ಉಡುಪಿ (ನ,28); ಉಡುಪಿ ಜಿಲ್ಲಾ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಂವಿಧಾನ ದಿನಾಚರಣೆಯನ್ನು ನ,26 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಸಿದ್ಧ ಜಾನಪದ ಗಾಯಕರು ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು ಸನ್ಮಾನಿಸಿ ಗೌರವಿಸಿದರು.
Day: November 28, 2021
ಈಶ್ವರ್ ಮಲ್ಪೆಯವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ
ಉಡುಪಿ (ನ,28); ಉಡುಪಿಯ ಪ್ರತಿಷ್ಠಿತ ಸಂಸ್ಥೆಯಾದ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿವರ್ಷ ಮಹಾಸಭೆಯ ದಿನ ಸಮಾಜ ಸೇವಕರನ್ನು ಗುರುತಿಸಿ ಅರ್ಹ ವ್ಯಕ್ತಿಗಳಿಗೆ ನೀಡುವ ಸೇವಾ ರತ್ನ ಪ್ರಶಸ್ತಿಯನ್ನು ಈ ವರುಷ ಮುಳುಗು ತಜ್ಞ ,ಜೀವರಕ್ಷಕ ,ಆಪದ್ಬಾಂಧವ ಈಶ್ವರ್ ಮಲ್ಪೆ ಬಲರಾಮನಗರ ಇವರಿಗೆ 2021 ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ . ಈಶ್ವರ್ ಮಲ್ಪೆಯವರು ಹಗಲು ರಾತ್ರಿ ಯನ್ನದೇ 24 ಗಂಟೆ ಜನಸೇವೆಯಲ್ಲಿದ್ದು, ಇಲ್ಲಿಯತನಕ […]
ಮುಳ್ಳಿಕಟ್ಟೆ: ಎಚ್. ಎಸ್. ಫ್ಯೂಯಲ್ಸ್ ಶುಭಾರಂಭ
ಮುಳ್ಳಿಕಟ್ಟೆ(ನ,28): ಮುಳ್ಳಿಕಟ್ಟೆ ಹೊಸಾಡುವಿನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಇಂಡಿಯನ್ ಆಯಲ್ ಕಾರ್ಪೋರೇಶನ್ ನ ಎಚ್. ಎಸ್. ಫ್ಯೂಯಲ್ಸ್ ಇತ್ತೀಚೆಗೆ ಶುಭಾರಂಭಗೊಂಡಿತು. ಬೈಂದೂರು ಶಾಸಕ ಶ್ರೀ ಬಿ ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಬ್ಲಾಡಿ ಮಂಜಯ್ಯ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ,ಡಾ|ಅತುಲ್ ಕುಮಾರ್ ಶೆಟ್ಟಿ, ಫೆಲಿಕ್ಸ್ ಕ್ರಾಸ್ಟಾ ,ಪ್ರಸನ್ನ ಶೆಟ್ಟಿ ,ವರುಣ್ ಉಪ್ಪಿನಲ್ ,ಬಿ […]
ಸ್ಟೆಲ್ಲಾಮಾರಿಸ್ ಪ್ರೌಢಶಾಲೆ ಗಂಗೊಳ್ಳಿ: ಕಬಡ್ಡಿ ಮ್ಯಾಟ್ ಉದ್ಘಾಟನೆ
ಗಂಗೊಳ್ಳಿ (ನ,28): ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ ನ.27ದಂದು ಕಬಡ್ಡಿ ಅಂಕಣದ ಆಧುನಿಕ ವ್ಯವಸ್ಥೆಯಾದ ಕಬ್ಬಡ್ಡಿ ಮ್ಯಾಟ್ ನ್ನು ಉದ್ಯಮಿ ಹಾಗೂ ಶಾಲಾ ಅಭಿಮಾನಿಯಾದ ಶ್ರೀಯುತ ವೀರೇಶ್ ರವರು ಉದ್ಘಾಟಿಸಿದರು. ಇವರೊಂದಿಗೆ ಎಲ್ಲಾ ದಾನಿಗಳು ಇದನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಸ್ಥಳೀಯ ಚರ್ಚಿನ ವಂದನೀಯ ಧರ್ಮಗುರುಗಳಾದ ಥಾಮಸ್ ರೋಷನ್ ಆಶೀರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ತೆರೇಸಾ ಜ್ಯೋತಿ, ಮುಖ್ಯೋಪಾಧ್ಯಾಯಿನಿ ಭಗಿನಿ ಕ್ರೇಸೆನ್ಸ್, ಹಳೆವಿದ್ಯಾರ್ಥಿಗಳಲ್ಲಿ ಪ್ರಮುಖರಾದ ಶ್ರೀಯುತ ಮಂಜುನಾಥ,ಶಿಕ್ಷಕ ಶಿಕ್ಷಕೇತರ ವೃಂದ […]
ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಎನ್.ಸಿ.ಸಿ ದಿನಾಚರಣೆ
ಶಿರ್ವ(ನ,29): ಇಂದು ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸಮಯ ಪ್ರಜ್ಞೆ ಮೂಡಿಸುವ ಸಂಘಟನೆಗಳಲ್ಲಿ ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾದ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್.ಸಿ.ಸಿ) ಒಂದಾಗಿದ್ದು,ಯುವಜನರಲ್ಲಿ ರಾಷ್ಟ್ರಪ್ರೇಮ,ಸಮಾಜ ಸೇವಾಗುಣಗಳನ್ನು, ತಮ್ಮ ವ್ಯಕ್ತಿತ್ವ ವಿಕಸನ,ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಾತ್ರವಲ್ಲದೆ ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಲು ಎನ್.ಸಿ.ಸಿ ಸಹಾಯಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಭೂಯುವ ಸೇನಾ ದಳದಿಂದ ಏರ್ಪಡಿಸಿದ 73ನೇ ಎನ್.ಸಿ.ಸಿಯ ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| […]
ಇ.ಸಿ.ಆರ್ ಕಾಲೇಜು : ಸಂವಿಧಾನ ದಿನಾಚರಣೆ
ಮಧುವನ(ನ,29): ಇಲ್ಲಿನ ಇ ಸಿ ಆರ್ ಕಾಲೇಜಿನಲ್ಲಿ ನ,26ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ್ ಸಾವಳಸಂಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂವಿಧಾನದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜನಾಧಿಕಾರಿ ಹಾಗೂ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಶ್ರೀ ಅಶೋಕ್ ಜೋಗಿ ಯವರು ಸಂವಿಧಾನ ರಚನೆ, ಮಹತ್ವ, ಪ್ರಜೆಗಳ ಹಕ್ಕು ಕರ್ತವ್ಯದ ಕುರಿತು ಮಾತನಾಡಿದರು. ಸಂವಿಧಾನ ರಚನೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ […]
ಶ್ರೀ ಧವಲಾ ಕಾಲೇಜು ಮೂಡಬಿದಿರೆ: ಸಂವಿಧಾನ ದಿನಾಚರಣೆ
ಮೂಡಬಿದಿರೆ(ನ,27): ಇಲ್ಲಿನ ಶ್ರೀ ಧವಲಾ ಕಾಲೇಜಿನ ಫೌಂಡೇಶನ್ ಕೋರ್ಸ್ ಮತ್ತು ಮಾನವಹಕ್ಕುಗಳ ಸಂಘಟನೆಯ ಆಯೋಜನೆಯಲ್ಲಿ ನ,26 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಹಾವೀರ ಜೈನ್ ಉಪನ್ಯಾಸಕರು ಪಿಯು ಕಾಲೇಜ್ ಮೂಡಬಿದ್ರಿ ಇವರು ಆಗಮಿಸಿ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವ ಜನರು ಹೇಗೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಒಬ್ಬ ರಾಷ್ಟ್ರೀಯವಾದಿ ಸಮಾಜದ ಚಿಂತಕ ಆಗಬೇಕು ಎನ್ನುವುದರ ಬಗೆಗೆ ಬಹಳ ಪ್ರಮುಖವಾಗಿ ವಿಶ್ಲೇಷಿಸಿದರು. ತಮ್ಮ ಭಾಷಣದಲ್ಲಿ […]
ಸರಸ್ವತಿ ವಿದ್ಯಾಲಯದಲ್ಲಿ ಸಂವಿಧಾನ ದಿವಸ್ ಆಚರಣೆ
ಗಂಗೊಳ್ಳಿ (ನ,29): ನಮ್ಮ ಭಾರತದ ಸಂವಿಧಾನದ ಬಗೆಗೆ ಅರಿವನ್ನು ಮೂಡಿಸುವಲ್ಲಿ ಪ್ರಾಥಮಿಕ ಹಂತದಿಂದಲೇ ಪಠ್ಯಪುಸ್ತಕಗಳಲ್ಲಿ ಅದರ ಬಗೆಗಿನ ಹೆಚ್ಚಿನ ವಿವರಗಳನ್ನು ನೀಡಬೇಕಿದೆ. ದೇಶದ ಜವಾಬ್ದಾರಿಯುತ ನಾಗರಿಕನಾಗಿ ಸಂವಿಧಾನದ ಅರಿವನ್ನು ಹೊಂದಿರಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಆಂಗ್ಲಭಾಷಾ ಉಪನ್ಯಾಸಕರಾದ ಥಾಮಸ್ ಪಿ. ಎ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸಂವಿಧಾನ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ […]
ಹೆಮ್ಮಾಡಿ:ಮನೆ ಮನೆ ಭಜನೆ ಕಾರ್ಯಕ್ರಮ
ಹೆಮ್ಮಾಡಿ(ನ,28): ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ, ವಂಡ್ಸೆ ವಲಯ ಭಜನಾ ಒಕ್ಕೂಟ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಸಹಯೋಗದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಯವರ 20 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮನೆ ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಭಜನೆ ಶ್ರೀ ರಾಮನಾಮ ಹರಿ ಸ್ಮರಣೆ, 108 ಮನೆಯಂಗಳದಲ್ಲಿ ಭಜನಾ ಕಾರ್ಯಕ್ರಮ ಮತ್ತು ಭಜನಾ ತಾಳ […]