ಉಚ್ಚಿಲ(ನ,21): ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ, ಎಂ. ಆರ್.ಪಿ.ಎಲ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ನಿರ್ಮಾಣಗೊಂಡ “ಮೊಗವೀರ ಭವನದ ಉದ್ಘಾಟನಾ ಸಮಾರಂಭ” ನ,21 ರಂದು ಬಹಳ ಅದ್ದೂರಿಯಾಗಿ ನಡೆಯಿತು. ಉಡುಪಿ ಶಾಸಕ ಶ್ರೀ ಕೆ ರಘುಪತಿ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ನಾಡೋಜ ಜಿ. ಶಂಕರ್,ಶ್ರೀಮತಿ ಶಾಲಿನಿ ಜಿ . […]
Day: November 21, 2021
ಪ್ರೇಕ್ಷಕರ ಬಹುನಿರೀಕ್ಷೆಯ ‘ಕಪೋ ಕಲ್ಪಿತಂ’ ಕನ್ನಡ ಚಿತ್ರ ನ. 26 ರಂದು ತೆರೆಗೆ
ಮಂಗಳೂರು (ನ, 21) : ಅಕ್ಷರಪ್ರೊಡಕ್ಷನ್ ಹಾಗೂ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ನಡಿ ಮೂಡಿ ಬಂದಿರುವ ‘ಕಪೋ ಕಲ್ಪಿತಂ’ ಕನ್ನಡ ಚಿತ್ರ ನ.26 ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಪೋ ಕಲ್ಪಿತಂ ಚಿತ್ರದ ನಿರ್ದೇಶಕಿ ಹಾಗೂ ನಾಯಕಿ ಸುಮಿತ್ರ ಗೌಡ ಚಿತ್ರ ಬಿಡುಗಡೆಯ ದಿನಾಂಕವನ್ನು ತಿಳಿಸಿದರು. ನಮ್ಮ ಕರಾವಳಿಯ ಅನೇಕ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದು, ದ.ಕ., ಉಡುಪಿ, ಬೆಳ್ತಂಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು ಚಿತ್ರ […]
ರಾಜ್ಯಮಟ್ಟದ ಕರಾಟೆಯಲ್ಲಿ ಗಂಗೊಳ್ಳಿಯ ಕೆ.ಡಿ.ಎಫ್ ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿಯ ವಿದ್ಯಾರ್ಥಿಗಳ ಉತ್ತಮ ಸಾಧನೆ
ಗಂಗೊಳ್ಳಿ(ನ ,21): ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಕಟಾ ಮತ್ತು ಕುಮಿಟೊ ಭಾಗದಲ್ಲಿ ವಿಜೇತರಾದ ಗಂಗೊಳ್ಳಿಯ ಕೆ.ಡಿ.ಎಫ್ ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ತರಬೇತುದಾರರಾದ ಟಿ ಶಶಾಂಕ್ ಶೆಣೈ ಇವರಿಗೆ ತರಬೇತಿ ನೀಡಿದ್ದರು.ನಿಂತವರು : ಶ್ಯಾಮ್ […]
ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಸಮವಸ್ತ್ರ ವಿತರಣೆ
ಗಂಗೊಳ್ಳಿ(ನ ,20): ಇಲ್ಲಿನ ಸರಸ್ವತಿ ವಿದ್ಯಾಲಯ ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ಅಧ್ಯಾಪಕರ ಆರ್ಥಿಕ ಸಹಾಯದೊಂದಿಗೆ ಪ್ರತಿವರ್ಷದಂತೆ ಈ ಬಾರಿ ಕೂಡ ಉಚಿತವಾಗಿ ಸಮವಸ್ತ್ರಗಳನ್ನು ನೀಡಲಾಯಿತು. ಜಿ. ಎಸ್. ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಉಪಪ್ರಾಂಶುಪಾಲರಾದ ಉಮೇಶ್ ಕರ್ಣಿಕ್ ಮತ್ತು ಅಧ್ಯಾಪಕರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಆರಂಭದ ದಿನಗಳಲ್ಲಿ ಇಲ್ಲಿನ […]
ಕಾಳಾವರ ಷಷ್ಠಿ ಪ್ರಯುಕ್ತ ಪೂರ್ವಭಾವಿ ಸಭೆ
ಕಾಳಾವರ(ನ,20): ಕಾಳಾವರ ಶ್ರೀ ಮಹಾಲಿಂಗೇಶ್ವರ ಹಾಗೂ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ವರ್ಷಂಪ್ರತಿ ನಡೆಯುವ ಷಷ್ಠಿ ಪ್ರಯುಕ್ತ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹೆಗ್ಡೆ ಶಾನಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಷಷ್ಠಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮಿತಿಯ 9 ಸದಸ್ಯರು ಅನಾವರಣಗೊಳಿಸಿದರು. ಶ್ರೀ ಚಂದ್ರಶೇಖರ ಹೆಗ್ಡೆ ಯವರು ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿ ಉತ್ಸವಕ್ಕೆ ಗ್ರಾಮಸ್ಥರ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ಪೊಲೀಸ್ […]