ಕುಂದಾಪುರ (ಜು, 02): ದ್ವಿತೀಯ ಪಿ.ಯು.ಸಿ ವ್ಯಾಸಂಗ ಮುಗಿಸಿದ ನಂತರ 2021-2022 ನೇ ಸಾಲಿನಲ್ಲಿ ವೃತ್ತಿಪರ ಶಿಕ್ಷಣ (ನರ್ಸಿಂಗ್, ಪ್ಯಾರಾ ಮೆಡಿಕಲ್, ಫುಡ್ ಟೆಕ್ನಿಷಿಯನ್, ಹೋಟೆಲ್ ಮ್ಯಾನೇಜ್ಮೆಂಟ್ ಇತ್ಯಾದಿ) ಕೋರ್ಸ್ ನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರದ ವತಿಯಿಂದ “ವಿದ್ಯಾರ್ಥಿವೇತನ” ಹಾಗೂ ಸಹಾಯಧನವನ್ನು ನೀಡುವ ಕಲಿಕೆಗೆ ಆಸರೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದು ಕೊಳ್ಳ ಬೇಕೆಂದು […]
Day: July 3, 2021
ಕಲೆಗೆ ನೆಲೆ ಸಿಗಲಿ, ಕಲಾವಿದರಿಗೆ ಬೆಲೆ ಸಿಗಲಿ ಕಲೆಯಲ್ಲೇ ಉಸಿರಾಡ ಬಯಸುವರಿಗೆ ಅವಕಾಶ ದೊರಕಲಿ
ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ […]
ರೋಟರಿ ಕ್ಲಬ್ ಕುಂದಾಪುರ : ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕುಂದಾಪುರ ಇವರ ವತಿಯಿಂದ ಕುಂದಾಪುರ ಪರಿಸರದ ಹಿರಿಯ ವೈದ್ಯರು ಹಾಗೂ ಸೀನಿಯರ್ ರೋಟರಿಯನ್ಗಳಾದ ಡಾ| ಮಲ್ಲಿ, ಡಾ| ಕಮಲ್, ಡಾ| ರಾಜೀವ್ ಶೆಟ್ಟಿ, ಡಾ| ರಾಜರಾಮ್ ಶೆಟ್ಟಿ,, ಡಾ| ಹರಿಪ್ರಸಾದ್ ಶೆಟ್ಟಿ,
ಡಾ| ಎಮ್.ಎನ್. ಅಡಿಗ ಹಾಗೂ ಡಾ. ರಾಜೇಂದ್ರ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಬೈಕ್ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ಜಿ. ಎಸ್. ಶಿವಕುಮಾರ್ ರವರ ಚಿಕಿತ್ಸೆಯ ನೆರವಿಗೆ ಮನವಿ
ಮಂಗಳೂರು (ಜು, 03) : ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಸುರುಳಿಕುಮೇರಿ ನಿವಾಸಿ, ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ಜಿ.ಎಸ್. ಶಿವಕುಮಾರ್ ಅವರು ಕಳೆದ ಜೂನ್, 25 ರಂದು ಪುತ್ತೂರಿನ ಸಂಪ್ಯ ಬಳಿ ಬೈಕ್ ಅಪಘಾತದಿಂದಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ಅವರ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಅವರ ಚಿಕಿತ್ಸೆಗೆ ಬಹುದೊಡ್ಡ ಮೊತ್ತದ ಅವಶ್ಯಕತೆಯಿದ್ದು. ದಿನಕ್ಕೆ 40-50 ಸಾವಿರ ರೂ […]
ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿಯವರ ಚಿಕಿತ್ಸೆಗೆ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ವತಿಯಿಂದ ನೆರವು
ಹೆಮ್ಮಾಡಿ (ಜು, 3): ಬೈಕ್ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರರ ಚಿಕಿತ್ಸೆಗೆ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ವತಿಯಿಂದ ಹತ್ತು ಸಾವಿರ ರೂಪಾಯಿಯ ಸಹಾಯ ಧನವನ್ನು ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿ ಅಧ್ಯಕ್ಷರಾದ ಕೆ. ಕೆ. ಕಾಂಚನ್ ರವರು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಸುರೇಶ್ ವಿಠಲವಾಡಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಗಂಗೊಳ್ಳಿ : ರಾಷ್ಟ್ರೀಯ ವೈದ್ಯರ ದಿನಾಚರಣೆ
ಗಂಗೊಳ್ಳಿ (ಜು, 01): ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಗಂಗೊಳ್ಳಿ ಇದರ ಆಶ್ರಯದಲ್ಲಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ರವರನ್ನು ವೈದ್ಯರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗಂಗೊಳ್ಳಿ ಇದರ ಅಧ್ಯಕ್ಷ ರಾಜೇಶ್ ಶೇರೆಗಾರ್ ವಹಿಸಿದ್ದರು. ನಾರಾಯಣ ನಾಯ್ಕ, ರಮನಾಥ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಗಂಗೊಳ್ಳಿ ಇದರ ಪದಾಧಿಕಾರಿಗಳು, ಗ್ರಾಮ ಪಂಚಾಯತ್ […]