ಉಡುಪಿ (ಅ.8): ನವರಾತ್ರಿಯ ಸಡಗರ ದೇಶದೆಲ್ಲೆಡೆ ಮನೆ ಮಾಡುತ್ತಿದ್ದು, ವಿವಿಧ ಸಂಘ -ಸಂಸ್ಥೆ ಗಳಲ್ಲಿ ,ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳಲ್ಲಿ ಕಂಗೊಳಿಸಿತ್ತಿದ್ದು ,ನವರಾತ್ರಿಯ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಉಡುಪಿಯಲ್ಲಿ ಮಹಿಳೆಯರು ನವರಾತ್ರಿಯ ಪ್ರಯುಕ್ತ ಬಣ್ಣ ಬಣ್ಣದ ಉಡುಗೆ ತೊಡುಗೆಯೊಂದಿಗೆ ಫೋಟೋಗೆ ಫೋಸ್ ನೀಡಿದ ಕ್ಷಣ.
Year: 2021
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕಾಲಿಕ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥ: ದುರಸ್ಥಿ ಕಾರ್ಯನಿರತ ಅಂಪಾರು ಗ್ರಾಮಪಂಚಾಯತ್ ನ ಪರಿಶ್ರಮಕ್ಕೆ ಶ್ಲಾಘನೆ
ಅಂಪಾರು(ಅ,9):ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಗುಡುಗು ,ಮಿಂಚು ಸಹಿತ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆ, ಶಾನ್ಕಟ್ಟು ಕನ್ನಾಲಿಗೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಜೋರಾಗಿ ಬೀಸಿದ ಗಾಳಿಯಿಂದಾಗಿ ಬೃಹದಾಕಾರದ ಮರಗಳು ಮನೆ ಹಾಗೂ ರಸ್ತೆಯ ಮೇಲೆರಗಿದ್ದವು.ಇನ್ನೂ ಕೆಲವು ಭಾಗಗಳಲ್ಲಿ ಫಲವತ್ತಾದ ಅಡಿಕೆ, ತೆಂಗಿನ ಮರಗಳು ಧರೆಗುರುಳಿ ಬಿದ್ದಿದೆ.ಅದಲ್ಲದೇ ಗಾಳಿಯ ರಭಸಕ್ಕೆ ಮನೆಗಳ ಹಾಗೂ ದನದ ಕೊಟ್ಟಿಗೆಗಳ ಹೆಂಚು ಹಾಗೂ ತಗಡಿನ ಮಾಡು ಸಂಪೂರ್ಣ ಜಖಂಗೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಸಿಲುಕಿ […]
ಕಾರ್ಪೋರೇಟ್ ಕ್ಯಾಟರಿಂಗ್ ರಂಗದ ಪೂರ್ಣಚಂದಿರ ಮಂಜುನಾಥ ಎನ್. ಶೆಟ್ಟಿ ಬೆಳ್ಳಾಡಿ
ಕಷ್ಟ ನಷ್ಟಗಳ ಭಯದಿಂದ ಕೆಲಸವನ್ನೇ ಆರಂಭ ಮಾಡದವರು ದುರ್ಬಲರು.ವಿಘ್ನಗಳು ಎದುರಾದಾಗ ಕೆಲಸವನ್ನು ನಿಲ್ಲಿಸುವವರು ಹೇಡಿಗಳು. ವಿಘ್ನಗಳನ್ನು ನಿವಾರಿಸಿಕೊಂಡು ಗುರಿ ಸಾಧಿಸುವವರು ಶ್ರೇಷ್ಠರು.ವಿಘ್ನಗಳ ಅಂಜಿಕೆಯಿಂದ ಕೆಲಸವನ್ನು ಆರಂಭ ಮಾಡದೆ ದುರ್ಬರಂತಿರುವವರು ಹೆಚ್ಚಿರುವ ಈ ಕಾಲಘಟ್ಟದಲ್ಲಿ ನಾವಿಂದು ಪರಿಚಯಿಸುತ್ತಿರುವ ಈ ವ್ಯಕ್ತಿ ವಿಘ್ನಗಳನ್ನು ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಂಡು, ಅವಿರತ ಪ್ರಯತ್ನದಿಂದಾಗಿ ಯಶಸ್ಸಿನತ್ತ ಸಾಗುತ್ತಾ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಿದವರು, ಬಾಲ್ಯದಿಂದಲೂ ಹೋರಾಟಗಳನ್ನು ಎದುರಿಸಿ ಭವಿಷ್ಯದಲ್ಲಿ ಸಾಧಕನಾಗಿಯೇ ಆಗುತ್ತೇನೆ ಎಂಬ ಸ್ಪಷ್ಟ ದಿಸೆಯಲ್ಲಿ ಕಲ್ಲು ಮುಳ್ಳುಗಳನ್ನೇ […]
ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದನೇ ಮನೆ ಹಸ್ತಾಂತರ
ಕೋಟೇಶ್ವರ-(ಅ,8): ಕೋಟೇಶ್ವರ ಸಮೀಪದ ಕಾಳಾವರದಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್( ರಿ ) ಉಪ್ಪುಂದ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಗೋವಿಂದ ಬಾಬು ಪೂಜಾರಿ ಯವರು ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆ ಗೃಹಪ್ರವೇಶ ಇಂದು ಸಂತಸದಿಂದ ನಡೆಯಿತು. ಕಾಳಾವರದ ನರಿಕೋಡ್ಲು ಮನೆ ಸತೀಶ್ ಪೂಜಾರಿ ಯವರ ಮನೆ ನಿರ್ಮಾಣದ ಕನಸನ್ನು ಆಶ್ರಯದಾತ ಡಾ.ಗೋವಿಂದ ಬಾಬು ಪೂಜಾರಿಯವರು ನನಸು ಮಾಡಿದ್ದಾರೆ.ರಿಕ್ಷಾ ಡ್ರೈವರ್ ಒಬ್ಬರ ಮನೆ ನಿರ್ಮಾಣಕ್ಕೆ ಎದುರಾದ ಕಷ್ಟವನ್ನು ಗಮನಿಸಿದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ […]
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಂದ ಚೈತನ್ಯ ವೃದ್ಧಾಶ್ರಮಕ್ಕೆ ವಾಟರ್ ಪ್ಯೂರಿಫೈರ್ ಕೊಡುಗೆ
ಕುಂದಾಪುರ (ಅ,7): ಇಂದಿನ ವಿದ್ಯಮಾನದಲ್ಲಿ ಇದ್ದ ಹಣವನ್ನು ಸದುಪಯೋಗ ಮಾಡಿಕೊಳ್ಳುದಕ್ಕಿಂತ ದುರುಪಯೋಗ ಮಾಡುವುದೇ ಹೆಚ್ಚು. ದಿನದಿಂದ ದಿನಕ್ಕೆ ವೃದ್ಧಾಶ್ರಮಗಳೂ ಹೆಚ್ಚುತ್ತಲೇ ಇವೆ.ಇದರಿಂದಾಗಿ ಅಲ್ಲಿನ ಚಿಕ್ಕ ಚಿಕ್ಕ ಸಮಸ್ಯೆಗೆ ಪರಿಹಾರಗಳು ದೊರಕುತ್ತಿಲ್ಲ.ಇದನ್ನರಿತ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಚೈತನ್ಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ದಿನ ಹಾಗೂ ಎತ್ನಿಕ್ ಡೇಯಲ್ಲಿ ವಿಜೇತರಾಗಿ ಪಡೆದ ಹಣದಿಂದ ಚೈತನ್ಯ ವೃದ್ಧಾಶ್ರಮಕ್ಕೆ ಸುಮಾರು ಐದು […]
ಡಾ. ಬಿ.ಬಿ. ಕಾಲೇಜು ಕುಂದಾಪುರ: ಎನ್.ಸಿ.ಸಿ ಕೆಡೇಟ್ಸ್ಗಳಿಗೆ ಶಸ್ತ್ರಾಭ್ಯಾಸ ತರಬೇತಿ
ಕುಂದಾಪುರ (ಅ,07): ಇಲ್ಲಿನ ಡಾ. ಬಿ.ಬಿ. ಕಾಲೇಜಿನ ಎನ್.ಸಿ.ಸಿ ಕೆಡೇಟ್ಸ್ಗಳಿಗೆ ಶಸ್ತ್ರಾಭ್ಯಾಸ ತರಬೇತಿಯನ್ನು ತರಬೇತುದಾರರಾದ ಬಾಲ್ರಾಜ್ ಮತ್ತು ಮಹಿಂದ್ರಾ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಎನ್ಸಿಸಿ ಅಧಿಕಾರಿ ಶಿವರಾಜ್ ಸಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಬೋಧಕ ಮತ್ತು ಬೋಧಕೇತರು, ಎನ್ಸಿಸಿ ಕೆಡೇಟ್ಸ್ಗಳು ಉಪಸ್ಥಿತರಿದ್ದರು.
ಸುಪ್ರಭಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ :ಸಿಇಟಿ/ನೀಟ್/ಜೆಇಇ ತರಬೇತಿ ಸಂಸ್ಥೆ ಉದ್ಘಾಟನೆ (ಸುಜ್ಞಾನ್ ಎಜುಕೇಶನ ಟ್ರಸ್ಟ್ ಮೂಡುಬಿದ್ರಿ ಸಾರಥ್ಯದಲ್ಲಿ)
ಕುಂದಾಪುರ (ಅ,07): ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಂಪೂರ್ಣ ಆಡಳಿತದ ಚುಕ್ಕಾಣಿ ಹಿಡಿದು ಗುಣಮಟ್ಟದ ಶಿಕ್ಷಕರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಆತ್ಯುತ್ತಮ ಶಿಕ್ಷಣ ಒದಗಿಸುತ್ತಿರುವ, ಶೈಕ್ಷಣಿಕ ಕ್ಷೇತ್ರದಲ್ಲಿ 30 ವರ್ಷಗಳ ಸುಧೀರ್ಘ ಅನುಭವವುಳ್ಳ ಸ್ವತಃ ಭೌತಶಾಸ್ತ್ರ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ. ರಮೇಶ್ ಶೆಟ್ಟಿ ಯವರು ಅಧ್ಯಕ್ಷರಾಗಿರುವ, ಕುಂದಾಪುರದಲ್ಲಿ ಶಿಕ್ಷಪ್ರಭಾ ಆಕಾಡೆಮಿಯ ಮೂಲಕ ಸಿಎ ಮತ್ತು ಸಿಎಸ್ ಪರೀಕ್ಷೆಗೆ ರಾಷ್ಟ್ರೀಯ ಮಟ್ಟದಲ್ಲಿ ರ್ಯಾಂಕ್ಗಳನ್ನು […]
ಹೊಸ್ತಿನ ಹೊಸ ಫಸಲು- ಕದಿರು ಕಟ್ಟುವ ಹಬ್ಬ
ಮ್ಮ ಕರಾವಳಿ ಭಾಗದಾದ್ಯಂತ ಹೊಸ ಫಸಲಿನ ಕದಿರುಕಟ್ಟುವ ಪೂಜೆ ಸಂಪ್ರದಾಯಕವಾಗಿ ರೂಡಿಯಲ್ಲಿರುವ ಹಬ್ಬ.ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಂದು ಮನೆ ಮಂದಿಯಲ್ಲಾ ಸಂತಸದಿಂದ ಆಚರಿಸುತ್ತಾರೆ. ಕರಾವಳಿಯ ಕೃಷಿ ಪರಂಪರೆಯಲ್ಲಿ ಮತ್ತು ಸಂಪ್ರದಾಯದಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಕ್ರಷಿ ಭೂಮಿಯಲ್ಲಿ ಬೆಳೆದ ಭತ್ತದ ಪೈರು ತೆನೆಬಿಟ್ಟು ಬೆಳೆದಿರುವ ಸಂಭ್ರಮವನ್ನು ಕರಾವಳಿ ಭಾಗದ ಜನತೆ ಭಕ್ತಿಭಾವದಿಂದ ಆಚರಿಸುವ ಹಾಗೂ ದೇವಸ್ಥಾನದಲ್ಲಿ ಹೊಸ ಫಸಲುಗಳನ್ನು ಊರ ಜನತೆಗೆ ಹಂಚುವುದು […]
ಬದುಕು ನೀಡಿದ ದೇವರು
ಬದುಕಿನ ಪಯಣದಲ್ಲಿ ತಾಯಿಯಷ್ಟೇ ತಂದೆ ಎನ್ನುವ ದೇವರ ಮಾರ್ಗದರ್ಶನ ಅತ್ಯವಶ್ಯಕ. ನನ್ನ ಜೀವನದ ಯಶಸ್ಸಿನ ಹಾದಿ ನನ್ನ ತಂದೆ. ಅಪ್ಪ ನಡೆದ ದಾರಿ,ಅಪ್ಪನ ಅನುಭವದ ಬದುಕು,ಸ್ವಾಭಿಮಾನ ಶಿಸ್ತಿನ ಜೀವನ ನಡೆಸಿ ಕಷ್ಟದ ಬದುಕ ಸರಿದೂಗಿಸಲು ಪಟ್ಟಿರುವ ಪಣ ನನ್ನ ಬದುಕಿನ ಬಹು ದೊಡ್ಡ ಪಾಠ. ಅಪ್ಪನ ಕಷ್ಟದ ಜೀವನವೇ ನನಗೆ ಶಿಸ್ತಿನ ಪಾಠವನ್ನು ಕಲಿಸಿದೆ ಎಂದರೆ ಅತಶಯೋಕ್ತಿಯಾಗದು.ಅಪ್ಪನ ನೇರ ನುಡಿ,ಸರಳ ಸ್ವಭಾವದ ವ್ಯಕ್ತಿತ್ವ, ತಿದ್ದಿ ಹೇಳುವ ಪರಿಯು ನನ್ನ ಸಾಧನೆಗೆಸ್ಪೂರ್ತಿಯಾಗಿದೆ. […]