ವಂಡ್ಸೆ (ಏ, 20) : ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಶಂಕರಾಚಾರ್ಯ ಪ್ರತಿಷ್ಠಾಪಿತ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳದ ಪವಿತ್ರ ಸೌಪರ್ಣಿಕಾ ನದಿ ಕಲುಷಿತ ಗೊಂಡಿದ್ದು ನದಿಯ ಜಲಚರಗಳು ಸತ್ತು ದಡ ಸೇರಿದ್ದು ಇದೀಗ ಜನರಲ್ಲಿ ಆತಂಕ ಮೂಡಿಸಿದೆ. ಲಾಡ್ಜ್, ಹೋಟೆಲ್ ಉದ್ಯಮ, ಸ್ಥಳೀಯ ಅಂಗಡಿ-ಮುಂಗಟ್ಟುಗಳ ತ್ಯಾಜ್ಯಅಸಮರ್ಪಕ ಚರಂಡಿ ವ್ಯವಸ್ಥೆ ಇಂದಾಗಿ ಸೌಪರ್ಣಿಕಾ ನದಿ ಕಲುಷಿತಗೊಳ್ಳುತ್ತಿದೆ . ಅಲ್ಲದೆ ಕಾನೂನು ಬಾಹಿರವಾಗಿ ನದಿತೀರದ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ […]
Month: April 2021
ಈಜುಪಟು ನಾಗರಾಜ ಖಾರ್ವಿಯವರಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಸನ್ಮಾನ
ಗಂಗೊಳ್ಳಿ (ಏ, 21): ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1 ಕಿ.ಮೀ.ದೂರವನ್ನು 25 ನಿಮಿಷ 16 ಸೆಕೆಂಡುಗಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ, ಪದವೀಧರ ಶಿಕ್ಷಕ ನಾಗರಾಜ ಖಾರ್ವಿ ಇವರನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಈಜು ತರಬೇತುದಾರರಾದ ಬಿ.ಕೆ.ನಾಯ್ಕ್, ಕಾರ್ಪೋರೇಟರ್ ಗಳಾದ ಶೋಭ ರಾಜೇಶ್, ಜಯಲಕ್ಷ್ಮೀ ಶೆಟ್ಟಿ, ಶರತ್, ಮಾಜಿ […]
ಭಾರತೀಯ ಸೇನೆ (SSB – ಸಶಸ್ತ್ರ ಸೀಮಾ ಬಲ್) ಗೆ ಆಯ್ಕೆಯಾದ ಕುಂದಾಪುರದ ಯುವಕ ಕೀರ್ತನ್ ಹೆಬ್ಬಾರ್
ಕುಂದಾಪುರ (ಏ, 20): ಭಾರತೀಯ ಸೇನೆಯ SSB (ಸಶಸ್ತ್ರ ಸೀಮಾ ಬಲ್ ) ಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ, ಯಡಮೊಗೆ ಗ್ರಾಮದ ಯುವಕ ಕೀರ್ತನ್ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ಇವರು ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದು, ಇತ್ತೀಚೆಗೆ SSB Constable recruitment ಅಲ್ಲಿ ನಡೆದ ಎಲ್ಲಾ ರೀತಿಯ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ತೆರ್ಗಡೆಗೊಂಡು ಅಸ್ಸಾಂ ನ ಗುವ್ವಾಟಿ ಅಲ್ಲಿ ಏಪ್ರಿಲ್ 20ರಿಂದ ಭಾರಾತಂಬೆಯ ಸೇವೆಗೆ […]
ಸಾಮಾಜಿಕ ಜವಾಬ್ದಾರಿ
ಸಾಮಾಜಿಕ_ಜವಾಬ್ದಾರಿ ಸಮಾಜದಲ್ಲಿ ಸಕಲ ಜೀವಿಗಳೊಂದಿಗೆ ಸಹಬಾಳ್ವೆಯಿಂದ ಬಾಳುವ ಪಾಠವನ್ನು ಕಲಿತ ಪ್ರತಿ ಒಬ್ಬ ವ್ಯಕ್ತಿಯೂ ‘ಸಂಘ’ಜೀವಿ. ತನ್ನ ಬದುಕು ತನಗಲ್ಲ ಅದು ಲೋಕದ ಹಿತಕೆ, ತನಗಾಗಿ ಮಾಡಿದ್ದು ತನ್ನೊಂದಿಗೆ ಮುಗಿದುಹೋಗುವುದು ಪರರಿಗಾಗಿ ದುಡಿದಿದ್ದು ತನ್ನ ನಂತರವೂ ಇರುವುದೆಂಬ ‘ಸಂಘ’ಜೀವನದ ಆದರ್ಶ ಬದುಕಿಗೆ ಹಿರಿಯರು ಬೋದಿಸಿದ ‘ವಿವೇಕ’ವಾಣಿ. ಕೊಡುಕೊಳ್ಳವಿಕೆಯ ಸಾಮಾಜಿಕ ವ್ಯವಹಾರದಲ್ಲಿ ಸಮಾಜ ನಮಗೆ ನೀಡಿದ ಉಡುಗೊರೆಗಳ ಮುಂದೆ ನಮ್ಮ ಕೊಡುಗೆಗಳು ಅತ್ಯಂತ ಅಲ್ಪ. ಎಷ್ಟೇ ಸಪ್ಪೆ ನೀರು ಸುರಿದರೂ ಸಮುದ್ರದ […]
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿ : ಜನಜಾಗೃತಿ ಸಭೆ
ಕುಂದಾಪುರ (ಏ, 18): ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿ ಈಗ ಮುಕ್ತಾಯ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಫ್ಲೈಓವರ್ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆಯನ್ನು ನವಯುಗ ಕಂಪೆನಿ ಎದುರಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಇದರ ಸಂಚಾಲಕರಾದ ಕೆಂಚನೂರು ಸೋಮಶೇಖರ ಶೆಟ್ಟಿ ಹೇಳಿದರು. ಅವರು ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಕುಂದಾಪುರದ ಆರ್ .ಎನ್. […]
ದೇಶದ ಮೊದಲ ಮಹಿಳಾ ಹಾಕಿ ಅಂಪೈರ್ ಕೊಡಗಿನ ಅನುಪಮಾ ಕೊರೊನಾಗೆ ಬಲಿ
ಮಡಿಕೇರಿ ( ಏ, 18) : ಕಳೆದ ಒಂದು ವಾರದಿಂದ ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದೇಶದ ಮೊದಲ ಮಹಿಳಾ ಅಂತರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಶಾಂತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನುಪಮಾ ಕೊನೆಯುಸಿರೆಳೆದಿದ್ದರೆ. ಕೊಡಗು ಜಿಲ್ಲೆ ನಾಪೋಕ್ಲು ಬೇತು ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಅನುಪಮಾ ನೂರಕ್ಕೂ ಮಿಕ್ಕಿ ಅಂತಾರಾಷ್ಟ್ರೀಯ ಹಾಕಿ ಪಂದ್ಯದ ತೀರ್ಪುಗಾರಿಕೆ ಮಾಡಿದ್ದ ಹೆಮ್ಮಯ […]
ಜೆಸಿಐ ಕುಂದಾಪುರ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ
ಕುಂದಾಪುರ (ಏ, 18) : ಜೆಸಿಐ ಕುಂದಾಪುರ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಏಪ್ರಿಲ್ 18 ರಂದು ಕುಂದಾಪುರದಲ್ಲಿ ನಡೆಯಿತು. ಹೊರ ವಲಯ ಅಧಿಕಾರಿ ಅಶೋಕ ತೆಕ್ಕಟ್ಟೆ ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೆ.ಸಿ.ಐ ಕುಂದಾಪುರ ಸಂಸ್ಥೆಯ ಸದಸ್ಯರು ಈ ಸಂದರ್ಭದಲ್ಲಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಜೆಸಿಐ ಇಂಡಿಯಾದ ಪೂರ್ವ ಕಾನೂನು ಸಲಹೆಗಾರರಾದ ಜೆ.ಸಿ ಶ್ರೀಧರ ಪಿ.ಎಸ್, ವಲಯಾಧಿಕಾರಿಗಳಾದ ಪ್ರಶಾಂತ್ ಹವಾಲ್ದಾರ್, ಕುಂದಾಪುರ ಅಧ್ಯಕ್ಷ […]
ಯುವ ಬ್ರಿಗೇಡ್ ಸ್ವಚ್ಚತಾ ಕಾರ್ಯದ ಪ್ರತಿಫಲ : ಸಂಪೂರ್ಣ ಮುಚ್ಚಿ ಹೊಗಿದ್ದ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯಕ್ಕೆ ಗ್ರಾಮಸ್ಥರಿಂದ ಕಟ್ಟೆ ಪೂಜೆ
ಕುಂದಾಪುರ (ಏ, 18) : 500 ವರ್ಷ ಇತಿಹಾಸ ಹೊಂದಿರುವ ಸಂಪೂರ್ಣ ಮುಚ್ಚಿ ಹೋಗಿರುವ ಬಸ್ರೂರಿನ ಗುಪ್ಪಿ ಸದಾನಂದ ದೇವಾಲಯವನ್ನು ಕಳೆದ ವರ್ಷ ಯುವಾಬ್ರಿಗೇಡ್ ವತಿಯಿಂದ ಊರವರ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.ತದ ನಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ಇದರ ಫಲವಾಗಿ ಇತ್ತೀಚೆಗೆ ಊರವರೆಲ್ಲ ಸೇರಿ ಕಟ್ಟೆ ಪೂಜೆ ನೆರವೇರಿಸಿದ್ದಾರೆ.ಮಣ್ಣಿನಲ್ಲಿ ಹುದುಗಿಹೋಗಿದ್ದ ಬಸ್ರೂರಿನ ಈ ಗುಪ್ಪಿ ಸದಾನಂದ ದೇವಾಲಯ ಇಂದು ಭಕ್ತಿ ಪ್ರಿಯ ಕ್ಷೇತ್ರವಾಗುತ್ತದೆ . […]
ಫ್ಯಾಶನ್ ಜುವೆಲ್ಲರ್ಸ ಕುಂದಾಪುರ : ಉದ್ಘಾಟನೆ
ಕುಂದಾಪುರ (ಎ, 16): ಕುಂದಾಪುರದ ವಿಠ್ಠಲ ನೇತ್ರಾಲಯ ರಸ್ತೆ ಯಲ್ಲಿ ನೂತನವಾಗಿ ಪ್ರಾರಂಭವಾದ ಫ್ಯಾಶನ್ ಜುವೆಲರ್ಸ್ ನ್ನು ನಾವುಂದ ರಿಚರ್ಡ್ ಅಲ್ಮೇಡಾ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀ ಸಿಲ್ವೆಸ್ಟರ್ ಡಿ’ ಅಲ್ಮೇಡಾ ಉದ್ಘಾಟಿಸಿದರು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ವಿವಿಧ ವಿನ್ಯಾಸಗಳಲ್ಲಿ ನಿರ್ಮಾಣ ಮಾಡಿ ಗ್ರಾಹಕರನ್ನು ಸಂತ್ರಪ್ತಿಗೊಳಿಸುವಲ್ಲಿ ಫ್ಯಾಶನ್ ಜುವೆಲರ್ಸ್ ಯಶಸ್ಸುಕಾಣಲಿದೆ ಎಂದು ಅವರು ಶುಭಹಾರೈಸಿದರು. ಕುಂದಾಪುರದ ವಿಠ್ಠಲ ನೇತ್ರಾಲಯದ ಡಾ|ಶ್ರೀನಾಥ್ ಕಾಮತ್ ಹಾಗೂ ತುಕಾರಾಮ್ ನಾಯಕ್ ಮುಖ್ಯ ಅತಿಥಿಗಳಾಗಿ […]










