ಹುಬ್ಬಳ್ಳಿ (ಏ, 25) : ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಮುಂದಿನ ವಾರವೂ ಇದೆ. ಲಾಕ್ಡೌನ್ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಏಪ್ರಿಲ್ 26 ರ ಬೆಳಿಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಕ್ಯಾಬಿನೆಟ್ನಲ್ಲಿ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Day: April 25, 2021
ಶಿಶಿರ್ ಸುವರ್ಣ : ಶಿಖರದಷ್ಟೇ ಅಚಲ – ಸುವರ್ಣದಷ್ಟೇ ಮೆರುಗಿನಂತಹ ಪ್ರಖರ ವ್ಯಕ್ತಿತ್ವ
ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ […]
ಕುಂದಾಪುರದ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಸೈನ್ಯಕ್ಕೆ ಆಯ್ಕೆ
ಕುಂದಾಪುರ (ಏ, 25): ತಾಲೂಕಿನ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಭೂ ಸೈನ್ಯಕ್ಕೆ ಆಯ್ಕೆ ಆಗಿರುತ್ತಾರೆ. ಅಮಾಸೆಬೈಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಇವರು ಬಿದ್ಕಲ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅಮಾಸೆಬೈಲಿನ ದೇವಿಕಾನು ಒಳಬೈಲು ಗ್ರಾಮದ ಹೊಳೆಬಾಗಿಲು ಮನೆ ಶೇಖರ ಶೆಟ್ಟಿ ಹಾಗೂ ಹೇಮಾ ಶೆಡ್ತಿ ಯವರ ಪುತ್ರ .
ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿಗೆ ಮಲ್ಟಿಪಲ್ ಯಂಗ್ ಲಯನ್ ಪ್ರಶಸ್ತಿ
ಉಡುಪಿ (ಏ, 25) : ಇತ್ತೀಚೆಗೆ ನಡೆದ ಲಯನ್ಸ್ ಮಲ್ಟಿಪಲ್ ಅವಾರ್ಡ್ ನಲ್ಲಿ ಗೋವಾ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನೊಳಗೊಂಡ ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ನ “ಮಲ್ಟಿಪಲ್ ಯಂಗ್ ಲಯನ್ “ ಪ್ರಶಸ್ತಿ ಯನ್ನು ಲಯನ್ಸ್ ಕ್ಲಬ್ ಬಸರೂರು ಮೂಡ್ಲಕಟ್ಟೆಯ ಅಧ್ಯಕ್ಷ ಹಾಗೂ ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕರಾದ ಆರ್. […]