ಭಾರತದ ನೈಜ ಇತಿಹಾಸವನ್ನು ಅರಿತುಕೊಳ್ಳುವಲ್ಲಿ ನಾವು ಸ್ವಯಂಸ್ಪೂರ್ತಿಯಿಂದ ಕಾರ್ಯಪ್ರವೃತ್ತರಾಗಬೇಕಿದೆ ಆ ಮೂಲಕ ಭಾರತೀಯ ಸಂಸ್ಕೃತಿಯ ಅಪೂರ್ವ ಮೌಲ್ಯಗಳನ್ನು ಕಾಪಿಟ್ಟು ಈ ಜಗತ್ತಿಗೆ ಸಾರಿ ಹೇಳುವ ಕೆಲಸವಾಗಬೇಕಿದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ, ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಏಳಿ ಎದ್ದೇಳಿ ಎಚ್ಚರಗೊಳ್ಳಿ ಎನ್ನುವ ವಿವೇಕಾನಂದರ […]
Year: 2021
ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಕುಂದಾಪುರ : ಜನವರಿ 27 ಮತ್ತು 28 ರಂದು ವಾರ್ಷಿಕ ಗೆಂಡ ಮಹೋತ್ಸವ ಮತ್ತು ಪ್ರತಿಷ್ಟಾ ವರ್ಧಂತೋತ್ಸವ
ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಶ್ರೀ ಕ್ಷೇತ್ರ ಕಳಿನಕಟ್ಟೆ ಚಿಕ್ಕಮ್ಮನ ಸಾಲು ರಸ್ತೆ ಕುಂದಾಪುರದ ಶ್ರೀ ಚಿಕ್ಕಮ್ಮ ದೇವಿ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡ ಮಹೋತ್ಸವ, ಚಂಡಿಕಾ ಹೋಮ ಮತ್ತು ಧಾರ್ಮಿಕ ಹಾಗೂ ಪ್ರತಿಷ್ಟಾ ವರ್ಧಂತೋತ್ಸವ ಇದೇ ಜನವರಿ 27 ಮತ್ತು 28 ರಂದು ನಡೆಯಲಿದೆ. ವೇದ ಮೂರ್ತಿ ಕೇಂಜಿ ಶ್ರೀಧರ ತಂತ್ರಿಗಳು ಮತ್ತು ದೇವಾಲಯ ಅರ್ಚಕರಾದ ಕ್ರಷ್ಣಮೂರ್ತಿ ಅಡಿಗರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ […]
ಡಾ. ಬಿ ಬಿ ಹೆಗ್ಡೆ ಕಾಲೇಜು: ನಿವೃತ್ತ ಯೋಧ ಗಣಪತಿ ಖಾರ್ವಿಯವರಿಗೆ ಸನ್ಮಾನ
ಕಾಲೇಜಿನ 72ನೇ ಗಣರಾಜ್ಯೋತ್ಸವ ಸಂಭ್ರಮ ಹಾಗೂ ಎನ್. ಸಿ.ಸಿ. ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಗಿಲ್ ವೀರ, ಗಡಿ ಭಧ್ರತಾ ಪಡೆಯ ನಿವೃತ್ತ ಯೋಧ ಶ್ರೀ ಗಣಪತಿ ಖಾರ್ವಿ ಬಸ್ರೂರು ಇವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ದೇಶಭಕ್ತಿ ಬೆಳೆಸುವಲ್ಲಿ ಎನ್.ಸಿ.ಸಿ. ಯ ಪಾತ್ರ ಮಹತ್ವದ್ದಾಗಿದೆ – ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ
ಯುವಜನತೆಯಲ್ಲಿ ಶಿಸ್ತು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವಲ್ಲಿ ಎನ್.ಸಿ.ಸಿ. ಯ ಪಾತ್ರ ಬಹುಮುಖ್ಯವಾದದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್.ಸಿ.ಸಿ. ಗೆ ಸೇರ್ಪಡೆಗೊಂಡು ದೇಶದ ಸೈನ್ಯದಲ್ಲಿ ಗುರುತಿಸಿಕೊಳ್ಳಬೇಕು ಹಾಗೂ ದೇಶಸೇವೆಗೆ ಸದಾ ಸಿದ್ದರಾಗಬೇಕು ಎಂದು ಬೈಂದೂರಿನ ಶಾಸಕರು ಹಾಗೂ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಅಧ್ಯಕ್ಷರಾಗಿರುವ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಡಾ. ಬಿ ಬಿ ಹೆಗ್ಡೆ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ
ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾಗವಹಿಸುವಿಕೆ ಪ್ರಮುಖವಾದದ್ದು, ಆ ನಿಟ್ಟಿನಲ್ಲಿ ದೇಶದ ಸಂವಿಧಾನ ಜನತೆಗೆ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾವಂತರಾಗಿ ಚಲಾಯಿಸಿದಾಗ ಮಾತ್ರ ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಮಹತ್ವದ […]
ಡಾ ಬಿ.ಬಿ ಹೆಗ್ಡೆ ಕಾಲೇಜು: 72 ನೇ ಗಣರಾಜ್ಯೋತ್ಸವ
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬೈಂದೂರಿನ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ನೆರವೇರಿಸಿದರು.
ಅನುಬಂದ ಕಿರುಚಿತ್ರ – ಒಂದು ವಿಶ್ಲೇಷಣೆ
ಕುಂದಾಪುರದ ಡಾ|| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಅನುಬಂಧ – ಇದು ರಕ್ತದ ಸಂಬಂಧ ಎನ್ನುವ ಕಿರುಚಿತ್ರ ಇಂದು ಬಿಡುಗಡೆಗೊಂಡಿದೆ. ಒಮ್ಮೆ ಕಾಣುವ ತವಕದಲ್ಲಿದ್ದ ನಾನು ಹೊತ್ತು ಬಿಡುವು ಮಾಡಿ ನೋಡಿದೆ, ಮೊದಲರ್ಧ ಭಾಗ ನೋಡುತ್ತಿದ್ದಂತೆ ಕುತೂಹಲ ಹುಟ್ಟಿತ್ತು. ರಕ್ತದ ಅಗತ್ಯಕ್ಕೆ ಕರೆ ಬಂದ ಸಂಗತಿ ಕೇಳಿದ ಸ್ನೇಹಿತರು ನಿರ್ಲಕ್ಷಿಸಿ ಸಿನೆಮಾ ನೋಡಲು ಹೋದರೆ ಇಲ್ಲಿ ನಡೆದ ಘಟನೆಯೇ ಬೇರೆ. (ಪೂರ್ತಿ ಚಿತ್ರ ನೋಡಿದರೆ […]
ಶಿವಪುರ ಡಾಕ್ಟ್ರ್
ಕನಸು ಹೊತ್ತು ಜನಸೇವೆಗೆ ಬರುವ, ಬಂದಿರುವ ಲಕ್ಷಾಂತರ ವೈದ್ಯರಿಗೆ ಡಾ| ಪಿ.ಎಸ್. ಆಚಾರ್ಯ ರು ಜೀವಂತ ಪ್ರೇರಣೆ, ಉದಾಹರಣೆ.
ಡಾ.ಬಿ.ಬಿ ಹೆಗ್ಡೆ ಕಾಲೇಜು : ಅನುಬಂಧ ಕಿರುಚಿತ್ರಕ್ಕೆ ಜಿಲ್ಲಾ ಪ್ರಶಸ್ತಿ
ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನದ ಮಹತ್ವದ ಕುರಿತು ರಚಿಸಿದ ಕಿರುಚಿತ್ರ ಅನುಬಂಧ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಅನುಬಂಧ – ಇದು ರಕ್ತದ ಸಂಬಂಧ
Anubanda – Idu Rakthada Sambanda a short movie from Dr. B B Hegde First Grade College Students.