ಜಡ್ಕಲ್ (ಜು, 01): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಕ್ಕೆ ಇದರ ಶಾಲಾ ಪ್ರಾರಂಭೋತ್ಸವ ಜುಲೈ,01 ರಂದು ನಡೆಯಿತು. ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ನಾಗೇಶ್ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಮತಿ ರಾಧಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿಕ್ಷಣಾಭಿಮಾನಿ ರಾಮ ಶೆಟ್ಟಿ ಅತ್ತಿಕಾರ್, ಮುಖ್ಯ ಶಿಕ್ಷಕಿ ಶ್ರೀಮತಿ ದೇವಕಿ, ಸಹಶಿಕ್ಷಕಿ ಶ್ರೀಮತಿ ನೇತ್ರ ಹಾಗೂ ಶಾಲಾ ಮಕ್ಕಳ ಪೋಷಕರು […]
Day: July 1, 2021
ನಾನು, ಕನ್ನಡಿ ಮತ್ತು ನೆರಳು
ಕನ್ನಡಿಯೊಂದೇ ತೋರಿಸುವುದಂತೆನನ್ನನ್ನು ನಾನಿದ್ದಂತೆಕಾಣಬೇಕಿತ್ತು ನನ್ನೊಳಗಿನ ನನ್ನನ್ನು ನಾನುಆಳೆತ್ತರದ ಕನ್ನಡಿಯೆದುರು ನಿಂತೆ ಏನಾಶ್ಚರ್ಯ !ಎಡಭಾಗ ಬಲಭಾಗವಾಗಿಬಲಭಾಗ ಎಡಭಾಗವಾಗಿನನ್ನ ವೈರುಧ್ಯಗಳ ದರ್ಶನ ಕನ್ನಡಿಯೊಳಗಿನ ನನ್ನ ಬಿಂಬದಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಿದೆಕಣ್ಣುಗಳ ಮೂಲಕವೇ ನನ್ನೊಳಗಿಳಿದು ಕೇಳಿದೆಹೌದು, ಯಾರು ನಾನುಅಲುಗಾಡಿದ ತುಟಿ ಅತ್ತದ್ದೇ ನಕ್ಕದ್ದೇ ಅರ್ಥವಾಗಲಿಲ್ಲಕಣ್ಣುಗಳಾದರೂ ಹೇಳಿದ್ದೇನು? ಅದೂ ಅರ್ಥವಾಗಲಿಲ್ಲನನ್ನ ಪ್ರತಿಬಿಂಬಕ್ಕೂ ನನ್ನರಿವಾಗದೆ ನಿಟ್ಟುಸಿರು ಬಿಟ್ಟಿರಬೇಕು ಖಚಿತವಾಯ್ತು. ಇಲ್ಲ..ಕನ್ನಡಿ ತೋರಲಾರದು ಸತ್ಯಅರ್ಥವಾಗಿತ್ತು ನನಗೆಹಾಗೇ ಸುಮ್ಮನೆ ನಡೆದು ಹೋದೆಬಿಡಲಾರದೆ ನನ್ನನ್ನೇ ಹಿಂಬಾಲಿಸುತ್ತಿತ್ತು ನೆರಳುಅದನ್ನೇ ಕೇಳಿದೆ ‘ಹೌದು ನಾನು […]
ಯೋಗ ನಮ್ಮದೆನ್ನಲು ಹೆಮ್ಮೆ ಪಡಿ – ನರೇಂದ್ರ ಎಸ್ ಗಂಗೊಳ್ಳಿ
ಕುಂದಾಪುರ (ಜು, 01) : ಯೋಗ ಎನ್ನುವುದು ಇಡೀ ವಿಶ್ವಕ್ಕೆ ಭಾರತ ನೀಡಿದ ಅದ್ಭುತವಾದ ಕೊಡುಗೆ. ಅದನ್ನು ನಮ್ಮದೆಂದು ಹೇಳಲು ಹೆಮ್ಮೆ ಪಡಬೇಕು ಮತ್ತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೇಂಜರ್ಸ್, […]
ನಟ ರಕ್ಷಿತ್ ಶೆಟ್ಟಿ ವಿರುದ್ಧ ಅವಹೇಳನ : ಖಾಸಗಿ ಸುದ್ದಿ ವಾಹಿನಿ ವಿರುದ್ಧ ದೂರು ದಾಖಲು
ಕುಂದಾಪುರ (ಜು,01): ನಿನ್ನೆಯ ಸಿನಿ ಅಡ್ಡಾ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದಕ್ಕಾಗಿ ಆಕ್ರೋಶ ಬುಗಿಲೆದ್ದಿದೆ. ಪಬ್ಲಿಕ್ ಟಿವಿಯ ಕಾರ್ಯಕ್ರಮ ಇದಾಗಿದ್ದು, ವಾಹಿನಿಯ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಸಿದ ಭರತ್ ತಲ್ಲಂಜೆ ರಕ್ಷಿತ್ ಶೆಟ್ಟಿಯವರ ಅಭಿಮಾನಿ ಆಗಿದ್ದು, ಈ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ರಕ್ಷಿತ್ ಶೆಟ್ಟಿಯವರನ್ನು ತೇಜೋವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಕೂಡಲೇ ನಿರೂಪಕರನ್ನು ಬಂಧಿಸಬೇಕು ಮತ್ತು ಅವರ […]