ಕುಂದಾಪುರ (ಜೂ, 10): ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ “ಗುರು ಗೌರವ” ಎನ್ನುವ ಶೀರ್ಷಿಕೆಯಡಿಯಲ್ಲಿ ವೇತನವಿಲ್ಲದ, ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯ ತನಕ ಸುಮಾರು 13000 ಕಿಟ್ ಗಳನ್ನ ವಿತರಿಸಲಾಗಿದೆ. ಹಾಗೆಯೇ ಯುವಾಬ್ರಿಗೇಡ್ ಕುಂದಾಪುರ ತಂಡದಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನಾ ಕಾರಣದಿಂದ ಶಾಲೆಗಳು ನಡೆಯದೆ, ಅನೇಕ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಗುರುತಿಸಿ , ಸರಿ ಸುಮಾರು […]
Day: June 11, 2021
ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ : ದಾನಿಗಳ ಸಹಕಾರದಿಂದ ಆಶ್ರಮದ ಮಕ್ಕಳಿಗೆ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳ ಹಸ್ತಾಂತರ
ಕುಂದಾಪುರ (ಜೂ, 10): ಬ್ರಹ್ಮಾವರದ ಅಪ್ಪ -ಅಮ್ಮ ಅನಾಥಾಶ್ರಮ ಹಾಗೂ ಮಣಿಪಾಲ ಹೊಸ ಬೆಳಕು ಆಶ್ರಮಕ್ಕೆ ಕೊಡುಗೈ ದಾನಿಗಳು ಹಾಗೂ ಸಮಾಜ ಸೇವಕರಾದ ಶ್ರೀಕಾಂತ್ ಶೆಣೈ ಕೋಟ ಹಾಗೂ ಕರಾವಳಿಯ ಪ್ರಸಿದ್ಧ ಮೊಬೈಲ್ ಮಳಿಗೆಯಾದ ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಿಕರಾದ ಆದಿತ್ಯ ಕೋಟ ಇವರು ನೀಡಿದ ಸರಿಸುಮಾರು 18ಸಾವಿರ ದಿಂದ 20ಸಾವಿರ ಮೌಲ್ಯದ ದಿನಬಳಕೆಯ ಸಾಮಾಗ್ರಿ ಮತ್ತು ತಿಂಡಿ ತಿನಿಸುಗಳನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. […]
ದೈವದ ಚಾಕ್ರಿ ವರ್ಗಕ್ಕೆ ಕೋವಿಡ್ ಪರಿಹಾರ ಘೋಷಿಸಲು ಮಹೇಶ್ ಪೂಜಾರಿ ಹೂಡೆ ಆಗ್ರಹ
ಉಡುಪಿ (ಜೂ, 10): ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನಗಳು ಹಲವಾರು ಇದೆ. ಆಯಾಯ ಗ್ರಾಮಗಳ ದೈವ ಸ್ಥಾನದಲ್ಲಿ ದೈವ ಚಾಕ್ರಿ ಮಾಡುವ ವರ್ಗಗಳು ಹಲವು ವರ್ಷಗಳಿಂದ ದೈವಾರಾಧನೆಯಲ್ಲೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆಈ ಕರೋನಾ ಮಹಾಮಾರಿಯಿಂದಾದ ದೀರ್ಘಾವಧಿಯ ಲಾಕ್ಡೌನ್ನಿಂದಾಗಿ ಧಾರ್ಮಿಕ ಕ್ಷೇತ್ರಗಳ ಉತ್ಸವ, ಜಾತ್ರೆ, ವಾರ್ಷಿಕೋತ್ಸವಗಳನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಸರ್ಕಾರ ರದ್ದು ಮಾಡಿದೆ. ಆದರೆ ಇದು ದೈವ ಚಾಕ್ರಿ ಸದಸ್ಯರ ಬದುಕಿನ ಮೇಲೆ ನೇರ […]
ಕಮಲಶಿಲೆ ದೇವಳದ ಸೆಕ್ಯೂರಿಟಿ – ಗಾನ ಪ್ರತಿಭೆ – ಮಂಜುನಾಥ್ ಮೊಗವೀರ
ಪ್ರತಿಭೆ ಅನ್ನೋದು ಯಾರ ಸೊತ್ತೂ ಅಲ್ಲ. ಪ್ರತಿಭೆಗೆ ಬಡವ-ಬಲ್ಲಿದ, ಹೆಣ್ಣು-ಗಂಡು ,ಜಾತಿ-ಧರ್ಮದ ತಾರತಮ್ಯ ಇಲ್ಲ. ಪ್ರತಿಯೊಂದು ಪ್ರತಿಭೆ ಅರಳಲು- ಬೆಳೆಯಲು ಬೇಕಾಗಿರುವುದು ಸ್ವ ಆಸಕ್ತಿ, ಛಲ, ಕಾಯಕ, ಪ್ರೀತಿ ಹಾಗೂ ಬೆಂಬಲ. ಗಿಡವೊಂದು ಬಲಿತು ಹೆಮ್ಮರವಾಗಿ ಬೆಳೆಯ ಬೇಕಾದರೆ ಅದಕ್ಕೆ ಪ್ರಕೃತಿಯ ಪಂಚಭೂತಗಳು ಎಷ್ಟು ಮುಖ್ಯವೋ, ಒಬ್ಬ ಪ್ರತಿಭಾವಂತನ ಪ್ರತಿಭೆ ಬಾಹ್ಯ ಪ್ರಪಂಚಕ್ಕೆ ಪಸರಿಸಲು ಸಹೃದಯದವರು ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಅದೆಷ್ಟೋ ಪ್ರತಿಭೆ ಗಳಿಗೆ ಸೂಕ್ತ ವೇದಿಕೆ ಸಿಗದೇ, ಬೇಲಿಯೊಳಗಿನ […]
ಕರೋನಾ ಕಂಟಕ – ಬದುಕಿನ ತಲ್ಲಣ
ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಇಡೀ ಪ್ರಪಂಚದ ಮೂಲೆಮೂಲೆಗಳಲ್ಲಿ ಸಂಚರಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಕೆಲವೆ ಕೆಲವೇ ದಿನಗಳಲ್ಲಿ ಕರೋನ ಎನ್ನುವ ಹೆಮ್ಮಾರಿ ಹಲವಾರು ಸಾವು ನೋವುಗಳಿಗೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಬಂಧಬಾಹುವನ್ನು ಭಾರತದಾದ್ಯಂತ ಅವರಿಸುವುದರ ಜೊತೆಗೆ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮುಂದುವರಿಸಿ ಹಲವಾರು ಜನರ ಜೀವನದ ದಾರಿಯನ್ನು ಮುಚ್ಚಿದೆ. ಈ ಕರೋನ ಎನ್ನುವ ರೋಗದಿಂದಾಗಿ ನಮ್ಮ ಬದುಕು ಕಬ್ಬಿಣದ ಕಡಲೆಯಂತೆಯಾಗಿದೆ. ದುಡಿದು […]