ಪಶ್ಚಾತಾಪ ನಾನಾಗ ಕೂಗಿ ಅದೆಷ್ಟೊ ಬೈದಿದ್ದೆಬಾಯಿಯೆ ಆಯುಧವಾಗಿನೀನೆ ನನ್ನ ಶತ್ರು ಎಂಬಂತೆನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ ಬೖೆಗುಳವನು ಚೀಲದಲಿ ತುಂಬಿನಿನ್ನ ಮೈ ತುಂಬ ಸುರಿದಿದ್ದೆಕೋಪ ಎಂಬ ಕೆಂಡವನುನಿನ್ನ ಸುತ್ತಲು ಉದಿದ್ದೆ ಎಲ್ಲಾವನು ಮರೆತು ಪ್ರೀತಿ ಎಂಬಇಡೀ ಪರ್ವತ ವನ್ನು ಹೊತ್ತು ತಂದುಮತ್ತೆ ಮದ್ದಿಸುವ ಜೀವಿನೀನೊಬ್ಬನೆ ಅಪ್ಪ…. ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದನನ್ನ ಮುಖ ನಿನ್ನ ಎದೆಗಂಟಿದಾಗಸತ್ತು ಬದುಕಿದ ಅನುಭವ… ✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)
Month: April 2021
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]
ಹೋಟೆಲ್ ಬದುಕು
ಹೋಟೆಲ್ ಕೆಲಸ ಎಂದಾಕ್ಷಣ ಬೇರೆ-ಬೇರೆ ರೀತಿ ಆಲೋಚನೆ ಮಾಡುವ ಜನರಿದ್ದಾರೆ. ಅದೇನೋ ಗೊತ್ತಿಲ್ಲ ಕೆಲವರು ಹೋಟೆಲ್ ಕೆಲಸ ಎಂದರೆ ಸ್ವಲ್ಪ ತಾತ್ಸಾರದಿಂದ ಕಾಣುತ್ತಾರೆ. ಅಷ್ಟೇ ಅಲ್ಲ ಚುಚ್ಚುಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಹೆಣ್ಣು ಗಂಡಿನ ವಿಚಾರದಲ್ಲೂ ಕಡೆಗಣಿಸುವ ಮನೋಭಾವನೆಯಿಂದ ಕಾಣುತ್ತಾರೆ. ಆದರೆ ಕಡೆಗಣಿಸುವವರಿಗೆ ಅರಿವಿಲ್ಲ ಕೋಟ್ಯಂತರ ಜನರ ಜೀವನ ಇದರಿಂದ ಸಾಗುತ್ತಿದೆಯೆಂದು. ಹೌದು ಅದೆಷ್ಟೋ ಯುವಕರು ಕೆಲಸ ಹುಡುಕಿಕೊಂಡು ಊರುಗಳಿಂದ ಪಟ್ಟಣಕ್ಕೆ ವಲಸೆ ಬಂದಿರುತ್ತಾರೆ. ಆಗ ಅವರ ಕೈ ಹಿಡಿಯುವುದು ಈ […]
ಏಪ್ರಿಲ್ 12 ರಂದು ನಡೆಯ ಬೇಕಿದ್ದ ಮಂಗಳೂರು ವಿ. ವಿ. ಪದವಿ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ
ಮಂಗಳೂರು (ಏ, 10) : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಾದ ವ್ಯತ್ಯಯದಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಏಪ್ರಿಲ್ 12 ರಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲಿ ಮುಂದೆ ತಿಳಿಸಲಾಗುವುದು, ಉಳಿದ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯುತ್ತದೆ ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಪ್ರೋ. […]
ಸದಾನಂದ ಉಪ್ಪಿನ ಕುದ್ರು ರವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದೆ – ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಪ್ರತಿಕ್ರಿಯೆ
ವಂಡ್ಸೆ (ಏ, 10) : ಬಿ.ಜೆ.ಪಿ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ರವರು ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಡಿರುವ ಆರೋಪಕ್ಕೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಾನದಲ್ಲಿ ನನ್ನ ಬಗೆಗೆ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದು ಬಿ. ಎಂ. ಸುಕುಮಾರ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ
ಉಡುಪಿ (ಏ, 7) : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳು “ಯಕ್ಷಸಿರಿ ಶಾಶ್ವತ ಬಳಗ” ಎಂಬ ಹೆಸರಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿದ್ದು, ಇದರ ವತಿಯಿಂದ ಶ್ರೀ ಕೃಷ್ಣ ಲೀಲಾರ್ಣವ’ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಎರ್ಮಾಳಿನ ಶ್ರೀ ಲಕ್ಷ್ಮೀ ಜನಾರ್ಧನ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಿದ್ದರು. […]
ಶ್ರೀ ನಾಗ ದೇವಸ್ಥಾನ ಬೆಣ್ಗೆರೆ -ಗುಜ್ಜಾಡಿ 46ನೇ ನಾಗಮಂಡಲೋತ್ಸವ & ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ
ಗಂಗೊಳ್ಳಿ (ಏ, 10): ಕುಂದಾಪುರ ತಾಲ್ಲೂಕಿನ ಗುಜ್ಜಾಡಿ ಸಮೀಪದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಪ್ರಯುಕ್ತ ಏಪ್ರಿಲ್12 ರಿಂದ 15 ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವರ್ಷಂಪ್ರತಿಯಂತೆ ಈ ವರ್ಷವೂ ಮೇಸ್ತ ಸಮುದಾಯದವರು ಊರ ಜನತೆಯ ಸಹಕಾರದೊಂದಿಗೆ ನಾಗಮಂಡಲೋತ್ಸವವನ್ನು ಆಚರಿಸುತ್ತಿದ್ದು, ಈ ಬಾರಿ 46 ನೇ ನಾಗಮಂಡಲೋತ್ಸವವು ಇದೇ ಎಪ್ರಿಲ್ 14 14 ರಂದು ನಡೆಯಲಿದೆ . ಎಪ್ರಿಲ್ 14 […]
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ಮೂಂದೂಡಿಕೆ
ಮೈಸೂರು (ಏ, 10): ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಯನ್ನು ಎಪ್ರಿಲ್ 11 ರ ಭಾನುವಾರದಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಕೆ.ಎಸ್.ಇ.ಟಿ. (KSET) ಪರೀಕ್ಷೆಯನ್ನು ಮುಂದೂಡಲು ನಿರ್ಧರಸಿದೆ. ಕೆ.ಎಸ್.ಇ.ಟಿ. ನ ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ಸೈಟ್ನಲ್ಲಿ http://kset.uni-mysore.ac.in/ ಆಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ಗಮನಿಸಬೇಕೆಂದು ಎಂದು […]
ವೀಳ್ಯ ಶಾಸ್ತ್ರ ಹಾಗೂ ವಧು-ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ
ಕೋಟೇಶ್ವರ (ಏ, 8): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 2 ರಂದು ನಡೆಯಲಿರುವ 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಹಾಲಾಡಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಏಪ್ರಿಲ್ 8 […]










