ಗಂಗೊಳ್ಳಿ (ಜು, 12) : ಸಾಧಕ ಹರೀಶ್ ಖಾರ್ವಿ ಮಾಲಿಕತ್ವದ ಸತೀಶ್ ಜಂಟ್ಸ್ & ಲೇಡೀಸ್ ಫಿಟ್ನೆಸ್ ಜಿಮ್ ಜುಲೈ 11 ರಂದು ಗಂಗೊಳ್ಳಿಯ ಮುಖ್ಯರಸ್ತೆಯ ತತ್ವಮಸಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಆಧುನಿಕ ಶೈಲಿಯ ಸುಸಜ್ಜಿತವಾದ ಈ ಜಿಮ್ ನ್ನು ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಮಿಸ್ಟರ್ ಕರ್ನಾಟಕ ಖ್ಯಾತಿಯ ದೇಹದಾಡ್ಯಪಟು ಸೋಮಶೇಖರ್ ಖಾರ್ವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ […]
Day: July 12, 2021
ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ
ಕುಂದಾಪುರ (ಜು, 12) : ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಜ್ಯೇಷ್ಠ ಇನ್ಫೋಟೆಕ್ ಸಂಸ್ಥೆ ಜುಲೈ 10ರಂದು ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿತ್ತು . ಸಂದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ 05 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ. ಉಮೇಶ್ ಶೆಟ್ಟಿಯವರು ನೇಮಕಾತಿ ಪತ್ರವನ್ನು ನೀಡಿದರು. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಕೋರಲಾಗಿದೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ : ಜುಲೈ 16 ರಂದು ‘ಶ್ರೀ ವರಲಕ್ಷ್ಮೀ ನಿಲಯ’ ಪ್ರವೇಶೋತ್ಸವ – ಬಡ ಕುಟುಂಬವೊಂದಕ್ಕೆ ನೂತನ ಮನೆ ಹಸ್ತಾಂತರ ಕಾರ್ಯಕ್ರಮ
ಬೈಂದೂರು (ಜು, 12): ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಪುತ್ರ ಮಾಸ್ಟರ್ ಪ್ರಜ್ವಲ್ ಜಿ. ಪೂಜಾರಿ ಯವರ ಜನ್ಮದಿನದ ಶುಭಸಂದರ್ಭದಲ್ಲಿ ಕೊಡೇರಿ ರವಳುಮನೆ ನಾಗಮ್ಮ ಎನ್ನುವ ಬಡ ಮಹಿಳೆಯ ಕುಟುಂಬಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಮೂಲಕ ಸಂಪೂರ್ಣವಾಗಿ ನೂತನ ಮನೆಯೊಂದನ್ನು ನಿರ್ಮಿಸಿಕೊಡಲಾಗಿತ್ತಿದ್ದು, ಆ ಕುಟುಂಬಿಕರ ನಿರ್ಣಯದಂತೆ ಇದೇ ಜುಲೈ 16 ರ ಶುಕ್ರವಾರದಂದು ನಾಗೂರು ಸಮೀಪದ ಕೊಡೇರಿಯಲ್ಲಿ ಸರಳವಾಗಿ ನೂತನ ಗೃಹದ ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಗದ್ದೆ – ನಾಟಿ ಕ್ರಷಿ ಕಾರ್ಯಕ್ರಮ
ಶಿವ೯(ಜು, 12): ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯಲ್ಲಿ ಯುವ ಜನತೆಗೆ ಆಸಕ್ತಿ ಕಡಿಮೆಯಾಗಿದೆ.ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾರ್ಯ ಇಂದು ಸಾಗುತ್ತಿದೆ.ಈ ನಿಟ್ಟಿನಲ್ಲಿ ಯುವಜನತೆ ಕ್ರಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆಯ ಜೊತೆಗೆ ಭೂಮಿಯನ್ನು ಹಸಿರಾಗಿಸಿ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿ ಎನ್ನುವ ಸದುದ್ದೇಶದೊಂದಿಗೆ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ […]