ಕುಂದಾಪುರ (ಮೇ, 8) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೈ ಓವರ್ ನಲ್ಲಿ ಹಲವು ದಿನಗಳಿಂದ ವಾಹನಗಳು ಓಡಾಟ ಪ್ರಾರಂಭಿಸಿದೆ.ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ.ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರಿನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ ಸರ್ವಿಸ್ ರಸ್ತೆಯನ್ನೇ ಹಿಡಿಯಬೇಕಾಗುತ್ತದೆ. ಏಕೆಂದರೆ ಹಂಗಳೂರಿನಲ್ಲಿ ಪ್ರಾರಂಭವಾಗುವ ಫ್ಲೈಓವರ್ ರಸ್ತೆಯನ್ನು ನೀವು ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಬಳಿ. […]
Month: May 2021
ಭಾರತವನ್ನು ಇಂದು ಕೊರೊನಾ ಮಾತ್ರ ಕೊಲ್ಲುತ್ತಿಲ್ಲ, ಇಂದು ಭ್ರಷ್ಟರೂ ಭಾರತವನ್ನು ಕೊಲ್ಲುತ್ತಿದ್ದಾರೆ!!!
ಇಡೀ ಜಗತ್ತಿಗೆ ಮಾನವೀಯತೆಯ ಪಾಠ ಮಾಡಿದ ನಾವು ….ಈಗ ಮಾಡುತ್ತಿರುವುದಾದರು ಏನು? ಕರೋನಾ ಸಂಕಷ್ಟ ದ ಪರಿಸ್ಥಿತಿಯ ಈ ಸಂಧರ್ಬದಲ್ಲಿನ ಮಾನವೀಯತೆ ಮತ್ತು ಪ್ರಾಮಾಣಿಕತೆಯ ಕುರಿತಾದ ಅವಲೋಕನ –🔶ವೈದ್ಯರು ವಿಟಮಿನ್ ‘ಸಿ’ ಹೆಚ್ಚು ಸೇವಿಸಲು ಸಲಹೆ ನೀಡಿದಾಗ, ನಿಂಬೆಹಣ್ಣನ್ನು ಕೆ.ಜಿ.ಗೆ 50 ರೂ. ಬದಲು 150 ರೂ.ಗೆ ಮಾರಾಟ ಮಾಡುವವರು. ನಾವೇ🙄 🔶700-800 ರೂ. ದರದ ಆಕ್ಸಿಮೀಟರ್ ಗಳನ್ನ 3,000 ರೂ.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು. ಇದು ನಾವೇ! […]
ಜೆ.ಸಿ.ಐ. ಕುಂದಾಪುರ ಸಿಟಿ ವತಿಯಿಂದ 10 ನೇ ದಿನದ ಸಹಾಯ ಹಸ್ತ
ಕುಂದಾಪುರ (ಮೇ, 7): ಕಳೆದ ಹತ್ತು ದಿನದಿಂದ ಜೆ.ಸಿ.ಐ. ಕುಂದಾಪುರ ಸಿಟಿ ವತಿಯಿಂದ ಕುಂದಾಪುರದ ಹಲವು ಕಡೆಯಲ್ಲಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಸಿದವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ನಡೆಯುವ ಈ ಸೇವಾ ಕಾರ್ಯದಲ್ಲಿ ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಹಾಗೂ ಜೆ.ಸಿ.ಐ. ಕುಂದಾಪುರ […]
ಬೈಂದೂರು-ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ನೇಮಕ
ಬೈಂದೂರು (ಮೇ, 6): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನಿಯುಕ್ತಿಗೊಳಿಸಿ ಆದೇಶಿಸಿದೆ. ತಹಶೀಲ್ದಾರ್ ಬಸಪ್ಪ ಪೂಜಾರಿಯವರ ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆಸಲ್ಲಿದ್ದರು. ಕೆಲವು ತಿಂಗಳಿನಿಂದ ಬೈಂದೂರು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದೀಗ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಸೇವೆಯನ್ನು ಪಡೆಯಲು ತುಂಬಾ ಅನುಕೂಲವಾದಂತಾಗಿದೆ.
ಕವಿತೆ – ರಾಣಿ
ಕವಿತೆ ಬಾರದ ನನಗೆ…ನೆನಪಿಗೆಅದು ಎಳೆ ಬಿಸಿಲಿನ ಮುಸ್ಸಂಜೆಯವೇಳೆಗೆ ಏಕೋ ಗೊತ್ತಿಲ್ಲ ನನಗೆಕವಿತೆ ಬಾರದ ನನಗೆ…. ನೆನಪಿಗೆ… ಹನಿ ಹನಿ ಇಬ್ಬನಿಯು ಮಳೆಹನಿಯಾಗಿ ಬೀಳುವ ಸಮಯದಲ್ಲಿಹಚ್ಚ ಹಸಿರಿನಿಂದ ಕೂಡಿದ ಹಚ್ಚಹಸಿರಿನಲ್ಲಿ ಕವಿತೆ ಬಾರದ ನನಗೆ…ನೆನಪಿಗೆ… ಹಸಿರ ಸೀರೆ ಉಟ್ಟು ಕೊಂಡು ನೀನುಕೈ ಗಳಿಗೆ ಹಸಿರ ಬಳೆ ಹಾಕಿ ಕೊಂಡುನಿಂತರೆ ಅದೇನೇ ಎಷ್ಟು ಸುಂದರವಾಗಿಕಾಣತಿ ಕವಿತೆ ಬಾರದ ನನಗೆ ….ನೆನಪಿಗೆ… ಕವಿತೆ ರಾಣಿ ನನ್ನ ಎರಡು ಕಣ್ಣುಗಳುಸಾಲದು ನಿನ್ನನ್ನು ನೊಡಲು ನನ್ನ ಕನಸಿನಕಲ್ಪನೆಯ […]
ಬೈಂದೂರು ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕ ಮಂಜೂರು
ಬೈಂದೂರು (ಮೇ, 6): ಬೈಂದೂರು ಸರ್ಕಾರಿ ಆಸ್ಪತ್ರೆಗೆ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಆಸ್ಪತ್ರೆಗೆ ಮಂಜೂರರಾಗಿರುವ ಹೊಸ ಆಮ್ಲಜನಕ ಉತ್ಪಾದನಾ ಘಟಕದ ಸ್ಥಳಪರಿಶೀಲನೆ ನಡೆಸಿದರು. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ ನಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಅವರು ಹೇಳಿದರು. ಹಾಗೆಯೇ ಶಾಸಕರು ಕೋವಿಡ್ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿ ಗಳು ಹಾಗೂ […]
ಮೇ, 10 ರಿಂದ ಮಂಗಳೂರು ವಿ.ವಿ. ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಪ್ರಾರಂಭ
ಮಂಗಳೂರು (ಮೇ, 6) : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳ ದ್ವಿತೀಯ, ಚತುರ್ಥ ಹಾಗೂ ಆರನೇ ಸೆಮಿಸ್ಟರ್ ತರಗತಿಗಳನ್ನು ಮೇ, 10ರಿಂದ ಆನ್ ಲೈನ್ ಮೂಲಕ ನಡೆಸಲು ನಿರ್ಣಯವನ್ನು ಕೈಗೊಳ್ಳಲಾಗಿದೆ. ಮೇ, 4 ರಂದು ಆನ್ ಲೈನ್ ಮುಖಾಂತರ ನಡೆದ ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಬಾಕಿ ಇರುವ ಪ್ರಥಮ, ತ್ರತೀಯ ಹಾಗೂ ಐದನೇ ಸೆಮಿಸ್ಟರ್ ನ ಪರೀಕ್ಷೆಗಳ ದಿನಾಂಕವನ್ನು […]
ಕುಂದಾಪುರ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ -ಚಿಂತಕ ಡಾ. ಭಾಸ್ಕರ ಮಯ್ಯ ನಿಧನ
ಕುಂದಾಪುರ (ಮೇ, 6): ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮ ಮೂಲದ ಹಿರಿಯ ಪ್ರಾಧ್ಯಾಪಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಜಿ. ಭಾಸ್ಕರ್ ಮಯ್ಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 4 ದಿನಗಳಿಂದ ಅವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಡಾ.ಜಿ.ಭಾಸ್ಕರ್ ಮಯ್ಯ ಅವರು ಕಮ್ಯುನಿಸ್ಟ್ ಚಿಂತಕರಾಗಿ ದೇಶದ ನಾನಾ ಭಾಗಗಳಲ್ಲಿ ಉಪನ್ಯಾಸ ಕಾರ್ಯಕ್ರಮ […]
ಕುಂದ ಕನ್ನಡಿಗರ ಮನ ಗೆದ್ದ “ನಮ್ಮ ಕುಂದಾಪುರ” ಫೇಸ್ಬುಕ್ ಗ್ರೂಪ್ ಯಶಸ್ವಿ 12ನೇ ವರ್ಷಕ್ಕೆ ಪಾದಾರ್ಪಣೆ
ಅಮೆರಿಕದ ಮಾರ್ಕ್ ಜುಕರ್ಬರ್ಗ್ 2004 ರಲ್ಲಿ ಹುಟ್ಟುಹಾಕಿದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಾಗತಿಕವಾಗಿ ಹರಡಿಕೊಂಡಿರುವ ಈ ಫೇಸ್ಬುಕ್ ಇಂದು ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಫೇಸ್ಬುಕ್ ಬಳಕೆದಾರರು ಬೇರೆಬೇರೆ ಉದ್ದೇಶವನ್ನಿಟ್ಟುಕೊಂಡು ಫೇಸ್ಬುಕ್ ಖಾತೆಗಳನ್ನು , ಫೇಸ್ಬುಕ್ ಪೇಜ್ ಹಾಗೂ ಗ್ರೂಪ್ ಗಳನ್ನು ತೆರೆಯುತ್ತಾರೆ. ಆಮೂಲಕ ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ನಮ್ಮ ದೇಶದಲ್ಲೂ ಕೋಟ್ಯಾಂತರ ಫೇಸ್ ಬುಕ್ ಬಳಕೆದಾರರಿದ್ದಾರೆ. ಅದೆಷ್ಟೋ ಫೇಸ್ಬುಕ್ ಖಾತೆಗಳು, ಗ್ರೂಪ್ ಹಾಗೂ […]
ಮಹಾಲಕ್ಷ್ಮೀ ಬ್ಯಾಂಕ್ ಕೋ- ಆಪರೇಟಿವ್ ಬ್ಯಾಂಕ್ : ಕೋವಿಡ್ ಸೋಂಕಿತ ಸದಸ್ಯರ ಆರೋಗ್ಯ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
ಉಡುಪಿ (ಮೇ, 5): ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೊಳಗಾದ ತಮ್ಮ ಬ್ಯಾಂಕಿನ ಸದಸ್ಯರುಗಳಿಗೆ ವೈದ್ಯಕೀಯ ಸಹಾಯ ಧನ ನೀಡುವ ಯೋಜನೆಯನ್ನು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ರೂಪಿಸಿದ್ದು, ಕೊರೋನ ಸೋಂಕಿಗೆ ತುತ್ತಾದ ಸದಸ್ಯರು ಅರ್ಜಿ ಸಲ್ಲಿಸುವಂತೆ ಬ್ಯಾಂಕಿನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನ ಸದಸ್ಯರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೂಕ್ತ ದಾಖಲೆಯನ್ನು […]