ಇಪ್ಪತ್ತು ವರ್ಷಗಳ ಹಿಂದೆ ನಾನು SSLC ಯಲ್ಲಿ ಇರುವಾಗ ನನ್ನ ಹಿರಿಯಣ್ಣ ಒಂದು ಸಣ್ಣ ದೋಣಿ ತಂದಿದ್ರು. ನಾನು, ಅಣ್ಣ ಮತ್ತು ನನ್ನ ಗೆಳೆಯ ಹರೀಶ ಸೇರಿ ದಿನಾಲೂ ಮೀನುಗಾರಿಕೆಗೆ ಹೋಗುತ್ತಿದ್ದೆವು. ಬೆಳಿಗ್ಗೆ ಮೂರಕ್ಕೆ ಹೊರಟು ಒಂಬತ್ತು ಗಂಟೆಗೆ ವಾಪಸಾಗುತ್ತಿದ್ದೆವು. ನನಗೆ ಹತ್ತು ಗಂಟೆಗೆ ಶಾಲೆಗೆ ಮುಟ್ಟಬೇಕಿದ್ದ ಕಾರಣ, ಬೇಗ ಬರುತ್ತಿದ್ದೆವು. ಶಾಲೆಗೆ ರಜೆ ಇರುವ ದಿನ ಮಧ್ಯಾಹ್ನದವರೆಗೆ ಫಿಶಿಂಗ್. ಕೆಲವು ದಿನ ಸಂಜೆ ಹೋದರೆ, ರಾತ್ರಿ ವಾಪಸ್ಸು ಬರುತ್ತಿದ್ದೆವು. […]
Day: May 15, 2021
ದಡವಿಲ್ಲದ ದೋಣಿಗಳು
ಇನ್ನೂ ಅರ್ಧಗಂಟೆ ಅಂದಿದ್ದರೆ ಆದಷ್ಟು ದೋಣಿಗಳು ಹೇಳಹೆಸರಿಲ್ಲದಂತೆ ಸಮುದ್ರದ ಒಡಲು ಸೇರುತ್ತಿದ್ದವು. “ತೀರ” ಅನ್ನುವಂತಿದ್ದ ಕಡಲ ದಂಡೆ ರಕ್ಕಸ ಅಲೆಗಳಿಗೆ ರಕ್ಷಣೆಯಿಲ್ಲದೆ ತಾವಾಗೇ ಸೋಲನ್ನಪ್ಪಿದ್ದವು. ಕೊರೆತಕ್ಕೆ ಸವೆಯುತ್ತಿದ್ದ ಮರಳನ್ನು ಹಿಡಿದಿಡಲಾಗದೆ ಕರಾವಳಿಗುಂಟ ಮರಗಿಡಗಳು ನೀರುಪಾಲಾದವು. ಕೋಟಾದ ಮಣೂರು ಪಡುಕರೆಯಲ್ಲಿ ಕಂಡುಬಂದ ದೃಶ್ಯಗಳಿವು. ಕರಾವಳಿಯುದ್ದಕ್ಕೂ ಇಂದು ಇದೇ ಗೋಳು. ಹರೀಶ್ ಕಾಂಚನ್, ಮುದ್ದುರಾಧ
ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಪ್ರದೇಶಕ್ಕೆ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ
ಬೈಂದೂರು (ಮೇ, 15) : ತೌಖ್ತೆ ಚಂಡಮಾರುತದ ತೀವ್ರತೆಯಿಂದ ಕಡಲ್ಕೊರೆತಕ್ಕೆ ಒಳಗಾದ ಬೈಂದೂರು ಕ್ಷೇತ್ರದ ಕಡಲ ತೀರದ ಭಾಗಗಳಿಗೆ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿದರು. ಚಂಡ ಮಾರುತದಿಂದಾಗಿ ಸಂಭವಿಸಿದ ಹಾನಿಗಳ ಕುರಿತು ಪರಿಶೀಲನೆ ನಡೆಸಿ ಮುಖ್ಯಮಂತ್ರಿಗಳು ಮತ್ತು ಸಂಸದ ಬಿ.ವೈ ರಾಘವೇಂದ್ರರ ಗಮನಕ್ಕೆ ತಂದು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜೆಸಿಐ ಕುಂದಾಪುರ ಸಿಟಿ : 17 ನೇ ದಿನದ ಲಾಕ್ ಡೌನ್ ಊಟ ವಿತರಣೆ
ಕುಂದಾಪುರ (ಮೇ,15) :ಜೆಸಿಐ ಕುಂದಾಪುರ ಸಿಟಿ ಘಟಕ ಸತತ 17 ನೇ ದಿನದ ಲಾಕ್ ಡೌನ್ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಡಾ|ಉಮೇಶ್ ಪುತ್ರನ್ ರವರ ಪ್ರಾಯೋಜತ್ವ ದಲ್ಲಿ ಕುಂದಾಪುರ ಪರಿಸರದ ಕೂಲಿಕಾರ್ಮಿಕರಿಗೆ ಆಸ್ಪತ್ರೆಯ ರೋಗಿಗಳಿಗೆ, ಲಾರಿ ಚಾಲಕರು ಸೇರಿದಂತೆ ಸುಮಾರು 220 ಕ್ಕಿಂತಲೂ ಹೆಚ್ಚು ಜನ ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ […]
ತೌಖ್ತೇ ಚಂಡಮಾರುತ ಅಬ್ಬರ – ಗೋಪಾಡಿ ಕಡಲತೀರದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಕುಂದಾಪುರ (ಮೇ. 15) : ತೌಖ್ತೇ ಚಂಡಮಾರುತ ಅಬ್ಬರ ಕರಾವಳಿ ಭಾಗದ ಕಡಲ ತೀರದಲ್ಲಿ ಅಪಾರ ಹಾನಿಯನ್ನು ಉಂಟುಮಾಡಿದ್ದು,ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.. ದಿನದಿಂದ ದಿನಕ್ಕೆ ಸಮುದ್ರದ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕಡಲತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದೆ. ಮೇ 15ರ ಸಂಜೆ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರೋಜ ಪೂಜಾರಿ ಹಾಗೂ ಸದಸ್ಯ ಪ್ರಭಾಕರ್ ಯಾನೆ ಪ್ರಕಾಶ್ […]