹತ್ತು ವಿಜೇತರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ […]
Day: April 24, 2021
ಸೋಂಕಿತರು… ನೀವಂದುಕೊಂಡಷ್ಟೇ ಬದುಕಲ್ಲ
ಪ್ರಪಂಚವನ್ನೇ ಗೆಲ್ಲುತ್ತೇನೆ ಎಂದು ಹೊರಟಿದ್ದ ಮಗ, ಸೋಂಕಿಗೆ ಭಯಗೊಂಡು, ಇಂದು ಊರ ದಾರಿ ಹಿಡಿದಿದ್ದ.. ದೂರದಲ್ಲೆ ಕಂಡ ಚಿಂಟು, ಗುರುತು ಹಚ್ಚಿ ಕುಂಯ್ ಗುಡುತ್ತಾ ಓಡಿ ಬಂದು ಕಾಲು ನೇವರಿಸುತಿತ್ತು.. ಅದು ಸುಮಾರು ಆರು ವರ್ಷದ ಹಿಂದಿನ ಮಾತು, ಚಿಂಟುವಿಗಾಗ ನಾಲ್ಕೇ ತಿಂಗಳು.. ಅದರ ನೆನಪಲ್ಲಿ ಇವನ ಮುಖ ಮಾಸಿರಲಿಲ್ಲ.. ಬಾಲ ಅಲ್ಲಾಡಿಸುತಿತ್ತು…. ಚಿಂಟು ಓಡಿದ್ದನ್ನು ಕಂಡು, ಅದಾಗಲೇ ಒಲೆ ಪಕ್ಕ ಇಟ್ಟ ಬಟ್ಟಲಿಗೆ ಒಂದಷ್ಟು ನೀರು ಸುರಿದು, ಅರಸಿನ […]
ಹೆಸಕತ್ತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಶೈಲಿಯ ನಲಿಕಲಿ ಇಂಗ್ಲಿಷ್ ತರಗತಿ – ವಿಡಿಯೋ ನೋಡಿ
ತೆಕ್ಕಟ್ಟೆ (ಏ, 24) : ಕೋವಿಡ್ ಕಾರಣದಿಂದಾಗಿ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ ನೋಡದೆ ಅದೆಷ್ಟು ಅದೆಷ್ಟು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆ. ಎಲ್ಲವೂ ಸರಿ ಹೋಗಬಹುದು,ಕೋವಿಡ್ ನಿಯಂತ್ರಣಕ್ಕೆ ಬರಬಹುದು ಅನ್ನುವ ಆಲೋಚನೆ ಯಲ್ಲಿದ್ದ ನಮಗಿಂದು ಕರೋನ ಎರಡನೇ ಅಲೆ ಬೆಚ್ಚಿಬೀಳಿಸಿದೆ.ಅದೆಷ್ಟೋ ಸರಕಾರಿ ಪ್ರಾಥಮಿಕ ಶಾಲೆಗಳು ಕರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗದೆ […]
ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಎಮರ್ಜಿಂಗ್ ಲಯನ್ ಪ್ರಶಸ್ತಿ
ಕುಂದಾಪುರ (ಏ, 24) : ಇತ್ತೀಚೆಗೆ ನಡೆದ 18 ನೇ ಲಯನ್ಸ್ ಜಿಲ್ಲಾ ಸಮ್ಮೇಳನದ 4 ನೇ ಲಯನ್ಸ್ ಜಿಲ್ಲಾ ಸಂಪುಟ ಸಭೆಯಲ್ಲಿ ಚಿತ್ರದುರ್ಗಾ, ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಸಿ ಯ “ಎಮರ್ಜಿಂಗ್ ಲಯನ್ ಆಫ್ ದ್ ಡಿಸ್ಟ್ರಿಕ್ಟ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ […]
ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ವತಿಯಿಂದ ರಕ್ತ ದಾನಿಗಳಿಗೆ ವಿಶೇಷ ಮನವಿ
ಕುಂದಾಪುರ (ಏ, 24): ರಕ್ತದಾನ ಶಿಬಿರ ಹಾಗೂ ತುರ್ತು ಸಂದರ್ಭದಲ್ಲಿ ರಕ್ತದಾನದ ಜೊತೆಗೆ ಬಡ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಜನಸೇವೆ ಗೈಯುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ರಕ್ತದಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದೆ. 18ವರ್ಷ ಮೇಲ್ಪಟ್ಟವರು ಮೇ ತಿಂಗಳಲ್ಲಿ ಕೊರೊನ ಲಸಿಕೆ ಪಡೆಯುವವರು ಮುಂದಿನ 28ದಿನ ರಕ್ತ ದಾನ ಮಾಡುವಂತಿಲ್ಲ .ಎರಡನೇ ಡೋಸ್ ಪಡೆದು ಒಟ್ಟು ಮುಂದಿನ 56 ದಿನಗಳತನಕ ರಕ್ತ ದಾನ ಮಾಡಲು ಅಸಾಧ್ಯ .ಆ ನಿಟ್ಟಿನಲ್ಲಿ […]