ನೀನು ನನ್ನ ದೀಪವಾ …?ಇಲ್ಲ ಬಾಳಿನ ಬೆಳಕೆ…?ದೀಪ ಕಡಿಮೆ ಮಾತನಾಡುತ್ತದೆ.ಬೆಳಕು ಜಗಜಗಿಸುತ್ತದೆ…ದೀಪದ ಕೆಳಗಿನ ಕತ್ತಲು ನಾನಗಲಾರೆ.ಬೆಳಕಿನ ಆರತಿ ನಿನಾಗಿರುವೆ..ಕುಣಿಯೆಲಾರೆನು ನಾ.ನೆಲ ಅಂಕು ಡೊಂಕು..ಹೇಳಲಾರೆನು ನಾ ಈ ಜಗವೇ ಅಂಕು ಕೊಂಕು..ಗಾಳಿ, ದೀಪ, ಎರಡೂ ನೀನೆ.ಆರದಿರಲಿ ನನ್ನ ನಿನ್ನ ದೀಪ… ರಾಘವೇಂದ್ರ ಹಾರ್ಮಣ್, ಇಡೂರು ಕುಂಜ್ಞಾಡಿ
Day: July 9, 2021
ಗಾಳ, ಮೀನು ಮತ್ತು ನಾನು
ಗಾಳದ ತುದಿಗೆಎರೆಹುಳವನ್ನು ಸಿಕ್ಕಿಸಿಇನ್ನೊಂದು ತುದಿಗೆ ಉದ್ದ ಹಗ್ಗವನ್ನು ಕಟ್ಟಿಹೊಳೆಗೆಸೆದು, ಹರಿವ ತಂಪಾದ ನೀರಲ್ಲಿಕಾಲಿಳಿಸಿ ಕುಳಿತಿದ್ದೇನೆಯಾವುದೋ ಹೆಸರಿನ ಮೀನೊಂದುಎರೆಹುಳಕ್ಕೆ ಬಲಿಯಾದ ತಕ್ಷಣಮೇಲಕ್ಕೆಳೆದುಕೊಳ್ಳಬೇಕು ಆದರೇನು?ನನ್ನ ಪಾದಗಳಿಗೆ ಕಚಗುಳಿ ಇಟ್ಟುನೀರಿನಾಳಕ್ಕೆ ಜಾರಿಬಿಡುವ ಮೀನುಗಾಳದ ಹತ್ತಿರವೂ ಸುಳಿಯುತ್ತಿಲ್ಲ ಆ ಕ್ಷಣಕ್ಕೆ ಒಂದು ಆಲೋಚನೆ!ಮೇಲಿನವನೂ ಇಳಿಬಿಟ್ಟರಬಹುದಲ್ಲನನಗೂ ಯಾವುದಾದರೊಂದು ಗಾಳವನ್ನುಒಂದಲ್ಲದಿದ್ದರೆ ಹತ್ತಾರು ಗಾಳಗಳನ್ನುಇಲ್ಲವಾದರೆ ಬಲೆಯನ್ನೇ ಬೀಸಿರಬಹುದಲ್ಲವೇ?ಮೂರ್ಖ ಸಿಕ್ಕಿಹಾಕಿಕೊಳ್ಳಲಿಯೆಂದು? ಬಹುಶಃ ನದಿಯೂ ಬಲೆ ಇರಬಹುದುಪುಟ್ಟ ಮೀನೊಂದು ಪಾಶವಿರಬಹುದುಮೀನಿನ ಬದಲು ಮೊಸಳೆಯೇ ಬರಬಹುದು ಹಣೆಯ ಮೇಲೆ ಬೆವರಿನ ಹನಿಗಳುಪಕ್ಕನೆ ಗಾಳವನ್ನು ಮೇಲೆಳೆದು […]
“ಮಳೆ ಹನಿ”
ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆನನ್ನ ಬಳಿ ಬಂದು ಉಲ್ಲಾಸ ನೀಡಿದ್ದುಯಾರಿಗೂ ಗೊತ್ತಾಗಲಿಲ್ಲಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು … ವರ್ಣಿನೆಗೂ ಮೀರಿದ ನಿನ್ನ ಮಾಯೆನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ ✍️ಈಶ್ವರ ಸಿ. ನಾವುಂದ
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಸ ಇಂಜಿನಿಯರಿಂಗ್ ಕೋರ್ಸ್ ಆರಂಭ
ಮೂಡ್ಲಕಟ್ಟೆ (ಜು, 9): ಕುಂದಾಪುರದ ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು (ಎಮ್.ಐ.ಟಿ.) ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನ ಭರಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನ ದ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲು ಅನುಮೋದನೆ ದೊರಕಿದ್ದು, ಇದೇ ಸಾಲಿನಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ. ಪ್ರಸ್ತುತ ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ಒಳಗೊಳ್ಳುವಿಕೆ ಇಲ್ಲದಿರುವುದನ್ನು ಊಹಿಸಲು ಕಷ್ಟವಾಗಿದ್ದು, ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಉತ್ಪನ್ನಗಳಿಗೆ ಬಹಳ ಬೇಡಿಕೆ ಇರುವುದರಿಂದ ಕೃತಕ ಬುದ್ದಿಶಕ್ತಿ ತಂತ್ರಜ್ಞಾನ […]
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ : “ಬ್ಲಾಕ್ ಚೈನ್ ತಂತ್ರಜ್ಞಾನದ ಸಂಶೋಧನಾ ದೃಷ್ಟಿಕೋನ” ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಗಾರ
ಉಡುಪಿ (ಜು,8) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಎಂಜಿನಿಯರಿಂಗ್ ವಿಭಾಗವು ಸಂಶೋಧನಾ ವಿಮರ್ಶೆ ಘಟಕದ ಸಹಯೋಗದೊಂದಿಗೆ “ಬ್ಲಾಕ್ ಚೈನ್ ತಂತ್ರಜ್ಞಾನದ ಕುರಿತು ಒಂದು ಸಂಶೋಧನಾ ದೃಷ್ಟಿಕೋನ” ಎಂಬ ವಿಷಯದ ಕುರಿತು ಆನ್ಲೈನ್ ಕಾರ್ಯಗಾರವನ್ನು ಜುಲೈ 7 ರಂದು ಆಯೋಜಿಸಲಾಗಿತ್ತು. ಟೆಕ್ವೆಡ್ ಲ್ಯಾಟ್, ಎ.ಎಸ್.ಕ್ಯೂ.ಆರ್ ಟೆಕ್ನಾಲಜಿ ಇದರ ಸಹ ಸಂಸ್ಥಾಪಕ ಶ್ರೀ ಆದಿತ್ಯ ಎಸ್ ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶ್ರೀ ಆದಿತ್ಯ ಅವರು ಕ್ರಿಪ್ಟೋ […]
ಬೆಳ್ಕಲ್ ತೀರ್ಥದ ಪಾವಿತ್ರ್ಯತೆ ಉಳಿವಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ಮನವಿಗೆ ಶಾಸಕ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಸ್ಪಂದನೆ
ವಂಡ್ಸೆ (ಜೂ, 8): ಹಿಂದು ಜಾಗರಣ ವೇದಿಕೆ ಬೈಂದೂರು ತಾಲೂಕಿನ ಕಾರ್ಯಕರ್ತರುಬೆಳ್ಕಲ್ ತೀರ್ಥದ ಪಾವಿತ್ರ್ಯತೆಯ ಉಳಿವಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ಮನವಿಗೆಬೈಂದೂರು ಶಾಸಕ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಸ್ಪಂದಿಸಿದ್ದಾರೆ. ಮನವಿಗೆ ಸ್ಪಂದಿಸಿದ ಶಾಸಕರು ಬೆಳ್ಕಲ್ ತೀರ್ಥದ ಕ್ಷೇತ್ರದ ಪಾವಿತ್ರ್ಯತೆ ಉಳಿವಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಸಿ, ತೀರ್ಥ ಸ್ಥಾನಕ್ಕೆ ಹೋಗುವವರು ಯಾವುದೇ ಮಾಂಸದ ಊಟ,ಪ್ಲಾಸ್ಟಿಕ್ ಬಾಟಲಿ,ಮದ್ಯ ತೆಗೆದುಕೊಂಡು ಹೋಗದಂತೆ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ […]
ಅಪಘಾತಗೊಂಡ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಮನೆಗೆ ಬೈಂದೂರು ಶಾಸಕರ ಭೇಟಿ
ವಂಡ್ಸೆ (ಜು, 8) : ಇತ್ತೀಚೆಗೆ ಬೈಕ್ ಅಪಘಾತಕ್ಕೆ ಒಳಗಾದ ಯಕ್ಷಗಾನ ಕಲಾವಿದ ಬಗ್ವಾಡಿಯ ಸುಬ್ರಹ್ಮಣ್ಯ ಮೊಗವೀರ ನ ಮನೆಗೆ ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮೀನುಗಾರಿಕೆ ಇಲಾಖೆಯಿಂದ ಶೀಘ್ರವಾಗಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ, ತಕ್ಷಣವೇ ಸಂಬಂಧಪಟ್ಟವರಿಗೆ ಶಾಸಕರು ಮಾತನಾಡಿದರು. ಜೊತೆಗೆ ಕಿರು ಮೊತ್ತದ ಆರ್ಥಿಕ ಸಹಾಯಧನ ನೀಡಿ ಧೈರ್ಯ ತುಂಬಿದ ಶಾಸಕರು ಮನೆ ನಿರ್ಮಿಸಲು ಬೇಕಾಗುವ ಹಂಚುಗಳನ್ನು […]