ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
Day: June 16, 2021
“ಅದೃಷ್ಟವಂತರಲ್ಲ, ಆಶಾವಾದಿಯಾಗೋಣ”
ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ […]
ಸಿದ್ದಾಪುರ ಗ್ರಾಮ ಪಂಚಾಯತ್ : ವಿಶೇಷಚೇತನರಿಗೆ ಎಪಿಡಿ ಸಂಸ್ಥೆಯ ವತಿಯಿಂದ ಫುಡ್ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮ
ಸಿದ್ದಾಪುರ (ಜೂ, 16): ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಶೇಷಚೇತನರಿಗೆ ಫುಡ್ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಎಪಿಡಿ ಸಂಸ್ಥೆಯ ಜೀವನೋಪಾಯ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ ,16 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿ ಹರೀಶ ಶೆಟ್ಟಿ ಯವರು ಮಾತನಾಡಿ, ನಮ್ಮ ಸಂಸ್ಥೆ ಸುಮಾರು 62 ವರ್ಷದಿಂದ ವಿಶೇಷ ಚೇತನರಿಗೆ ಶಿಕ್ಷಣ, ತರಬೇತಿ, ವೈದ್ಯಕೀಯ ಪುನಶ್ಚೇತನ ಹಾಗೂ ಉದ್ಯೋಗ ಸೌಲಭ್ಯವನ್ನು ನೀಡಿ […]
ವಿಶ್ವ ರಕ್ತದಾನಿಗಳ ದಿನಾಚರಣೆ : ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ರವರಿಗೆ ಸನ್ಮಾನ
ಉಡುಪಿ (ಜೂ, 16): ಕರಾವಳಿ ಭಾಗದಲ್ಲಿ ಹಲವು ವರ್ಷಗಳಿಂದ ರಕ್ತದಾನ ಶಿಬಿರ ಹಾಗೂ ತುರ್ತು ಸಂದರ್ಭದಲ್ಲಿ ರಕ್ತದಾನಿಗಳ ಆಯೋಜನೆ ಮಾಡಿರುವ ರಕ್ತದ ಆಪತ್ಭಾಂಧವ ,ಉಡುಪಿ ಅಭಯ ಹಸ್ತ ಹೆಲ್ಪ್ ಲೈನ್ ಸ್ಥಾಪಕಾಧ್ಯಕ್ಷ ಸತೀಶ್ ಸಾಲ್ಯಾನ್ ಅವರನ್ನು ಜೂನ್,14 ರಂದು ಮಣಿಪಾಲದ ಕೆಎಂಸಿ ಇಂಟರಾಕ್ಟ್ ಹಾಲ್ನಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಣಿಪಾಲ ಕೆಎಂಸಿ ಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಬಿ.ಜೆ.ಪಿ. ಯ […]
ಮೂಡ್ಲಕಟ್ಟೆ ಎಂಐಟಿ – ಮೈಕ್ರೋಸಾಫ್ಟ್ ಟ್ರೈನಿಂಗ್ ಪಾರ್ಟ್ನರ್ ಜೊತೆ ಒಪ್ಪಂದ
ಕುಂದಾಪುರ (ಜೂನ್, 15) : ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯಿತು. ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಜ್ಞಾನ […]
ಕಟ್ ಬೆಲ್ತೂರು ಗ್ರಾ. ಪ. ಅಧ್ಯಕ್ಷ ನಾಗರಾಜ್ ಪುತ್ರನ್ ರಿಂದ ದಿನಸಿ ಕಿಟ್ ವಿತರಣೆ
ವಂಡ್ಸೆ (ಜೂ, 15): ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಪುತ್ರನ್ ರವರು ಕರೋನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವ ಸುಳ್ಸೆ ಗ್ರಾಮದ ಬಡ ಕುಟುಂಬಗಳಿಗೆ ದೈನಂದಿನ ಉಪಯೋಗಕ್ಕೆ ಅನುಕೂಲವಾಗುವ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಿದರು. ದೀರ್ಘಾವಧಿಯ ಕರೋನಾ ಲಾಕ್ಡೌನ್ ನಿಂದಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ, ಆ ನಿಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ನಾವುಂದ : ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ). ಉಪ್ಪುಂದ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ಸಾಮಾನುಗಳ ಕಿಟ್ ವಿತರಣೆ
ನಾವುಂದ( ಜೂ, 15) : ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಪ್ರವರ್ತಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋವಿಂದ ಬಾಬು ಪೂಜಾರಿಯವರು ನಾವುಂದ ಗ್ರಾಮದ ಮಸ್ಕಿ ಯ ಶ್ರೀ ಗೋಪಾಲಕ್ರಷ್ಣ ದೇವಸ್ಥಾನದ ವಠಾರದಲ್ಲಿ ಕಡು ಬಡವರಿಗೆ ಕರೋನಾ ಲಾಕ್ಡೌನ್ ಸಮಯದಲ್ಲಿ ದೈನಂದಿನ ನಿರ್ವಹಣಿಗೆ ಬೇಕಾಗುವ ದಿನಸಿ ಸಾಮಾನುಗಳ ಕಿಟ್ ವಿತರಿಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗೋಪಾಲ ಕ್ರಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಈಶ್ವರ ಸಿ ನಾವುಂದ […]
“ಸೋಲದಿರು ಎಂದೆಂದೂ”
“ಸೋಲದಿರು ಎಂದೆಂದೂ” ಓ ಮನಸೇ, ನೀ ವಿಶ್ವಬಂಧುಸಾಧನೆಯ ಪಣವ ಸ್ವೀಕರಿಸು ಇಂದು.ಬಾನೇ ಬೀಳಲಿ, ಭುವಿಯೇ ಸೀಳಲಿಸೋಲನ್ನು ಕಂಡು ಕುಸಿಯದಿರು ಎಂದು.ಧೈರ್ಯವ ಬಿತ್ತಿ, ಸಹನೆಯ ಹೊತ್ತಿಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.ನೋವಿದ್ದರೆ ಇಂದು, ನಲಿವಿರುವುದು ಮುಂದುನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯