ಶಿವಮೊಗ್ಗ(ಸೆ,27): ನಗರದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕುಂದಾಪುರ ಮೂಲದ ಡಾ.ಶುಭಾ ಮರವಂತೆ ಯವರನ್ನು ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಠಾನಗಳ ದೃಷ್ಠಿಯಿಂದ […]
Day: September 27, 2021
ಮಹಾಸತಿ ಚಿಕ್ಕ ಮೇಳದ ಕಲಾ ವೈಭವ ಸಂಸ್ಥಾಪಕ ತಿಮ್ಮಪ್ಪ ಭಾಗವತರ ತಂಡಕ್ಕೆ ಶುಭ ಹಾರೈಕೆಯೊಂದಿಗೆ
ಇಂದಿನ ದಿನಗಳಲ್ಲಿ ಯಕ್ಷಗಾನದ ಕಲಾ ಪ್ರಕಾರಗಳಲ್ಲೊಂದಾದ “ಚಿಕ್ಕಮೇಳ”ವನ್ನು ಸತತ ಹತ್ತು ವರ್ಷ ನಡೆಸಿಕೊಂಡು ಬರುವುದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕಮೇಳ ಬರುವ ವರ್ಷ ಇರುವುದಿಲ್ಲ. ಹೀಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆಯೊಳಗೆ ಕಲಾದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿಯ ಆರಾಧನಾ ಕಲೆಯನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬಂದವರು ಶ್ರೀ ತಿಮ್ಮಪ್ಪ ದೇವಾಡಿಗ ಮತ್ತು ಶ್ರೀ ನಾಗರಾಜ ಭಟ್. ಈ ಚಿಕ್ಕ […]
ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ:ಪಂಡೀತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ
ಕುಂದಾಪುರ ( ಸೆ,25):ಪಂಡೀತ್ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ಅಂಗವಾಗಿ ಕುಂದಾಪುರ ಮಂಡಲ ಕಾರ್ಯಾಲಯದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಪುಷ್ಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸ್ವಾತಂತ್ರ್ಯ ನಂತರ ಕುಟುಂಬ ರಾಜಕಾರಣದ ಪಕ್ಷವೊಂದು ಬಲಿಷ್ಠವಾಗಿ ಬೆಳೆದಿದ್ದ ಸಮಯದಲ್ಲಿ ರಾಷ್ಟ್ರೀಯತೆ, ರಾಷ್ಟ್ರಪರ ಚಿಂತನೆಯ ಪಕ್ಷವೊಂದು ಬೇಕು ಎನ್ನುವ ನೆಲೆಯಲ್ಲಿ ಜನಸಂಘ ಕಟ್ಟಿ ಅದನ್ನು ಸಂಘಟಿಸುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ದೀನದಯಾಳ್ […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ- (ಸಹವಾಸಗಳು ಸಾಮರ್ಥ್ಯ ಹಿಗ್ಗಿಸುವಂತಿರಲಿ – ಆರ್. ಉಪೇಂದ್ರ ಶೆಟ್ಟಿ)
ಕುಂದಾಪುರ (ಸೆ,27) :ನಿಮ್ಮನ್ನು ನೀವು ನಂಬಿ, ನಿಮ್ಮ ಸಾಮರ್ಥ್ಯವನ್ನು ನಂಬಿ, ಅದು ನಿಮ್ಮನ್ನು ಯಶಸ್ಸಿನತ್ತ ಸಾಗಿಸುತ್ತದೆ. ನಿಮ್ಮಿಂದ ಅಸಾಧ್ಯ ಎಂಬುದು ಯಾವುದು ಇಲ್ಲ. ಸಂಪರ್ಕವನ್ನು ಬೆಳೆಸಿ, ಸಾಮರ್ಥ್ಯವನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಿ. ಹಾಗೆ ಸಹಾಯ ಪಡೆದ ಸಂಸ್ಥೆಯನ್ನು ಸ್ಮರಿಸಿ ಎಂದು ಯುನಿವರ್ಸಲ್ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ನ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿಯವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಡಾ. ಬಿ.ಬಿ. ಹೆಗ್ಡೆ ಕಾಲೇಜಿನ […]
ಅರಾಟೆ : ವಾಜಪೇಯಿ ಬಸ್ಸು ತಂಗುದಾಣ ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಅರಾಟೆ (ಸೆ, 27) : ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಅರಾಟೆ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ, ದೇಶ ಕಂಡ ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹೆಸರಿನಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷದ ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ […]










