ಗಂಗೊಳ್ಳಿ(ಅ,12): ಸೇವಾ ಸಂಘ(ರಿ.) ಗಂಗೊಳ್ಳಿಯ 47 ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಎರಡನೇ ದಿನವಾದ ಮಂಗಳವಾರದಂದು ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ಗಣನಾಯಕಾಯ, ನಮ್ಮಮ್ಮ ಶಾರದೆ, ಎಂತ ಅಂದ ಎಂತ ಚೆಂದ, ಶಾರದೆ ದಯೆ ತೋರಿದೆ, ಬ್ರಹ್ಮ ಮುಕುಟೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ತಂಬೂರಿ ಮೀಟಿದವ ಮೊದಲಾದ ಗೀತೆಗಳನ್ನು ಸಾಕ್ಸೋಫೋನ್ ವಾದನದ ಮೂಲಕ […]
Day: October 13, 2021
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಶಾರದಾ ಪೂಜೆ
ಕುಂದಾಪುರ (ಅ, 11) : ಇಲ್ಲಿನ ಡಾ|ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನವರಾತ್ರಿಯ ಆಚರಣೆಯ ಭಾಗವಾಗಿ ಶಾರದಾ ಪೂಜೆ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಮಾತನಾಡಿ ನವರಾತ್ರಿಯ ಶುಭಾಶಯ ಕೋರಿ ಸರ್ವರಿಗೂ ಶಾರದಾದೇವಿಯು ಆಯುರಾರೋಗ್ಯ ನೀಡಿ ಕಾಪಾಡಲಿ ಎಂದರು. ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕ ಮಹೇಶ್ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ […]
ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ : ಸಿಎ ಮತ್ತು ಸಿ.ಎಸ್. ಕೋರ್ಸ್ ಗಳ ಕುರಿತು ಮಾಹಿತಿ ಕಾರ್ಯ
ವಂಡ್ಸೆ (ಅ, 12) : ವರಸಿದ್ಧಿ ವಿನಾಯಕ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು ಕೆರಾಡಿ ಇದರವಾಣಿಜ್ಯ ವಿಭಾಗದ ವತಿಯಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಿದ್ದು, ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿ ಎಸ್ ಕೋರ್ಸ್ ಗಳ ಅಧ್ಯಯನ, ಪರೀಕ್ಷಾ ಸಿದ್ಧತೆ ಹಾಗೂ ಅದಕ್ಕಿರುವ ವಿಪುಲ ಉದ್ಯೋಗವಕಾಶಗಳ ಕುರಿತು ಚಾರ್ಟೆಡ್ ಅಕೌಂಟೆಂಟ್ ಗುರುರಾಜ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಕುಮಾರ್ ಆರ್ ವಹಿಸಿದ್ದು, […]
ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈಶ್ವರ್ ಮಲ್ಪೆ ಆಯ್ಕೆ
ಕೋಟ (ಅ, 12) : ಪ್ರತಿವರ್ಷದಂತೆ ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುತ್ತಿರುವ ಶ್ರೀಅಘೋರಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ. ಈಶ್ವರ ಮಲ್ಪೆ ಯವರನ್ನು ಆಯ್ಕೆಗೊಳಿಸಲಾಗಿದ್ದು ನವಂಬರ್ 13ರಂದು ಸಂಜೆ ಸಂಜೆ ಸಾಲಿಗ್ರಾಮದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಲಿದೆ ಎಂದು ಶ್ರೀ ಅಘೋರೇಶ್ವರ ಕಲಾರಂಗದ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ […]