ಕುಂದಾಪುರ (ಮೇ, 14) : ಜೆಸಿಐ ಕುಂದಾಪುರ ಸಿಟಿ ಘಟಕದ ಸತತ 16 ನೇ ದಿನದ ಲಾಕ್ ಡೌನ್ ಮಿಡ್ ಡೇ ಮಿಲ್ಸ್ ಮೇ13 ರಂದು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗು ಮಿಲ್ಲತ್ ಫೌಂಡೇಶನ್ ಕುಂದಾಪುರ ತಾಲೂಕು ಇವರ ಸಹಕಾರ ದೊಂದಿಗೆ ನಡೆಯಿತು. ಕುಂದಾಪುರ ಪರಿಸರದಲ್ಲಿ ಲಾರಿ ಚಾಲಕರಿಗೆ, ಕೂಲಿಕಾರ್ಮಿಕರಿಗೆ ,ಆಸ್ಪತ್ರೆ ರೋಗಿ ಗಳಿಗೆ,ಭಿಕ್ಷುಕರಿಗೆಹಾಗೂ ವೃದ್ದರಿಗೆ ಸುಮಾರು 280 ಕ್ಕಿಂತಲೂ ಹೆಚ್ಚು ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ […]
Day: May 14, 2021
ಬಾಳ ಸಾರಥಿ
ಅಂದು ಆ ಶಾಲೆಯಲ್ಲೊಂದು ಸಂಭ್ರಮದ ವಾತಾವರಣ. ಎಲ್ಲರೂ ಸಡಗರದಿಂದ ಸಮಾರಂಭಕ್ಕಾಗಿ ತಯಾರಿ ನಡೆಸುವ ತರಾತುರಿಯಲ್ಲಿದ್ದರು. ಎಲ್ಲವೂ ಸಜ್ಜಾಗುವ ವೇಳೆಯಲ್ಲಿ ಗಣ್ಯರೂ ಆಗಮಿಸಲಾರಂಭಿಸಿದ್ದರು. ಕೆಲ ಕ್ಷಣದಲ್ಲೇ ಸಮಾರಂಭದ ಕೇಂದ್ರ ಬಿಂದುವಾದ “ದಿಶಾ ತ್ರಿವೇಣಿ” ತನ್ನ ಜೀವನದ ಅವಿಭಾಜ್ಯ ಅಂಗವಾದ ತಾಯಿಯೊಂದಿಗೆ ಸಮಾರಂಭದ ಸ್ಥಳಕ್ಕೆ ಆಗಮಿಸಿ ತನ್ನೆಲ್ಲಾ ಗುರುವೃಂದರನ್ನು ಮಾತನಾಡಿಸಿ ಆಶೀರ್ವಾದ ಪಡೆದಿದ್ದಳು. ಕೊಂಚ ಸಮಯದಲ್ಲೇ ಸಮಾರಂಭ ಆರಂಭವಾಗಿತ್ತು. ವೇದಿಕೆಯ ಮೇಲೆ ಗಣ್ಯಾತೀಗಣ್ಯರ ನಡುವೆ ತನ್ನ ಮಗಳನ್ನು ಕಂಡ ತ್ರಿವೇಣಿಯವರ ಕಣ್ಣಲ್ಲಿ ಆನಂದಬಾಷ್ಪ. […]
ಮೊದಲು ನೀ ಬದಲಾಗು
ವಾಸ್ತವದ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದಾಗ ನನಗೆ ನೆನಪಿಗೆ ಬರುವುದು “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತು. ನಮ್ಮ ದೇಶದಲ್ಲಿ ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಬೋಧಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಭಾಗಶಃ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆಯೆನೋ ಎಂದೆನಿಸುತ್ತಿದೆ. ಎತ್ತ ನೋಡಿದರೂ ಹಸಿರು ಗಿಡಮರಗಳನ್ನು ಕಿತ್ತೆಸೆದು, ಜಲಮಾಲಿನ್ಯ, ವಾಯುಮಾಲಿನ್ಯ ಮಾಡಿ ಮನುಷ್ಯ ಅಹಂಕಾರದಲ್ಲಿ ಮೆರೆದ!. ಹಾಗಾಗಿ ಅದೇ ಪ್ರಕ್ರತಿ ಇಂದು ಮುನಿಸಿಕೊಂಡು ನಾವು ಆಕ್ಸಿಜನ್ ಗಾಗಿ ಪರದಾಡುವ ಸ್ಥಿತಿಯನ್ನು ತಂದೊಡ್ಡಿದೆ. […]
ಮರಣ ಬಲೆ
ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ “ಮರಣ ಬಲೆ” ಕೂಡಾ ಒಂದು. ಹೆಸರೇ ಅರ್ಥೈಸುವಂತೆ ಅಜಾಗರೂಕತೆ, ಮರಣ-ಮಸಣಕ್ಕೊಯ್ಯುವಂತದ್ದು. ಅಲೆಗಳಬ್ಬರ ಹೆಚ್ಚಿದ್ದಾಗ ಮಾತ್ರ ಬಲೆ ನೀರಿನಾಳಕ್ಕೆ ಇಳಿಯುತ್ತದೆ. ಬಲೆ ಹೊತ್ತು ಅಲೆ ದಾಟಿ ಕೈ ಸಡಿಲಿಸುವಲ್ಲಿ ಮೀನುಗಾರ ನಿಪುಣನಾಗಿರಲೇ ಬೇಕು. ಹೆಚ್ಚಾಗಿ ಆಳ ಸಮುದ್ರದ ಮೀನುಗಾರಿಕೆಗೆ ಮಳೆಗಾಲದ ರಜೆಯಿತ್ತಾಗ ಈ ‘ಮರಣಬಲೆ’ ಯನ್ನು ಅಣಿಗೊಳಿಸಲಾಗುತ್ತದೆ. ಮುಳ್ಳು ಬಿಡಿಸ ಬಲ್ಲವಗೆ ಯಾವ ಮೀನಾದರೇನು? ಅಲೆಗೆ ಎದೆಯೊಡ್ಡುವವಗೆ ಯಾವ ಬಲೆಯಾದರೇನು? ವೀರ ಕಳೆ ಮೊಗದಲ್ಲಿದ್ದರಷ್ಟೇ ಸಾಕು… ಅದೋ […]
ಕುಂದಾಪುರ ಲಸಿಕೆ ಕೇಂದ್ರಕ್ಕೆ ಡಿವೈಎಸ್ಪಿ ಕೆ. ಶ್ರೀಕಾಂತ್ ಭೇಟಿ
ಕುಂದಾಪುರ (ಮೇ. 13) : ಕುಂದಾಪುರದ ಬೋರ್ಡ್ ಹೈಸ್ಕೂಲ್ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಕಲಾಕ್ಷೇತ್ರ, ಸೇವಾ ಭಾರತಿ, ಬಿಜೆಪಿ ಹಾಗೂ ಕಾಂಗ್ರೆಸ್ ಸ್ವಯಂ ಸೇವಕರ ಸಹಯೋಗದೊಂದಿಗೆ ಕರೋನಾ ಲಸಿಕೆ ನೀಡುವಿಕೆ ಹಲವು ದಿನಗಳಿಂದ ನಡೆಯುತ್ತಿದ್ದು ,ಗುರುವಾರದಂದು 18 ವರ್ಷಚ ಮೇಲ್ಪಟ್ಟು ನೋಂದಣಿ ಮಾಡಿಸಿಕೊಂಡು ಮೊಬೈಲ್ಗೆ ಸಂದೇಶ ಬಂದ 150 ಮಂದಿಗೆ ಕೊವಿಶೀಲ್ಡ್ ಲಸಿಕೆ ನೀಡಲಾಯಿತು. ಲಸಿಕೆ ನೀಡುತ್ತಿರುವ ಸ್ಥಳಕ್ಕೆ ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ಭೇಟಿ ನೀಡಿ ವ್ಯವಸ್ಥೆಯ […]
ಬೈಂದೂರು ಶಾಸಕರ ಗೃಹ ಕಛೇರಿಗೆ ನೂತನ ತಹಶೀಲ್ದಾರ್ ಭೇಟಿ
ಬೈಂದೂರು (ಮೇ,13): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾಲಕ್ಷ್ಮೀ ಹೆಚ್. ಎಸ್ ರವರು ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಯವರ ಗೃಹಕಛೇರಿಗೆ ಮೇ 13ರಂದು ಭೇಟಿ ನೀಡಿದರು. ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾ ಲಕ್ಷ್ಮಿ ಹೆಚ್ ರವರನ್ನು ಶಾಸಕರು ಶುಭ ಹಾರೈಸಿ ತಾಲೂಕಿನ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕೋವಿಡ್ ನಿರ್ವಹಣೆ ಹಾಗೂ ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗವಾಗಿರುವ ಬೈಂದೂರು ಕ್ಷೇತ್ರದ ಜನತೆಯ ಆಡಳಿತಾತ್ಮಕ […]










