ಪ್ರವೀಣ ರಾಘವನನ್ನ ಕಂಡವನೆ ‘ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ. ಅಂದು ಇಡೀ ಶಾಲೆಗೆ ಶಾಲೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು. ಶಾಲೆಯ ಸೂರಿನ ಮೇಲೆ, ಊರಿಗೆ ಮುಖಮಾಡಿ ಕಟ್ಟಿರುವ, ಉದ್ದ ಮೂತಿಯ ಧ್ವನಿವರ್ಧಕಗಳು , ಒಮ್ಮೊಮ್ಮೆ ಇಂಪಾದ ಹಾಡುಗಳನ್ನು ಸೂಸಿದರೆ, ಮತ್ತೊಮ್ಮೆ ಯಾವುದೊ […]
Day: May 21, 2021
ಆದಿ ಕವಿ ಪಂಪ ರಾಜ್ಯ ಪ್ರಶಸ್ತಿ ಪಡೆದ ಜಯಶ್ರೀ ಅವಟಿ
ಸಾಹಿತ್ಯದಲ್ಲಿ ಸಾಧನೆ ಮಾಡುವುದು ಒಂದು ವಿಶಿಷ್ಟವಾದ ಕಲೆ. ಈ ಸಾಹಿತ್ಯ ಎನ್ನುವುದು ಯಾರಿಗೆ ಯಾವ ಸಂಧರ್ಭದಲ್ಲಿ ಹೇಗೆ ಒದಗಿ ಬರುತ್ತದೆಂದು ಯಾರಿಗೂ ಹೇಳಲು ಸಾಧ್ಯವಾಗದು. ಇನ್ನೂ ಮನುಷ್ಯ ಭೂಮಿ ಮೇಲೆ ಜನಿಸಿದ ಮೇಲೆ ನಾವು ಏನಾದರೊಂದು ಸಾಧನೆ ಮಾಡಬೇಕೆಂದು ಆತ್ಮ ವಿಶ್ವಾಸ ಇದ್ದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎನ್ನುವುದನ್ನು ಕಂಡುಕೊಂಡವರು ಕುಮಾರಿ ಜಯಶ್ರೀ. ತಮ್ಮ ಶಿಕ್ಷಣ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳಸಿ ಕೊಂಡು ರಾಜ್ಯ ಪ್ರಶಸ್ತಿ ಪಡೆದ ಬೆಳಗಾವಿ […]
ಬಡ ರೈತನ ಮಗಳಾಗಿ ಸಮಾಜ ಸೇವೆ ಜೊತೆಗೆ ಬಡಮಕ್ಕಳಿಗೆ ಜ್ಞಾನ ದಾಸೋಹಿನಿಯಾದ ಕುಮಾರಿ ಬಿಂದು
ನಾವು ಮಾನವರಾಗಿ ಧರೆಗಿಳಿದು ಬಂದ ಮೇಲೆ ಮನೆಯವರಿಂದ ಪಡೆದ ನಾಮಕರಣ ಜೊತೆಗೆ ಬಾಲ್ಯ, ಶಿಕ್ಷಣ, ಮದುವೆ, ಜೀವನ ಮಾಡಿಕೊಂಡು ಮರಣವೆಂಬ ಮೂರು ಅಕ್ಷರದಿಂದ ಬದುಕಿನ ಪಯಣ ನಿಲ್ಲಿಸುತ್ತೇವೆ. . ನಾವು ಮನುಷ್ಯರಾಗಿ ಮರಣವೆಂಬ ಮೂರು ಅಕ್ಷರದ ಬಿರುದನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ನಾವು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಮಾಜ ಸೇವೆ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು, ನಾವು ಇನ್ನೊಬ್ಬರಿಗೆ ಆದರ್ಶ ವ್ಯಕ್ತಿಯಾಗಿ, ಬಡವರಿಗೆ ಮಾರ್ಗದರ್ಶಕರಾಗಿ ಬದುಕಬೇಕು.ಸಮಾಜ ಸೇವೆ ಎನ್ನುವ ಪದ […]
ನಮ್ಮೂರು ನಮಗೆ ಚಂದ
ಭೂಮಿ ತಾಯಿ ಸುತ್ತಲೂ ಹಸಿರನ್ನು ಹೊದಿಕೆ ಮಾಡಿಕೊಂಡು ಕಣ್ಣ್ಮನ ನಾಚುವಂತೆ ಮನಸ್ಸಿಗೆ ಮುದ ನೀಡುತ, ಒಂದು ಕಡೆ ನೋಡಿದರೆ ಶ್ರೀ ಮೂಕಾಂಬಿಕಾ ಅಭಯಾರಣ್ಯ, ಮಧ್ಯದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಹಲವು ಸಾವಿರಾರು ಪ್ರಭೇದದ ಔಷಧಿ ಸಸ್ಯರಾಶಿಯಿಂದ ಕಂಗೊಳಿಸುವ ಸಸ್ಯಕಾಶಿ, ಮತ್ತೊಂದು ಕಡೆಯಿಂದ ನೋಡಿದರೆ ಕೊಡಚಾದ್ರಿ ಬೆಟ್ಟದ ತುತ್ತತುದಿಯ ಮಧ್ಯದಿಂದ ರುದ್ರ ರಮಣೀಯವಾಗಿ ಅಂಕುಡೊಂಕಾಗಿ ಹಾಲ್ನೊರೆಯಂತೆ ಜುಳು ಜುಳು ಶಬ್ದನಾದದಂತೆ ಹರಿಯುವ ನೀರನಲ್ಲಿ ಲಕ್ಷಾಂತರ ವಿವಿಧ ಬಣ್ಣ,ಪ್ರಭೇದದ ಜಲಚರಗಳ ಬದುಕಿಗೆ ಆಹಾರ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎಸ್ ಪರೀಕ್ಷೆಯಲ್ಲಿ ಶೇ100 ಫಲಿತಾಂಶ
ಕುಂದಾಪುರ (ಮೇ, 20): ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ,ಸಿಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ (ಸ್ಪೇಸ್) ಯ ವಿದ್ಯಾರ್ಥಿಗಳು ಇನ್ಸಿಟ್ಯೂಟ್ ಆಫ್ ಕಂಪೆನಿ ಸಕ್ರೆಟರಿ ಆಫ್ ಇಂಡಿಯಾ ಮೇ 2021 ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ ಸಿಎಸ್ಇಇಟಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ. ಪರೀಕ್ಷೆ ಬರೆದ 5 ವಿದ್ಯಾರ್ಥಿಗಳಾದ ದಿಶಾ (131), ಜಯಲಕ್ಷ್ಮಿ (126), ದೀಪಿಕಾ (108), […]