ಬೈಂದೂರು (ಮೇ, 6): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನಿಯುಕ್ತಿಗೊಳಿಸಿ ಆದೇಶಿಸಿದೆ. ತಹಶೀಲ್ದಾರ್ ಬಸಪ್ಪ ಪೂಜಾರಿಯವರ ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆಸಲ್ಲಿದ್ದರು. ಕೆಲವು ತಿಂಗಳಿನಿಂದ ಬೈಂದೂರು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದೀಗ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಸೇವೆಯನ್ನು ಪಡೆಯಲು ತುಂಬಾ ಅನುಕೂಲವಾದಂತಾಗಿದೆ.
Day: May 7, 2021
ಕವಿತೆ – ರಾಣಿ
ಕವಿತೆ ಬಾರದ ನನಗೆ…ನೆನಪಿಗೆಅದು ಎಳೆ ಬಿಸಿಲಿನ ಮುಸ್ಸಂಜೆಯವೇಳೆಗೆ ಏಕೋ ಗೊತ್ತಿಲ್ಲ ನನಗೆಕವಿತೆ ಬಾರದ ನನಗೆ…. ನೆನಪಿಗೆ… ಹನಿ ಹನಿ ಇಬ್ಬನಿಯು ಮಳೆಹನಿಯಾಗಿ ಬೀಳುವ ಸಮಯದಲ್ಲಿಹಚ್ಚ ಹಸಿರಿನಿಂದ ಕೂಡಿದ ಹಚ್ಚಹಸಿರಿನಲ್ಲಿ ಕವಿತೆ ಬಾರದ ನನಗೆ…ನೆನಪಿಗೆ… ಹಸಿರ ಸೀರೆ ಉಟ್ಟು ಕೊಂಡು ನೀನುಕೈ ಗಳಿಗೆ ಹಸಿರ ಬಳೆ ಹಾಕಿ ಕೊಂಡುನಿಂತರೆ ಅದೇನೇ ಎಷ್ಟು ಸುಂದರವಾಗಿಕಾಣತಿ ಕವಿತೆ ಬಾರದ ನನಗೆ ….ನೆನಪಿಗೆ… ಕವಿತೆ ರಾಣಿ ನನ್ನ ಎರಡು ಕಣ್ಣುಗಳುಸಾಲದು ನಿನ್ನನ್ನು ನೊಡಲು ನನ್ನ ಕನಸಿನಕಲ್ಪನೆಯ […]
ಬೈಂದೂರು ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕ ಮಂಜೂರು
ಬೈಂದೂರು (ಮೇ, 6): ಬೈಂದೂರು ಸರ್ಕಾರಿ ಆಸ್ಪತ್ರೆಗೆ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಆಸ್ಪತ್ರೆಗೆ ಮಂಜೂರರಾಗಿರುವ ಹೊಸ ಆಮ್ಲಜನಕ ಉತ್ಪಾದನಾ ಘಟಕದ ಸ್ಥಳಪರಿಶೀಲನೆ ನಡೆಸಿದರು. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ ನಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಅವರು ಹೇಳಿದರು. ಹಾಗೆಯೇ ಶಾಸಕರು ಕೋವಿಡ್ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿ ಗಳು ಹಾಗೂ […]