ವಂಡ್ಸೆ(ನ,7): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಜ್ಞಾನಿ ಡಾ. ದಿನೇಶ್ ಶೆಟ್ಟಿ, ಶ್ರೀ ಬಿ. ರಾಮ ಟೈಲರ್ ಹಾಗೂ ಉಪ್ಪುಂದ ಶ್ರೀಧರ ಗಾಣಿಗರನ್ನು ಬೈಂದೂರು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ತಮ್ಮ ಗ್ರಹ ಕಛೇರಿಯಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಿದರು.
Month: November 2021
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಬಂಟಕಲ್(ನ,8): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 8ನೇ ವರ್ಷದ ಪದವಿ ಪ್ರದಾನ ಸಮಾರಂಭವು ನ, 07 ರ ಭಾನುವಾರದಂದು ಕಾಲೇಜಿನ ಆವರಣದಲ್ಲಿ ಜರುಗಿತು. ಮಣಿಪಾಲದ ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಶ್ರೀ ರಾಮ ನಾಯಕ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಪದವಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಗೌರವ ಆತಿಥಿಗಳಾಗಿ ಭಾಗವಹಿಸಿದ ಮಾಹೆ ಮಣಿಪಾಲದ ಕುಲಸಚಿವರಾದ ಡಾ. ನಾರಾಯಣ ಸಭಾಹಿತ್ ರವರು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ,ಪದವೀಧರರು ತಮ್ಮ ವ್ಯತ್ತಿ ಜೀವನದಲ್ಲಿ […]
ಜೀವರಕ್ಷಕ ಭಾಸ್ಕರ್ ತಳಗೊಡುರವರ ಬದುಕನ್ನು ಬೆಳಗಿಸಿದ ದೀಪಾವಳಿ
ಜೀವರಕ್ಷಕ, ಮುಳುಗು ತಜ್ಞ ಭಾಸ್ಕರ್ ಕಳಸ ತಳಗೊಡು, ಈ ಬಡ ಸಂಸಾರ ಆ ಮಕ್ಕಳ ಮೊಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಖುಷಿ ತರಿಸಿದ ಎಲ್ಲಾ ಸಮಾಜ ಸೇವಕರಿಗೂ ಶಿರಬಾಗಿ ನಮಸ್ಕರಿಸುವೆ. ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಭಾಸ್ಕರ್ ರವರ ಮೂರು ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ಪುಸ್ತಕವನ್ನು ಜೋಡಿಸಿಡಲು ಕಾಪಾಟ್ ಒಂದನ್ನು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ. ಕಳಸದ ಕೃಷಿಕರು, ಪತ್ರಕರ್ತರಾದ ರವಿ ಕೆಳಂಗಡಿ […]
ಸಂಜಿತ್ ಎಮ್ ದೇವಾಡಿಗನಿಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ ಪ್ರಶಸ್ತಿ
ಗಂಗೊಳ್ಳಿ(ನ,7): ಕಾರ್ಕಳ ತಾಲೂಕು ಅಜೆಕಾರುವಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಮಾಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಪ್ರಶಸ್ತಿಗೆ ಕುಂದಾಪುರದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಮ್ ದೇವಾಡಿಗ ಇವರು ಆಯ್ಕೆಯಾಗಿರುತ್ತಾರೆ. ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಸಂಜಿತ್ ಎಮ್ ದೇವಾಡಿಗ ಗಂಗೊಳ್ಳಿಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಮತ್ತು ಚಿತ್ರಕಲಾ ಶಿಕ್ಷಕ […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ (ಮರೆಯಾಗುತ್ತಿರುವ ಸಂಪ್ರದಾಯದ ಮೆಲುಕು : ಪ್ರೊ.ಕೆ .ಉಮೇಶ್ ಶೆಟ್ಟಿ)
ಕುಂದಾಪುರ (ನ,07): ನಮ್ಮ ಹಿರಿಯರ ಆಚರಣೆಗಳಲ್ಲಿ ವೈಜ್ಞಾನಿಕ ಅರ್ಥ ಇರುತ್ತದೆ. ಅದನ್ನೆಲ್ಲ ಅನುಸರಿಸಿದ ಕಾರಣಕ್ಕೆಅವರು ಆಯುಷ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಂಡರು. ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಎಲ್ಲಾ ಹಬ್ಬದ ಆಚರಣೆಯ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ ಎಂದು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿಯವರು ತಿಳಿಸಿದರು. ಅವರು […]
ಉಡುಪಿ: ನ ,08 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,06): ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಉಡುಪಿ ಜಿಲ್ಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮವು ನ,8 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರು ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡ ರವರು […]
ಗಂಗೊಳ್ಳಿ: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ಗೋಪೂಜಾ ಕಾರ್ಯಕ್ರಮ
ಗಂಗೊಳ್ಳಿ(ನ,5):ಇಲ್ಲಿನ ವೀರೇಶ್ವರ ಹಾಗೂ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ದೀಪಾವಳಿಯ ಸಂಧರ್ಭದಲ್ಲಿ ವಿಶೇಷವಾಗಿ ಆಚರಿಸಲಾಗುವ ಗೋಪೂಜಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಧರ್ಮಧರ್ಶಿಗಳಾದ ಅಪ್ಪಣ್ಣ ಹೆಗ್ಡೆಯವರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡರಾದ ಪ್ರಿಯದರ್ಶಿನಿ ಬಿಜೂರು, ಸುರೇಶ್ ಬಟ್ವಾಡಿ, ಪುಷ್ಪರಾಜ್ ಶೆಟ್ಟಿ, ಅನಂದ ಖಾರ್ವಿ ಉಮೇಶ್ ಮೇಸ್ತ, ಹರೀಶ್ ಮೇಸ್ತ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ […]
ಕುಂದಾಪುರ :ಶಾಸನ ಅಧ್ಯಯನ ತರಬೇತಿ ಕಾರ್ಯಗಾರ
ಕುಂದಾಪುರ (ನ,5): ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ ,ಸ್ವರಾಜ್ಯ ೭೫ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಇವರ ವತಿಯಿಂದ ಡಾ.ಬಿ.ಬಿ.ಹೆಗ್ಡೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಗಳಿಗೆ ಒಂದು ದಿನದ ಶಾಸನದ ಬಗ್ಗೆ ಮಾಹಿತಿ,ಪಡಿಯಚ್ಚು ತೆಗೆಯುವ ಹಾಗೂ ತರಬೇತಿಯೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ ನ,03 ರಂದು ಕಂದಾವರ ಶ್ರೀ ಮಹಾಗಣಪತಿ ,ಈಶ್ವರ ,ಪಾವ೯ತಿ ದೇವಸ್ಥಾನ ಕೊಳನಕೋಡು ನಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುಭಾಸ್ ನಾಯಕ್ ಬಂಟಕಲ್ಲು ಪುರಾತತ್ವ ಹಾಗೂ […]
ಕೋಟೇಶ್ವರ: ನ, 19 ಕ್ಕೆ ಕೋಟಿಲಿಂಗೇಶ್ವರ ದೇಗುಲದ ಕೊಡಿಹಬ್ಬ
ಕೋಟೇಶ್ವರ (ನ, 03) : ಕುಂದಾಪುರ ತಾಲೂಕಿನ ಅತೀ ದೊಡ್ಡ ಜಾತ್ರೆ ಪುರಾಣ ಪ್ರಸಿದ್ದ ಧ್ವಜಪುರ – ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿ ಹಬ್ಬ) ಇದೇ ನ.19 ರಂದು ನಡೆಯಲಿದೆ. ನ. 19ರಂದು ನಡೆಯಲಿರುವ ಕೊಡಿಹಬ್ಬ ಉತ್ಸವ ಸರಳ ಸಂಭ್ರಮದಿಂದ ಆಚರಿಸಲು ತಾಲೂಕಿನ ಪ್ರತಿಯೋರ್ವ ಭಕ್ತರು ಸಹಕರಿಸಬೇಕೆಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎಂ. ಪ್ರಭಾಕರ ಶೆಟ್ಟಿ ಭಕ್ತರಲ್ಲಿ ಕೋರಿಕೊಂಡಿದ್ದಾರೆ.
ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ಕ್ಲಬ್ ರನ್ನರ್ ಅಪ್
ಗಂಗೊಳ್ಳಿ (ನ, 04) : ರೋಟರಾಕ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರೋಟರಾಕ್ಟ್ ಇಂಡೋರ್ ಸ್ಫೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ರನ್ನರ್ ಅಪ್ ಸ್ಥಾನವನ್ನು ಪಡೆಯಿತು. ಅರ್ಲಿ ಬರ್ಡ್, ಅತಿ ಹೆಚ್ಚು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ಶ್ರೀನಿಧಿ […]