ಕಷ್ಟ ನಷ್ಟಗಳ ಭಯದಿಂದ ಕೆಲಸವನ್ನೇ ಆರಂಭ ಮಾಡದವರು ದುರ್ಬಲರು.ವಿಘ್ನಗಳು ಎದುರಾದಾಗ ಕೆಲಸವನ್ನು ನಿಲ್ಲಿಸುವವರು ಹೇಡಿಗಳು. ವಿಘ್ನಗಳನ್ನು ನಿವಾರಿಸಿಕೊಂಡು ಗುರಿ ಸಾಧಿಸುವವರು ಶ್ರೇಷ್ಠರು.ವಿಘ್ನಗಳ ಅಂಜಿಕೆಯಿಂದ ಕೆಲಸವನ್ನು ಆರಂಭ ಮಾಡದೆ ದುರ್ಬರಂತಿರುವವರು ಹೆಚ್ಚಿರುವ ಈ ಕಾಲಘಟ್ಟದಲ್ಲಿ ನಾವಿಂದು ಪರಿಚಯಿಸುತ್ತಿರುವ ಈ ವ್ಯಕ್ತಿ ವಿಘ್ನಗಳನ್ನು ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಂಡು, ಅವಿರತ ಪ್ರಯತ್ನದಿಂದಾಗಿ ಯಶಸ್ಸಿನತ್ತ ಸಾಗುತ್ತಾ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಿದವರು, ಬಾಲ್ಯದಿಂದಲೂ ಹೋರಾಟಗಳನ್ನು ಎದುರಿಸಿ ಭವಿಷ್ಯದಲ್ಲಿ ಸಾಧಕನಾಗಿಯೇ ಆಗುತ್ತೇನೆ ಎಂಬ ಸ್ಪಷ್ಟ ದಿಸೆಯಲ್ಲಿ ಕಲ್ಲು ಮುಳ್ಳುಗಳನ್ನೇ […]
Day: October 8, 2021
ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದನೇ ಮನೆ ಹಸ್ತಾಂತರ
Views: 357
ಕೋಟೇಶ್ವರ-(ಅ,8): ಕೋಟೇಶ್ವರ ಸಮೀಪದ ಕಾಳಾವರದಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಗೋವಿಂದ ಬಾಬು ಪೂಜಾರಿ ಯವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು. ಕಾಳಾವರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರ ಮನೆ ನಿರ್ಮಾಣದ ಕನಸನ್ನು ಆಶ್ರಯದಾತ ಡಾ.ಗೋವಿಂದ ಬಾಬು ಪೂಜಾರಿಯವರು ನನಸು ಮಾಡಿದ್ದಾರೆ.ರಿಕ್ಷಾ ಡ್ರೈವರ್ ಒಬ್ಬರ ಮನೆ ನಿರ್ಮಾಣಕ್ಕೆ ಎದುರಾದ ಕಷ್ಟವನ್ನು ಗಮನಿಸಿದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ […]