ಕುಂದಾಪುರ(ಡಿ,02): ಸುಣ್ಣಾರಿಯ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೊಸ್ಕರ ಸುನಾದ ಸಂಗಮ ಎನ್ನುವ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡ್ರಾಮಾ ಜೂನಿಯರ್ ಖ್ಯಾತಿಯ ಸಿಂಚನ ಕೋಟೇಶ್ವರ ಯವರು ಪ್ರತಿಯೊಂದು ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಕ್ಕಂತಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್. ರಮೇಶ್ ಶೆಟ್ಟಿ ಯವರು ಪ್ರಾಸ್ತವಿಕ […]
Day: December 2, 2021
ಮೂಡ್ಲಕಟ್ಟೆ ಎಂ ಐ ಟಿ: ಯೂತ್ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ(ಡಿ .02): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಹಯೋಗದೊಂದಿಗೆ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು , ಅದರ ಮಹತ್ವವನ್ನು ವಿವರಿಸುತ್ತ ಇಂದಿನ ಯುವ ಪೀಳಿಗೆ ಸಮಾಜಮುಖಿ ಕೆಲಸಗಳಲ್ಲಿ ಸಾದ್ಯವಾದಷ್ಟು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು […]
ಭಾವಗೀತೆ ಸ್ಪರ್ಧೆ:ಅಕ್ಷತಾ ವಿನಯ್ ಪ್ರಥಮ ಸ್ಥಾನ
ಗಂಗೊಳ್ಳಿ (ಡಿ,2): ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ನಡೆದ ರೋಟರಿ 3182ನ ಜಿಲ್ಲಾ ರೋಟರಿ ಸಾಂಸ್ಕೃತಿಕ ಸ್ಪರ್ಧೆ 2021-22ರ ಏಕವ್ಯಕ್ತಿ ಭಾವಗೀತೆ ಸ್ಪರ್ಧೆಯಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ನ ಸದಸ್ಯೆ ಅಕ್ಷತಾ ವಿನಯ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಡಿ.10 ರಂದು ಉತ್ತಮದಿಂದ ಅತ್ಯುತ್ತಮ ಶಿಕ್ಷಕರಾಗುವತ್ತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮ
ಉಡುಪಿ (ಡಿ,2): ಶಿಕ್ಷಕ ವೃತ್ತಿಯನ್ನು ಸಮಾಜದ ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ತಪ್ಪುಗಳನ್ನು ತಿದ್ದಿ ಸರಿದಾರಿಯಲ್ಲಿ ಕೊಂಡೊಯ್ಯುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ. ಪರಿಣಾಮಕಾರಿ ಬೋಧನಾಕಲೆಯೂ ಶಿಕ್ಷಕ ವೃತ್ತಿಯ ಅಗತ್ಯತೆಗಳಲ್ಲೊಂದು. ಶಿಕ್ಷಕರು ಇನ್ನೂ ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧನೆ ಮಾಡುವುದರ ಕುರಿತು ಒಂದು ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಕುತ್ಯಾರಿನ ಸೂರ್ಯ ಚೈತನ್ಯ ವಿದ್ಯಾಸಂಸ್ಥೆ ಡಿ,10 ರ ಶುಕ್ರವಾರದಂದು ಹಮ್ಮಿಕೊಂಡಿದ್ದು […]
ಯುವ ಜನಾಂಗ ದಾರಿ ತಪ್ಪಬಾರದು : ಶ್ರೀಮತಿ ನಳಿನಾಕ್ಷಿ
ಕುಂದಾಪುರ (ಡಿ ,2): ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪಬಾರದು. ಜೀವನದ ನಿರ್ಣಾಯಕ ಘಟ್ಟದಲ್ಲಿ ಲೈಂಗಿಕ ಆಸಕ್ತಿಗಳು ಬದುಕನ್ನು ಪ್ರಪಾತಕ್ಕೆ ತಳ್ಳುವಂತಾಬಾರದು ಎಂದು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಕೌನ್ಸಿಲರ್ ಶ್ರೀಮತಿ ನಳಿನಾಕ್ಷಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯಂದು ಆಯೋಜಿಸಿದ ಏಡ್ಸ್ ಜಾಗೃತಿ […]