ಗಂಗೊಳ್ಳಿ (ಜೂ, 29) : ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮುಖ್ಯರಸ್ತೆಯ ಸಮೀಪದಲ್ಲಿ ರಸ್ತೆ ಅಪಘಾತದಿಂದಾಗಿ ಕೊನೆಯುಸಿರೇಳೆದ ಗೋವಿಗೆ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಸ್ಥಳೀಯರ ಸಹಕಾರದಿಂದ ಜೂನ್ 29 ರಂದು ಗುಜ್ಜಾಡಿಯಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಈ ಕಾರ್ಯಕ್ಕೆ ಸ್ಥಳೀಯರು ಶ್ಲಾಘಿಸಿದ್ದಾರೆ.
Month: June 2021
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರೋನಾ ಲಸಿಕಾ ಅಭಿಯಾನ
ಕುಂದಾಪುರ(ಜೂ,30): ಕಾಲೇಜು ಆರಂಭಕ್ಕೆ ಪೂರ್ವವಾಗಿ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿ ಪದವಿ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ 19 ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಜೂನ್, 28 ರಂದು 200 ಡೋಸ್ ಲಸಿಕೆ ನೀಡಲಾಗಿದ್ದು, ಇಂದು 600 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗಿದೆ. ಈ ಅಭಿಯಾನ ನಾಳೆಯು ಮುಂದುವರಿಯಲಿದ್ದು, 500 ವಿದ್ಯಾರ್ಥಿಗಳಿಗೆ ಲಸಿಕೆಗಳನ್ನು ನೀಡಲಾಗುವುದು. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯುವ ಮೂಲಕ ಕೋವಿಡ್ […]
ಸಂತ ಮೇರಿ ಮಹಾವಿದ್ಯಾಲಯ ಶಿರ್ವ : ಕರೋನಾ ಲಸಿಕಾ ಅಭಿಯಾನ
ಶಿರ್ವ(ಜೂ, 29) : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ ಸಿ ಸಿ,ಎನ್ ಎಸ್ ಎಸ್ ,ಯೂತ್ ರೆಡ್ ಕ್ರಾಸ್,ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ,ಜಿಲ್ಲಾ ಸರ್ಕಾರಿ ಆಸ್ಪತ್ರೆ ,ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಕರೋನಾ ಲಸಿಕಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿ ಗಳು ಹಾಗೂ ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಜೂನ್ […]
ಮುಳ್ಳಿಕಟ್ಟೆ : ಕನ್ನಡ ಜಾನಪದ ಪರಿಷತ್ ವತಿಯಿಂದ ವಲಸೆ ಕಾರ್ಮಿಕ ಕುಟುಂಬಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ
ಮುಳ್ಳಿಕಟ್ಟೆ (ಜೂ, 28) : ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಬೆಂಗಳೂರು ಮತ್ತು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಘಟಕದ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಾಸವಾಗಿರುವ 35 ವಲಸೆ ಕಾರ್ಮಿಕರ ಕುಟುಂಬಗಳಿಗೆ ಹಾಗೂ 3 ಮಂದಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯಗಳ ಕಿಟ್ ನ್ನು ಜೂನ್ ,28 ರಂದು ಮುಳ್ಳಿಕಟ್ಟೆಯಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ […]
ವಂಡ್ಸೆ : ಗ್ರಾಮೀಣ ಭಾಗದ ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ ನೇತ್ರತ್ವದಲ್ಲಿ ಸಭೆ
ವಂಡ್ಸೆ (ಜೂ, 28) : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಹೆಚ್ಚಿದ್ದು, ಲಾಕ್ಡೌನ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಅನಿವಾರ್ಯವಾದ ಅನ್ ಲೈನ್ ಶಿಕ್ಷಣಕ್ಕೆ ನೆಟ್ ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂದಿಗ್ಧ ಪರಿಸ್ಥಿತಿಯನ್ನು ಸರಿಪಡಿಸುವ ಸಲುವಾಗಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸಂಬಂಧಪಟ್ಟ ನೆಟ್ವರ್ಕ್ ನಿರ್ವಹಣಾಧಿಕಾರಿಗಳೊಂದಿಗೆ ತಮ್ಮ ಗ್ರಹ ಕಛೇರಿಯಲ್ಲಿ ಜೂನ್, 22 ರಂದು ಸಭೆ ನಡೆಸಿದರು. ನೆಟ್ ವರ್ಕ್ […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಕೋವಿಡ್ ಲಸಿಕಾ ಅಭಿಯಾನ
ಕುಂದಾಪುರ (ಜೂ, 28): ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ಶೀಘ್ರದಲ್ಲೇ ಪುನರಾರಂಭಿಸಲು ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕರೋನಾ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 28 ರಂದು ಕರೋನಾ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು ಮೊದಲ ದಿನದಂದು 200 ಡೋಸ್ ಲಸಿಕೆಯನ್ನು ನೀಡಲಾಗಿದೆ.ಕುಂದಾಪುರ ತಾಲೂಕು ಆರೋಗ್ಯ […]
ಮೊಬೈಲ್ ಪ್ರಪಂಚ
ಕರೋನಾ ಮಹಾಮಾರಿಗೆ ಸಿಲುಕಿ ಬದುಕು ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಕರೋನಾದಿಂದಾಗಿ ನಮ್ಮ ಮೇಲೆ ಬೀರಿದ ಸಕಾರಾತ್ಮಕ ವಿಷಯಗಳ ಕುರಿತು ನಾವು ಹಲವು ಲೇಖನಗಳಲ್ಲಿ ಓದಿದ್ದೇವೆ. ಹೊಟ್ಟೆಪಾಡಿಗಾಗಿ ನಮ್ಮವರನ್ನೆಲ್ಲಾ ಬಿಟ್ಟು ಎಲ್ಲೆಲ್ಲೋ ದುಡಿಯುತ್ತಿದ್ದವರು ಇಂದು ಕುಟುಂಬದ ಜೊತೆ ಸೇರಿ ಸಂತೋಷದಿಂದಿರಲು ಕರೋನಾ ಲಾಕ್ಡೌನ್ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ನಿಜ? ಎಷ್ಟೇ ಸಮಯವಿದ್ದರೂ, ನಮ್ಮವರೆಲ್ಲಾ ಕಣ್ಣೆದುರಿಗಿದ್ದರು, ಅವರೊಂದಿಗೆ ಮಾತನಾಡದೆ ಮೊಬೈಲ್ ನಲ್ಲಿ ಮುಳುಗಿರುವವರ ಸಂಖ್ಯೆ ಹೆಚ್ಚು. […]
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಕುಂದಾಪುರ : 30 ಮತ್ತು 31ನೇ ಯೋಜನೆಯ ಧನ ಸಹಾಯದ ಚೆಕ್ ಹಸ್ತಾಂತರ ಕಾರ್ಯಕ್ರಮ
ಕುಂದಾಪುರ (ಜೂ, 28) : ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಇದರ 30ನೇ ಸೇವಾ ಯೋಜನೆಯ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ ಕೊರವಡಿ ಬಣಸಾಲೆ ಬೆಟ್ಟಿನ ನಿವಾಸಿಯಾದ ಶ್ರೀಮತಿ ಲಕ್ಷ್ಮೀ ಯವರಿಗೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚಕ್ಕೆ ಸಹಾಯ ಧನ ಹಾಗೂ ಟ್ರಸ್ಟ್ ನ 31ನೇ ಯೋಜನೆಯ ಅಂಗವಾಗಿ ಅಕಸ್ಮಿಕ ಅಪಘಾತದಲ್ಲಿ ತಲೆಗೆ ಬಲವಾದ ಏಟು ಬಿದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ದೀಕ್ಷಿತ್ ಪೂಜಾರಿಯವರ ಹೆಚ್ಚಿನ ಚಿಕಿತ್ಸಾ […]
ಸಂತೆಕಟ್ಟೆ : ಕೃಷ್ಣಾನುಗ್ರಹ -ಮಮತೆಯ ತೊಟ್ಟಿಲು ಆಶ್ರಮದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಜನ್ಮ ದಿನಾಚರಣೆ
ಉಡುಪಿ (ಜೂ, 28): ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ).ಕುಂದಾಪುರ ಇದರ ಗೌರವಾಧ್ಯಕ್ಷರಾದ ಕೊಡುಗೈದಾನಿ , ಉದ್ಯಮಿ ಗೋವಿಂದ ಬಾಬು ಪೂಜಾರಿ ಯವರ 44ನೇ ಜನ್ಮ ದಿನಾಚರಣೆಯನ್ನು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮದ (ಮಮತೆಯ ತೊಟ್ಟಿಲು) ಮಕ್ಕಳ ಜೊತೆ ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಶ್ರೀ ಗೋವಿಂದ ಬಾಬು ಪೂಜಾರಿ ಯವರು ಆಶ್ರಮದ ಮಕ್ಕಳಿಗೆ ತನ್ನ ಜನ್ಮ ದಿನದ ಪ್ರಯುಕ್ತ […]
ಕೊಡುಗೈದಾನಿ, ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಶೆಫ್ಟಾಕ್ ಸಂಸ್ಥೆಗೆ ಕ್ವಾಲಿಟಿ ಫುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್
ಕುಂದಾಪುರ (ಜೂ, 30): ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಶ್ರೀ ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆ ಕ್ವಾಲಿಟಿ ಫುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್ ಗೆ ಭಾಜನರಾಗಿರುತ್ತದೆ. ದೆಹಲಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಅಚಿವರ್ಸ್ ಕಾನ್ಫರೆಸ್ಸ್ ಸಮಾರಂಭದಲ್ಲಿ ಶೆಫ್ಟಾಕ್ ಸಂಸ್ಥೆಯು ಅಹಾರದ ಅತ್ಯುತ್ತಮ ಗುಣಮಟ್ಟಕ್ಕೆ ಕ್ವಾಲಿಟಿ ಪುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್ನ್ನು ಶೆಫ್ಟಾಕ್ ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ […]