ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.
Year: 2021
ಹೇರೂರು : ವೆಂಟೆಡ್ ಡ್ಯಾಂ ಮತ್ತು ಸೇತುವೆ ಕಾಮಗಾರಿಗೆ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರಿಂದ ಗುದ್ದಲಿಪೂಜೆ
ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ಗದ್ದೆಕೇರಿ ಎಂಬಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಟೆಡ್ ಡ್ಯಾಂ ಮತ್ತು ಸೇತುವೆಗೆ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಗುದ್ದಲಿಪೂಜೆ ನೆರವೆರಿಸಿದರು.
ಕುಂದಾಪುರದ ನೂತನ ಡಿವೈಎಸ್ಪಿಯಾಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕಾರ
ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಯಾಗಿ ಕೆ .ಶ್ರೀಕಾಂತ ಅಧಿಕಾರ ಸ್ವೀಕರಿಸಿದ್ದಾರೆ .ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಯಾಗಿ ಸೇವೆಸಲ್ಲಿಸಿರುವ ಇವರು 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ
ನಮ್ಮಿಬ್ರದ್ದು ಇವತ್ತು ನಿನ್ನೆಯ ಪ್ರೀತಿ ಅನ್ಕೊಂಡ್ರಾ???… ನೋ ವೇ ಚಾನ್ಸೆ ಇಲ್ಲ.
ಕೆಲಸ ಮುಗಿಸಿ ಬಂದು ಸುಸ್ತಾಗಿದ್ದ ಅಜ್ಜಯ್ಯ, ಕಾಲು ತೊಳೆದು ಚಾವಡಿ ಗೆ ಬಂದಿದ್ದರಷ್ಟೇ, ಆಗಲೇ ಬೊಬ್ಬೆ ಬಿದ್ದಿತ್ತು!!!. ಅವರೇನು ಬರಿಗೈಯಲ್ಲಿ ಮನೆಯನ್ನ ಹೊಕ್ಕಿರಲಿಲ್ಲ. ನಾಲ್ಕೈದು ಬೊಟಿ ಪ್ಯಾಕೆಟ್ಟು, ನಾಲ್ಕಾಣೆಯ ನಾಲ್ಕು ಚಾಕ್ಲೆಟ್ಟುಗಳು, ಬಲಗೈಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಣ್ಣ್ ಕಣ್ಣ್ ಬಿಡುತ್ತ, ಎಡಗೈಯಲ್ಲಿ ಹಿಡಿದಿದ್ದ ಮೀನಿನ ಚೀಲದೊಂದಿಗೆ ಅಡುಗೆ ಮನೆ ಸೇರಿದ್ದವು… ನನಗೂ ಮೊದ ಮೊದಲು ಅರ್ಥ ಆಗಿರ್ಲಿಲ್ಲ. ನನ್ನನ್ನ ಯಾಕಿವನು ಇಷ್ಟು ಇಷ್ಟ ಪಡ್ತಿದ್ದಾನೆ ಅಂತ. ಈಗ್ಲೂ ಮಹಾ […]
ವರಸಿದ್ದಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಕುಂದಾಪುರ: ನಮ್ಮ ದೇಶ ಸ್ವಾತಂತ್ರ್ಯಗೊಂಡು 73 ವರ್ಷಗಳು ಕಳೆದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ ,ಮಹಿಳೆಯರು ತಮ್ಮ ಹಕ್ಕು ಮತ್ತು ಸ್ವತಂತ್ರ ಗಳನ್ನು ಸಂವಿಧಾನಾತ್ಮಕವಾಗಿ ಪಡೆದುಕೊಳ್ಳಬೇಕು, ಆ ಮೂಲಕ ಮಹಿಳಾ ಸಶಕ್ತಿಕರಣ ಸಾಧ್ಯ ಎಂದು ಕಾಲೇಜಿನ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೆರಾಡಿ ವರಸಿದ್ದಿವಿನಾಯಕ ಕಾಲೇಜು ಹಾಗೂ ಗ್ರಾಮ ಪಂಚಾಯತ್ ಕೆರಾಡಿ ಇದರ ಜಂಟಿ ಆಶ್ರಯದಲ್ಲಿ ಜನವರಿ 24 ರಂದು ಕಾಲೇಜಿನಲ್ಲಿ ಆಯೋಜಿಸಿದ್ದ […]
ಕೊಲ್ಲೂರು ಶ್ರೀಮೂಕಾಂಬಿಕೆಗೆ ಸ್ವರ್ಣಲೇಪಿತ ನಾಗಾಭರಣ ಸಮರ್ಪಣೆ
ಶಂಕರಾಚಾರ್ಯ ಪ್ರತಿಷ್ಠಾಪಿತ ಜಗತ್ಪ್ರಸಿದ್ಧ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಕುಮಾರ್ ರೆಡ್ಡಿ ಅವರು 12 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಲೇಪಿತ ನಾಗಾಭರಣ ವನ್ನು ಜನವರಿ 24 ರಂದು ದೇವಿಯ ಸನ್ನಿಧಾನದಲ್ಲಿ ಸಮರ್ಪಿಸಿದರು.
ಶ್ರೀ ಶಾರದಾ ಕಾಲೇಜು ಬಸ್ರೂರು : ರಾಷ್ಟ್ರೀಯ ಮತದಾರರ ದಿನಾಚರಣೆ
ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ, ಸ್ವೀಪ್ ಕಮಿಟಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25ರಂದು ಆಚರಿಸಲಾಯಿತು
ಬ್ಯಾರಿಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಕುಂದಾಪುರ: ಎನ್.ಎಸ್.ಎಸ್. ಘಟಕ ಉದ್ಘಾಟನೆ
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರ ಇದರ 2020 -21 ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಬಿದ್ಕಲ್ ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ರಾಘವೇಂದ್ರ ಕಿಣಿ ಉದ್ಘಾಟಿಸಿ ಎನ್.ಎಸ್.ಎಸ್. ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಮಾಹಿತಿ ಹಕ್ಕು ಕಾಯ್ದೆ ವಿಚಾರ ಸಂಕಿರಣ
ಮಾಹಿತಿ ಹಕ್ಕು ಕಾಯ್ದೆಯು ಭಾರತೀಯ ನಾಗರಿಕರಿಗಿರುವ ಒಂದು ಪ್ರಬಲ ಅಸ್ತ್ರವಾಗಿದ್ದು, ನಮ್ಮ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಬಯಲಿಗೆಳೆಯಲು ಇರುವಂತಹ ಪ್ರಮುಖ ಮಾರ್ಗವಾಗಿದೆ ಎಂದು ಮುಖ್ಯಮಂತ್ರಿಗಳ ಮಾಜಿ ಕಾನೂನು ಸಲಹೆಗಾರರಾಗಿರುವ ಕೆ .ದಿವಾಕರ್ ಹೇಳಿದರು ಅವರು ಕುಂದಾಪುರದ ಕುಂದೇಶ್ವರ ರಸ್ತೆಯ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿ.ಎ , ಸಿ.ಎಸ್. ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾಹಿತಿ ಹಕ್ಕು ಕಾಯ್ದೆ ಕುರಿತು […]
ಸಣ್ಣ ಕಥೆಗಳ ಸ್ಪರ್ಧೆ : ನರೇಂದ್ರ ಎಸ್ ಗಂಗೊಳ್ಳಿ ರವರ ಒಂದು ಚಪ್ಪಲಿಯ ಕಥೆ ಆಯ್ಕೆ
ಮೈಸೂರು ಅಸೋಸಿಯೇಷನ್ ಮುಂಬೈ ಸಂಸ್ಥೆ ಏರ್ಪಡಿಸಿದ್ದ ನೇಸರು ಜಾಗತಿಕ ಮಾಸ್ತಿ ಸ್ಮರಣಾರ್ಥ ಕನ್ನಡ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಪ್ರೋತ್ಸಾಹಕ ಬಹುಮಾನದೊಂದಿಗೆ ನಗದನ್ನು ಪಡೆದಿದ್ದಾರೆ. ಸ್ಪರ್ಧೆಗೆ 130ಕ್ಕೂ ಅಧಿಕ ಕಥೆಗಳು ಬಂದಿದ್ದು ಇವರ ‘ಒಂದು ಚಪ್ಪಲಿಯ ಕಥೆ’ ಪ್ರೋತ್ಸಾಹಕ ಬಹುಮಾನಕ್ಕೆ ಪಾತ್ರವಾಗಿದೆ. ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.










