ಉಡುಪಿ( ಡಿ.30): ಉಡುಪಿಯ ತೋನ್ಸೆ ಗ್ರಾಮ ಪಂಚಾಯತ್ ಪಡುಕುದ್ರು ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಪೂಜಾರಿ ಅವರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿತ್ಯಾನಂದ ಕೆಮ್ಮಣ್ಣರವರ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.27 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹೇಶ್ ಪೂಜಾರಿ ಯವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಕುಂದರ್ ಎದುರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
Day: December 31, 2021
ಸುಣ್ಣಾರಿ ಶಾಲೆ “ಇ-ಕಲಿಕಾ” ತರಗತಿ ಉದ್ಘಾಟನೆ
ಕುಂದಾಪುರ (ಡಿ.31):ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ ಮಂಡಾಡಿ (ಸುಣ್ಣಾರಿ) ಹೊಸ ಕಲಿಕಾ ಪದ್ಧತಿಯ ಅನ್ವಯ ಆಧುನಿಕ ಶೈಲಿ “ಇ-ಕಲಿಕಾ” (E-Learning) ತರಗತಿಯನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಶ್ರೀ ರಮಾನಂದ ಶೆಟ್ಟಿ ಸುಣ್ಣಾರಿ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಸುಣ್ಣಾರಿ ಶ್ರೀ ಕಿಶೋರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ರತ್ನಾಕರ ಶೆಟ್ಟಿ, ಶ್ರೀ ವಿ. ಚಂದ್ರಶೇಖರ […]
ಎಂಸಿಎ ಸ್ನಾತಕೋತ್ತರ ವಿಭಾಗ ಆರಂಭ – ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು
ಪುತ್ತೂರು ( ಡಿ.30 ) : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎರಡು ವರ್ಷಗಳ ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಪ್ರಾರಂಭಿಸಲಾಗಿದೆ. ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಂಸಿಎ ವಿಭಾಗವನ್ನು ಪ್ರಾರಂಭಿಸಲಾಗಿದೆ. ಬಿಸಿಎ, ಬಿಎಸ್ಸಿ ಪದವಿಯನ್ನು ಪಡೆದವರು ಈ ಕೋರ್ಸಿಗೆ ಸೇರಲು ಅರ್ಹರಾಗಿರುತ್ತಾರೆ. ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು ಈಗಾಗಲೇ ಸಜ್ಜುಗೊಂಡಿವೆ. […]