ಕುಂದಾಪುರ (ಆ, 13) : ಮುಂಬೈ ಪದ್ಮ ಕಮಲ ಕೇಟರರ್ಸ ಮಾಲಿಕರಾದ ಕಂಡ್ಲೂರು ಚಂದ್ರ ಮೊಗವೀರ ಹಾಗೂ ಶಿಕ್ಷಕಿ ಸುಜಾತ ಚಂದ್ರರ ಪುತ್ರ ಸುಚಿತ್ ಚಂದ್ರ ಕುಂದಾಪುರದ ವಿ.ಕೆ. ಆರ್. ಆಂಗ್ಲ ಮಾದ್ಶಮ ಶಾಲೆಯ ವಿದ್ಯಾರ್ಥಿಯಾಗಿದ್ದು ಈ ವರ್ಷ ನಡೆದ ಎಸ್ .ಎಸ್ .ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 98.24 ಅಂಕ ಪಡೆದಿರುತ್ತಾರೆ. ಶೈಕ್ಚಣಿಕ ಸಾಧನೆಯ ಜೊತೆಗೆ ಇತ ಕ್ರಿಕೆಟ್, ಕ್ವೀಜ್, ಚೆಸ್ ನಲ್ಲಿ ಆಸಕ್ತಿ ಹೊಂದಿದ್ದಾನೆ .
Day: August 13, 2021
ಶ್ರೀ ಕೃಷ್ಣನ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ (ಆ, 13) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉಡುಪಿಯ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಶ್ರೀಗಳ ಜೊತೆ ಸಮಾಲೋಚನೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದರು. ಪರ್ಯಾಯ ಮಠಾಧೀಶರು ಮುಖ್ಯಮಂತ್ರಿಗಳಿಗೆ ಮಠದ ವತಿಯಿಂದ ಗೌರವ ಸಮರ್ಪಿಸಿದರು.
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ವತಿಯಿಂದ ಬಡ ಮಹಿಳೆ ಕಾವೇರಿ ಮೊಗವೀರ್ತಿಯವರಿಗೆ ಮನೆ ನಿರ್ಮಾಣ
ಹೆಮ್ಮಾಡಿ (ಆ, 13) : ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಬೈಂದೂರು ತಾಲೂಕಿನ ನಾಡ ಗ್ರಾಮದ ಬಡ ಒಂಟಿ ಮಹಿಳೆ ಹೊರ್ನಿ ಮನೆ ಕಾವೇರಿ ಮೊಗವೀರ್ತಿಯವರಿಗೆ ನೂತನ ಮನೆ “ಅಮ್ಮ” ನಿರ್ಮಾಣ ಮಾಡಿ ಆಗಸ್ಟ್,15 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆಯೊಂದಿಗೆ ನೂತನ ಗ್ರಹದ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವೀಯ ನೆಲೆಯ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ […]
ಅಗಸ್ಟ್ 15 ರ ಸ್ವಾತಂತ್ರ ದಿನದಂದು ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಿರುವ ಗೋವಿಂದ ಬಾಬು ಪೂಜಾರಿ
ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ. ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ […]