ಕುಂದಾಪುರ (ಜೂ, 21) : ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ – ಬೋರ್ಡ್ ಹೈಸ್ಕೂಲ್) ಇಲ್ಲಿನ 2021-22 ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹೊಸದಾಗಿ 8 ಮತ್ತು 9 ನೇ ತರಗತಿಗಳಿಗೆ ಸೇರ್ಪಡೆಗೊಳ್ಳಲು ದಾಖಲಾತಿ ಆರಂಭಗೊಂಡಿದೆ. ಮಕ್ಕಳ ದಾಖಲಾತಿ ಪ್ರಕ್ರಿಯೆ ಬಯಸುವ ಪೋಷಕರು ಈ ಕೆಳಗೆ ನೀಡಲಾದ ಲಿಂಕ್ ಬಳಸಿ ಆನ್ಲೈನ್ ಮೂಲಕ ಗೂಗಲ್ ದಾಖಲಾತಿ ಫಾರ್ಮ್ ತುಂಬಿಸಿ ತಮ್ಮ ಮಕ್ಕಳ ದಾಖಲಾತಿಯನ್ನು ಖಾತ್ರಿ […]
Day: June 21, 2021
“ನನ್ನ ತಂದೆ”
ಕಣ್ಣು ತೆರೆದಾಗ ನಾ ಕಂಡ ಶಿವ ನೀನುಮನೆಯಂಬ ಗುಡಿಯಲಿ ನೆಲಸಿರುವ ದೇವರು ನೀನುನಿನ್ನ ನಡೆಯೇ ವಿದ್ಯಾದಾಯಿನಿನಿನ್ನ ನುಡಿಯೇ ದಿವ್ಯವಾಣಿನೀನೇ ನನ್ನ ಬಾಳ ಅನುಗ್ರಹನೀನೇ ನನ್ನ ಸರ್ವಸ್ವ ….ನನ್ನ ತಂದೆ. ನೀನು ಕಣ್ತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನುನಮ್ಮ ಬದುಕು ರೂಪಿಸು ಹಗಲಿರುಳು ದುಡಿದವ ನೀನುನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆನೀನೇ ನನ್ನ ಸರ್ವಸ್ವ ….ನನ್ನ ತಂದೆ. ನಿನ್ನ ನಗುವೆ ನನಗೆ ಕೋಟಿ ಧನನೀನಿರುವ ತಾಣವೇ ನನಗೆ ದೇವಸ್ಥಾನನಿನ್ನ […]
ಮೊಳಕೆ
ಕಣ್ಣೀರು ಚೆಲ್ಲಬೇಡಮೊಳಕೆಯೊಂದು ನಾಳೆಯಿಂದ ನಿನ್ನಕಣ್ಣೀರನ್ನೇ ಬಯಸೀತುಕಣ್ಣೀರು ಚೆಲ್ಲಬೇಡಅದನ್ನೇ ಹೀರಿದ ನೆಲ ದಿನ ಕಳೆದಂತೆಬಂಜರು ಭೂಮಿಯಾದೀತುಸಾಧ್ಯವಾದರೆ ನೀನೊಮ್ಮೆ ನಕ್ಕುಬಿಡುದ್ವೇಷದ ಬೀಜ ಬಿತ್ತಿದವರೆಲ್ಲ ಒಳಗೊಳಗೇಕುದ್ದು ಬೆಂದು ಹೋಗಲಿಇಲ್ಲವಾದರೆ ಅಂತೆಯೇ ಸುಮ್ಮನಿದ್ದುಬಿಡುನಿನ್ನ ಕೆಣಕಿದವರಿಗೆಲ್ಲ ನೀನೊಂದು ಬಂಡೆಯೆಂದುಗೊತ್ತಾಗಿ ಸುಮ್ಮನಾಗಿಹೋಗಲಿಶಸ್ತ್ರ ಹೋರಾಟ ಗೊತ್ತಿರಲೇ ಬೇಕಾಗಿಲ್ಲ ಗೆಲ್ಲಲುಸುಮ್ಮನೆ ಬಂದೂಕನ್ನೆತ್ತಿಕೋ, ಗುರಿಯಿಡುಕುದುರೆಯ ಮೇಲೆ ಬೆರಳಿರಲಿಎದುರಿನವನು ಖಡ್ಗ ಕೆಳಗಿಡಬಹುದು ಅಥವಾಬಿಳಿ ಪತಾಕೆ ಹಾರಿಸಿಯಾನುಸುಮ್ಮನೆ ಬಂದೂಕಿನ ಕುದುರೆಯನ್ನೆಳೆದು ಬಿಡುನಳಿಕೆಯಿಂದ ಕೆಂಗುಲಾಬಿಯೇ ಚಿಮ್ಮಲಿಸೋತರೂ ಜಯ ನಿನ್ನದಾಗಬಹುದುಬಾನಿಂದ ಹನಿಯೊಂದು ಚೆಲ್ಲಬಹುದುಮೊಳಕೆ ಚಿಗುರಲೂ ಬಹುದು ಕಿಗ್ಗಾಲು ಜಿ. […]
ಕನಸುಗಳು ಮಾರಾಟವಾಗಿದೆ…!
ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಶಿರ್ವ (ಜೂ, 21): ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.ಪ್ರಸ್ತುತ ಸಾಲಿನಲ್ಲಿ ಕೋವಿಡ್ -19 ಕಾರಣದಿಂದಾಗಿ ಸಾರ್ವಜನಿಕ ಸಭೆ,ಸಮಾರಂಭ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸುವುದರಿಂದ, ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಯೋಗ ದಿನವನ್ನು ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ “Be With Yoga, Be At Home” ಘೋಷವಾಕ್ಯದೊಂದಿಗೆ […]
ನೀವೊಬ್ಬರೇ ಅಲ್ಲಾ ಲಾಕ್ಡೌನ್ ಓಪನ್ ಆಗೋದಕ್ಕೆ ಕಾಯ್ತಾ ಇರೋದು…. ಕರೋನಾ ವೈರಸ್ ಕೂಡ ಕಾಯ್ತಾ ಇದೆ……. ಜಾಗ್ರತರಾಗಿರಿ!
ರಾಜ್ಯದಲ್ಲಿ ಜೂನ್, 21 ರ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. 16 ಜಿಲ್ಲೆಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಒಳಗೊಂಡಂತೆ ಸಡಿಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಉಳಿದ 13 ಜಿಲ್ಲೆಗಳಲ್ಲಿ ಸೋಂಕು ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ 2ರವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾರವರು ಬೆಚ್ಚಿಬೀಳಿಸುವ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಭಾರತದಲ್ಲಿ ಮೂರನೇ ಕೋವಿಡ್ ಅಲೆ […]