ಚಿತ್ರದುರ್ಗ (ಜೂನ್ , 13) : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಅಂಗವಾಗಿ ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾಂತ ರಾಮತೀರ್ಥ ಆಶ್ರಮದ ಶ್ರೀ ಶ್ರೀ ಶ್ರೀ ಪ್ರಹಲ್ಲಾದ್ ಗುರೂಜಿ ರವರನ್ನು ಜೂನ್ 13 ರಂದು ಭೇಟಿ ಮಾಡಿ ಪಲ್ಸ ಓಕ್ಸಿಮೀಟರನ್ನು ರೆಡ್ ಕ್ರಾಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತು ನಿರ್ದೇಶಕರಾದ ಗಿರೀಶ್ ರವರು ಉಪಸ್ಥಿತರಿದ್ದರು.
Day: June 13, 2021
ನರೇಂದ್ರ ಎಸ್ ಗಂಗೊಳ್ಳಿಗೆ ಶಿಕ್ಷಕ ರತ್ನ ಗೌರವ
ಗಂಗೊಳ್ಳಿ ( ಜೂ, 13): ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಯುವ ಸಾಹಿತಿ ಹಾಗೂ ಅಂಕಣಕಾರರೂ ಆಗಿರುವ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಅವರ ವಿವಿಧ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯನ್ನು ಪರಿಗಣಿಸಿ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮಂಗಳೂರು ವಿಭಾಗದ ವತಿಯಿಂದ ಶಿಕ್ಷಕ ರತ್ನ ಗೌರವವನ್ನು ನೀಡಿ ಪುರಸ್ಕರಿಸಲಾಗಿದೆ.
ಎಲ್ಲಿರುವೆ ಮನವ ಕಾಡುವ ರೂಪಸಿಯೇ
ದೂರ ಇದ್ದರೂ, ಹತ್ತಿರವೇ ಇದ್ದಂತೆಅನಿಸುತಿದೆ ಮನದೊಳಗೆ…ನೀ ಮನದೊಳಗೆ…. ನೀ ಮರೆಯಲಿ…ಎಲ್ಲೋ ನಿಂತು ನೋಡುತ್ತಿರುವಂತೆಎಲ್ಲಿರುವೆ ನೀನು …..? ಮನದ ಮೂಲೆಯಲಿಎಲ್ಲೋ ಸುಪ್ತವಾಗಿ ಕುಳಿತ ಸವಿ ನೆನಪುಗಳುಗೂಡು ಕಟ್ಟಿ ಹಾರಲು ಕಾಯುತಿದೆಎಲ್ಲಿರುವೆ ನೀನು …..? ಬಯಕೆಗಳ ಭಾಗ್ಯವಿಧಾತೆಬಾಳಿನ ಪ್ರೇಮದೇವತೆಯೇನನ್ನ ಕನಸುಗಳ ಕನಸುಗಾರ್ತಿಯೇಎಲ್ಲಿರುವೆ ನೀನು……..? ನೆನಪಾಗಿ ಕಾಡುವ ಭಾವನಾಮನಸಿನ ಕದ ತಟ್ಟುವ ಕವನಮನದೊಳಗೆ ನೆನಪುಗಳ ಕದನಎಲ್ಲಿರುವೆ ನೀನು, ….? ರೂಪಸಿಯೇ …ಕನಸುಗಾರ್ತಿಯೇಕವನದ ಒಡತಿಯೇಕಾಮನೆಯು ಹೆಪ್ಪುಗಟ್ಟಿಲು ಕಾಯುತಿದೆ ನಿನಗಾಗಿಎಲ್ಲಿರುವೆ ನೀನು….? ಮನವ ಕಾಡುವ ರೂಪಸಿಯೇ……ಎಲ್ಲಿರುವೆ ನೀನು….? […]
ಕುಮಟಾದ ದಿಶಾ ಭಾಗವತ್ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ
ಕುಮಟಾ (ಜೂ,13): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು. ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯ ಬಾರ್ ಕೌನ್ಸಿಲ್ ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆರಿಸಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ನಂತರ ಅಮೆರಿಕದಲ್ಲಿ ಯುಎಸ್ಸಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ. ಇವರು ಬಹುಮುಖ ಪ್ರತಿಭೆಯಾಗಿದ್ದು, ಉದ್ಯಮಿ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಡಿ ಕೊಡ್ಲಾಡಿ : 2021-22 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭ
ವಂಡ್ಸೆ (ಜೂ, 13): ಕೊಡ್ಲಾಡಿ -ಮಾರ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಜೂನ್, 15 ರಿಂದ ಆರಂಭವಾಗಲಿದೆ. ಜುಲೈ ,1 ರಿಂದ ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಗಳು ಆರಂಭವಾಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆಗಳನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ. Covid-19ನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಹುತೇಕ ಸೆಪ್ಟಂಬರ್ ವರೆಗೆ ಆಫ್ಲೈನ್ (ವಿದ್ಯಾರ್ಥಿಗೆ ನೇರ ಬೋಧನೆ) ತರಗತಿಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ […]