ಶಂಕರನಾರಾಯಣ (ಜು, 11): ಕುಂದಾಪುರ ತಾಲೂಕಿನ ಶಂಕರನಾರಾಯಣದ ಕುಪ್ಪಾರು ಪ್ರದೇಶದಲ್ಲಿ ಯುವಾಬ್ರಿಗೇಡ್ ಶಂಕರನಾರಾಯಣದ ವತಿಯಿಂದ “ಉಸಿರು ಹಂಚೋಣ” ಶೀರ್ಷಿಕೆಯಡಿಯಲ್ಲಿ ಮನೆ-ಮನೆಗೆ ಸಂಪರ್ಕ ಮಾಡಿ ವಿವಿಧ ರೀತಿಯ ಗಿಡಗಳನ್ನು ವಿತರಿಸಿ ,ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಘಟಕದ ಪ್ರಮೋದ್ ಶಂಕರನಾರಾಯಣ, ವಿಜಯ್ ಯಡಮಕ್ಕಿ, ಕಿರಣ್ ಉಳ್ಳೂರು-74, ನಂದನ ಶಂಕರನಾರಾಯಣ, ನಿತೀಶ್ ಶಂಕರನಾರಾಯಣ, ಶ್ರೀಶ ಶಂಕರನಾರಾಯಣ, ಚೇತನ್ ಶಂಕರನಾರಾಯಣ ಪಾಲ್ಗೊಂಡಿದ್ದರು.
Month: July 2021
ಎಕ್ಸಲೆಂಟ್ ಕಾಲೇಜ್ ಕುಂದಾಪುರ : ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳಿಗಾಗಿ “ಭವಿಷ್ಯದ ಬಾಗಿಲು” ಕಾರ್ಯಕ್ರಮ
ಕುಂದಾಪುರ (ಜು, 11): ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದಿರೆಯ ಆಡಳಿತಕ್ಕೆ ಒಳಪಟ್ಟ ಕುಂದಾಪುರದ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಸ್ಕೂಲ್ ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ “ಭವಿಷ್ಯದ ಬಾಗಿಲು” ಎನ್ನುವ ವಿನೂತನ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ಜುಲೈ 12 ಮತ್ತು 13 ರಂದು ಹಮ್ಮಿಕೊಂಡಿದೆ. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿರುವ ಡಾ|| […]
ಅಮ್ಮ ಸೇವಾ ವೇದಿಕೆ ಹೆಮ್ಮಾಡಿ : ಪದಾಧಿಕಾರಿಗಳ ಆಯ್ಕೆ ಮತ್ತು ಸಹಾಯ ಧನ ಸಂಗ್ರಹ
ಹೆಮ್ಮಾಡಿ (ಜು, 11): ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ನಿಗೆ ಶಾಶ್ವತವಾಗಿ ಮನೆಯೊಂದನ್ನು ನಿರ್ಮಿಸಿ ಕೊಡುವ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮ್ಮ ಸೇವಾ ವೇದಿಕೆ ಹೆಮ್ಮಾಡಿ ಇದರ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಜುಲೈ 11 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ಸಭಾಗ್ರಹದಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಉದಯ ಕುಮಾರ್ ಹಟ್ಟಿಯಂಗಡಿಯವರನ್ನು ಅಧ್ಯಕ್ಷರಾಗಿ, ಚಂದ್ರ ಬಿ. ಕಂಡ್ಲೂರು ರವರನ್ನುಕಾರ್ಯದರ್ಶಿಯಾಗಿ ಹಾಗೂ ಕೋಶಾಧಿಕಾರಿಯಾಗಿ ಶ್ರೀ ಜಗದೀಶ್ ಮಾರ್ಕೋಡು […]
ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ : ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುತ್ತ ಪಾದಯಾತ್ರೆಗೈಯುತ್ತಿರುವ ಚರಣ್ ಗಂಗೊಳ್ಳಿ ನೇತೃತ್ವದ ಯುವಕರ ತಂಡ
ಗಂಗೊಳ್ಳಿ (ಜು,11) : ಕುಂದಾಪುರ ತಾಲೂಕಿನ ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯುವಕರ ತಂಡವೊಂದು ಪಾದಯಾತ್ರೆಗೆ ಹೊರಟಿದೆ. ಸತತ ಹದಿಮೂರನೇ ವರುಷದ ಪಾದಯಾತ್ರೆ ಯಲ್ಲಿ ಸಾಗುತ್ತಿರುವ ಈ ತಂಡ ದಾರಿಯುದ್ದಕ್ಕೂ ರಕ್ತದಾನದ ಮಹತ್ವದ ಕುರಿತು ಅರಿವು ಮುಡಿಸುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈ ಭಕ್ತರ ತಂಡದ ನೇತೃತ್ವ ವಹಿಸಿರುವವರು ರಕ್ತದಾನಿ ಚರಣ್ ಗಂಗೊಳ್ಳಿ . ಸತತ ನಲವತ್ತು ಬಾರಿ ಅಗತ್ಯ ಉಳ್ಳವರಿಗೆ ಸ್ವತಃ ರಕ್ತದಾನ ಮಾಡುವುದರ […]
ವಿಶ್ವದ ಅತ್ಯಂತ ಕುಬ್ಬ ಕರು ಬಾಂಗ್ಲಾ ದೇಶದಲ್ಲಿ ಜನನ
ಬೆಂಗಳೂರು (ಜು, 10) : ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾ ದೇಶಲ್ಲಿ ವಿಶ್ವದ ಅತ್ಯಂತ ಕುಬ್ಬ ಕರು ಜನಿಸಿದೆ.ಕೇವಲ 26 ಇಂಚು (66 ಸೆಂ.ಮೀ) ಎತ್ತರ, 26 ಕೆಜಿ ತೂಕವಿರುವ ರಾಣಿ ಹೆಸರಿನ ಈ ಕುಬ್ಜ ಕರು ಬಾಂಗ್ಲಾ ದೇಶದ ರಾಜಧಾನಿಯಾದ ಢಾಕಾ ಸಮೀಪದ ಚರಿಗ್ರಾಮ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದೆ. ಈಗಾಗಲೇ ವಿಶ್ವದ ಅತಿ ಕುಬ್ಬ ಕರುವೆಂದು ಗಿನ್ನೆಸ್ ದಾಖಲೆಗೆ ಸೇರಿರುವ ಕರುವಿಗಿಂತ ಈ ಕರು 10 ಸೆಂ.ಮೀ. […]
ಜುಲೈ, 25 ಭಾನುವಾರದಂದು ಕೆಸೆಟ್ ಪರೀಕ್ಷೆ
ಮೈಸೂರು (ಜು, 10): ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ.ಎಸ್.ಇ.ಟಿ.) ಯನ್ನು ಜುಲೈ,25 ರ ಆದಿತ್ಯವಾರದಂದು ನಡೆಸಲು ನಿರ್ಧರಿಸಿದೆ.ದಿನಾಂಕ 11 ನೇ ಏಪ್ರಿಲ್ 2021 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಆದ್ದರಿಂದ, ಸದರಿ ಕೆಸೆಟ್ 2021 ಪರೀಕ್ಷೆಯನ್ನು 25.07.2021 (ಭಾನುವಾರ) ರಂದು ನಡೆಸಲು ತೀರ್ಮಾಸಲಾಗಿರುತ್ತದೆ. ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆಸೆಟ್ 2021 ರ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಕೆಸೆಟ್ ವೆಬ್ಸೈಟ್ನಲ್ಲಿ (http://kset.uni-mysore.ac.in) ಆಗಿಂದಾಗ್ಗೆ […]
ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನಿವೇಶನಾ ಹಕ್ಕುಪತ್ರಗಳನ್ನು ವಿತರಿಸಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ತ್ರಾಸಿ (ಜು, 10) : ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನಿವೇಶನಾ ಹಕ್ಕುಪತ್ರಗಳನ್ನು ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅರ್ಹ ಆರ್ಥಿಕ ದುರ್ಬಲರನ್ನು ಆಯ್ಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಇಂತಹ ಯೋಜನೆಗಳು ಜನರ ಅನುಕೂಲಕ್ಕೆ ಇರುವಂತದ್ದು, ಅದು ಅರ್ಹರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ನಲ್ಲೂ ನಿವೇಶನ ರಹಿತರ ಪಟ್ಟಿಯನ್ನು ಪಡೆದು ನಿವೇಶನ […]
ನೀನ್ಯಾರು?
ನೀನು ನನ್ನ ದೀಪವಾ …?ಇಲ್ಲ ಬಾಳಿನ ಬೆಳಕೆ…?ದೀಪ ಕಡಿಮೆ ಮಾತನಾಡುತ್ತದೆ.ಬೆಳಕು ಜಗಜಗಿಸುತ್ತದೆ…ದೀಪದ ಕೆಳಗಿನ ಕತ್ತಲು ನಾನಗಲಾರೆ.ಬೆಳಕಿನ ಆರತಿ ನಿನಾಗಿರುವೆ..ಕುಣಿಯೆಲಾರೆನು ನಾ.ನೆಲ ಅಂಕು ಡೊಂಕು..ಹೇಳಲಾರೆನು ನಾ ಈ ಜಗವೇ ಅಂಕು ಕೊಂಕು..ಗಾಳಿ, ದೀಪ, ಎರಡೂ ನೀನೆ.ಆರದಿರಲಿ ನನ್ನ ನಿನ್ನ ದೀಪ… ರಾಘವೇಂದ್ರ ಹಾರ್ಮಣ್, ಇಡೂರು ಕುಂಜ್ಞಾಡಿ
ಗಾಳ, ಮೀನು ಮತ್ತು ನಾನು
ಗಾಳದ ತುದಿಗೆಎರೆಹುಳವನ್ನು ಸಿಕ್ಕಿಸಿಇನ್ನೊಂದು ತುದಿಗೆ ಉದ್ದ ಹಗ್ಗವನ್ನು ಕಟ್ಟಿಹೊಳೆಗೆಸೆದು, ಹರಿವ ತಂಪಾದ ನೀರಲ್ಲಿಕಾಲಿಳಿಸಿ ಕುಳಿತಿದ್ದೇನೆಯಾವುದೋ ಹೆಸರಿನ ಮೀನೊಂದುಎರೆಹುಳಕ್ಕೆ ಬಲಿಯಾದ ತಕ್ಷಣಮೇಲಕ್ಕೆಳೆದುಕೊಳ್ಳಬೇಕು ಆದರೇನು?ನನ್ನ ಪಾದಗಳಿಗೆ ಕಚಗುಳಿ ಇಟ್ಟುನೀರಿನಾಳಕ್ಕೆ ಜಾರಿಬಿಡುವ ಮೀನುಗಾಳದ ಹತ್ತಿರವೂ ಸುಳಿಯುತ್ತಿಲ್ಲ ಆ ಕ್ಷಣಕ್ಕೆ ಒಂದು ಆಲೋಚನೆ!ಮೇಲಿನವನೂ ಇಳಿಬಿಟ್ಟರಬಹುದಲ್ಲನನಗೂ ಯಾವುದಾದರೊಂದು ಗಾಳವನ್ನುಒಂದಲ್ಲದಿದ್ದರೆ ಹತ್ತಾರು ಗಾಳಗಳನ್ನುಇಲ್ಲವಾದರೆ ಬಲೆಯನ್ನೇ ಬೀಸಿರಬಹುದಲ್ಲವೇ?ಮೂರ್ಖ ಸಿಕ್ಕಿಹಾಕಿಕೊಳ್ಳಲಿಯೆಂದು? ಬಹುಶಃ ನದಿಯೂ ಬಲೆ ಇರಬಹುದುಪುಟ್ಟ ಮೀನೊಂದು ಪಾಶವಿರಬಹುದುಮೀನಿನ ಬದಲು ಮೊಸಳೆಯೇ ಬರಬಹುದು ಹಣೆಯ ಮೇಲೆ ಬೆವರಿನ ಹನಿಗಳುಪಕ್ಕನೆ ಗಾಳವನ್ನು ಮೇಲೆಳೆದು […]
“ಮಳೆ ಹನಿ”
ಬಾನಿಂದ ಜಾರಿ ಹಂಚಿನ ಮೇಲೆರಗಿ ಯಾರಿಗೂ ಕಾಯದೆನನ್ನ ಬಳಿ ಬಂದು ಉಲ್ಲಾಸ ನೀಡಿದ್ದುಯಾರಿಗೂ ಗೊತ್ತಾಗಲಿಲ್ಲಕೆಲಸವಿಲ್ಲದೆ ಕುಳಿತ ನನ್ನೊಬ್ಬನನ್ನು ಬಿಟ್ಟು … ವರ್ಣಿನೆಗೂ ಮೀರಿದ ನಿನ್ನ ಮಾಯೆನಿನ್ನ ಕಿರು ಹನಿಯೇ ಪ್ರಕ್ರತಿಗೆ ಛಾಯೆ ಗೊತ್ತಾಗುತ್ತಿಲ್ಲವಲ್ಲಾ ನಿನ್ನ ತುಂತುರು ಹನಿಗಳ ಲೀಲೆ ಆಕಾಶ ಬಿರಿದು ಹೊರ ಬರಲು ಸಾಲು ನಿಂತ ಹನಿಗಳ ಸರದಿ.ನೀ ಹಿತ ಮಿತವಾಗಿ ಬಂದರಷ್ಟೇ ಜಗಕೆ ನೆಮ್ಮದಿಜೋರಾಗಿ ಸುರಿದರೆ ಮಾಡಬೇಕಾದಿತು ನಿನ್ನ ಮೇಲೆ ವರದಿ ✍️ಈಶ್ವರ ಸಿ. ನಾವುಂದ










