ಕತ್ತಲು ಆಗಷ್ಟೇ ಕಳಚಿ, ಭೂಮಿ ಬೆಳಕಿಗೆ ಮೈಯೊಡ್ಡುವುದರಲ್ಲಿತ್ತು. ನೆರೆ ಮನೆಯ ಬಚ್ಚಲಿನ ಚಿಮುಣಿ ಚಟ ಚಟ ಸದ್ದಿನೊಂದಿಗೆ ಕರ್ರನೆಯ ಹೊಗೆಯನ್ನು ಸೂಸುತ್ತಾ, ಊರಿಗೆಲ್ಲ ಮಂಜಿನಂತ ಮಬ್ಬನ್ನು ಕವಿಯುವಂತೆ ಮಾಡಿತ್ತು. ವಾರವಿಡೀ ದುಡಿದು ದಣಿದ ಮಂದಿಗೆಲ್ಲ ಮೈಮುರಿಯಲೆಂದೆ ಅಂದು ಭಾನುವಾರ ಬೇರೆ!!! ಅವರೆಲ್ಲ ಮಗ್ಗಲು ಮಗಚಿ, ಮೈ ಮುರಿಯುವ ಹೊತ್ತು ದೂರವೇ ಇತ್ತು. ಮಂದಿ ಕಣ್ಣರಳಿಸುವ ಮುನ್ನವೆ ಅಲ್ಲೊಂದು ಜೀವ ಕಣ್ಮುಚ್ಚಿ , ಬದುಕಿನ ಓಟಕ್ಕೆ ವಿರಾಮವಿಟ್ಟಿತ್ತು. ಮುಂಜಾವಿನ ಮೌನಕ್ಕೆ ಸೆಡ್ಡು […]
Day: May 17, 2021
ಸಮಾಜಸೇವಕ ಗೋವಿಂದ ಬಾಬು ಪೂಜಾರಿಯವರಿಂದ 350 ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಸರಬರಾಜು
ಬೈಂದೂರು (ಮೇ, 13): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದ ಇದರ ಪ್ರವರ್ತಕರಾದ ಉದ್ಯಮಿ, ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ನೇತ್ರತ್ವದಲ್ಲಿ ಬೈಂದೂರು ತಾಲೂಕಿನ ಅಳವೆಕೋಡಿ, ತಾರಪತಿ, ಪಡುವರಿ ಹಾಗೂ ಉಪ್ಪುಂದ ವ್ಯಾಪ್ತಿಯ ಸುಮಾರು 350ಕ್ಕೂ ಹೆಚ್ಚಿನ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಬೇಸಿಗೆ ಸಂದರ್ಭದಲ್ಲಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎರುರಾಗುತ್ತಿದ್ದು, ಕಳೆದ ವರ್ಷವೂ ಸಹ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ಉಪ್ಪುಂದದ ವತಿಯಿಂದ ಕುಡಿಯುವ ನೀರಿನ […]
ಪಡು ಗೋಪಾಡಿಯಲ್ಲಿ ವಿದ್ಯುತ್ ಕಡಿತ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಭಾಗಿಯಾದ ಗ್ರಾಮಸ್ಥರು
ಕೋಟೇಶ್ವರ (ಮೇ, 17): ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪಡು ಗೋಪಾಡಿಯಲ್ಲಿ ಸತತ ಎರಡು ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು ಗ್ರಾಮಸ್ಥರಿಗೆ ದಿನನಿತ್ಯದ ಕಾರ್ಯಚಟುವಟಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕಾಂಚನ್ ನೇತೃತ್ವದ ತಂಡ ಮೆಸ್ಕಾಂ ಸಿಬ್ಬಂದಿ ಜೊತೆ ಸೇರಿ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡರು. ಈ ತಂಡ ಇಡೀ ದಿನ ವಿದ್ಯುತ್ ಕಂಬಗಳ ಸುತ್ತ ಬೆಳೆದಿರುವ ಮರ-ಗಿಡಗಳ ಗೆಲ್ಲುಗಳನ್ನು ಕತ್ತರಿಸಿ ಮೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಿ ಗ್ರಾಮಸ್ಥರಿಂದ […]










