ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು.
Year: 2021
ಮಾರ್ಚ್ 15 ಮತ್ತು 16 ರಂದು ಬ್ಯಾಂಕ್ ಮುಷ್ಕರ
ಕೇಂದ್ರ ಸರ್ಕಾರವು ಈಗಾಗಲೇ ಎರಡು ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾಗಿದ್ದು, ಇದನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಮಾ. 15 ಮತ್ತು 16 ರಂದು ಬ್ಯಾಂಕ್ ನೌಕರರು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ ಎಂದು ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ತಿಳಿಸಿದೆ.
ಎಂ.ಐ.ಟಿ. ಮೂಡ್ಲಕಟ್ಟೆ : ಮಾರ್ಚ್ 26 ಹಾಗೂ 27 ರಂದು ಉದ್ಯೋಗ ಮೇಳ
ಮೂಡ್ಲಕಟ್ಟೆ ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮಾರ್ಚ್ 26 ಹಾಗೂ 27 ರಂದು ಉದ್ಯೋಗ ಮೇಳವನ್ನು ಆಯೋಜಿಸಿರುತ್ತಾರೆ.
ಇ ಸಿ ಆರ್ ಕಾಲೇಜು : ಪ್ರತಿದಿನವೂ ಮಹಿಳಾ ದಿನ
ಮಧುವನ (ಮಾ.14) : ವರ್ಷದಲ್ಲಿ ಒಂದು ದಿನ ಸಾಂಕೇತಿಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸದೇ ಪ್ರತಿ ದಿನವೂ ಮಹಿಳೆಯರ ದಿನ ಆಚರಿಸುವಂತಾಗ ಬೇಕು.ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗೆ ಅದಕ್ಕೆ ಪೂರಕವಾದ ಸಮಾಜದ ನಿರ್ಮಾಣವಾಗಬೇಕು ಎಂದು ಸೌಖ್ಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ, ಲಿಸಾ ಲಿಯೋ ಹೇಳಿದರು. ಅವರು ಇ ಸಿ ಆರ್ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಯೋಜಿಸಿದ್ದ “ವಿಶ್ವ ಮಹಿಳಾ […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿ.ಎ. ಇಂಟರ್ ಮೀಡಿಯೇಟ್ ಸಾಧಕರಿಗೆ ಸನ್ಮಾನ.
ನಿರಂತರ ಅಭ್ಯಾಸ, ಶಿಸ್ತು, ಸಮಯ ಪಾಲನೆಯಿಂದ ವಿದ್ಯಾರ್ಥಿಗಳು ತಮ್ಮನ್ನು ಓದಿನ ಕಡೆಗೆ ತೊಡಗಿಸಿಕೊಂಡರೆ ಸಿಎ/ಸಿಎಸ್ ಮತ್ತು ಯುಪಿಎಸ್ಸಿ ಅಂತಹ ಅತ್ಯುತ್ತಮ ಕೋರ್ಸುಗಳನ್ನು ಅನಾಯಾಸವಾಗಿ ಪೂರ್ಣಗೊಳಿಸಬಹುದು ಎಂದು ಕುಂದಾಪುರದ ಡಿವೈಎಸ್ಪಿ ಕೆ. ಶ್ರೀಕಾಂತ್ ರವರು ಹೇಳಿದರು .
ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕುಂದಾಪುರದ ಯುವಕ ತ್ರಿವರ್ಣ ಕಂಡ್ಲೂರು
ಬಾಲ್ಯದಿಂದಲೇ ಕ್ರಿಕೆಟ್ ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ನಿರಂತರ ಶ್ರಮವಹಿಸಿ ಇಂದು ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಕುಂದಾಪುರದ ಮೂಲದ ಯುವಕ ತ್ರಿವರ್ಣ ಕಂಡ್ಲೂರು ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಶ್ರೀ ವಿನಯ್ ಗುರೂಜಿ ಭೇಟಿ
ಕುಂದಾಪುರ(ಮಾ.13)ಕುಂದಾಪುರದ ಪುರಾಣ ಪ್ರಸಿದ್ದ ದೇವಾಲಯವಾದ ಚಿಕ್ಕಮ್ಮನ ಸಾಲು ರಸ್ತೆ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಅವಧೂತ ಶ್ರೀ ವಿನಯ್ ಗುರೂಜಿಯವರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಆನಗಳ್ಳಿ ಶ್ರೀ ದತ್ತಾಶ್ರಮದ ಪ್ರವರ್ತಕರಾದ ಶ್ರೀಮತಿ ಮತ್ತು ಶ್ರೀ ಸುಭಾಷ್ ಪೂಜಾರಿ ಸಂಗಮ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಪುತ್ರನ್ ಐತಾಳ್ ಬೆಟ್ಟು ಮತ್ತು ಸಂಗಮ್ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುದೀಪ್ ಶೆಟ್ಟಿ ಆಜ್ರಿ ಆಯ್ಕೆ
ಕುಂದಾಪುರ (ಮಾ.13) ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ 2020 -21ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುದೀಪ್ ಶೆಟ್ಟಿ ಆಜ್ರಿಯವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಜಿತ್ ಶೆಟ್ಟಿ ಹಾಗೂ ಭರತ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ದೀಪಾ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರೆಸಿಲ್ಲಾ, ಜೊತೆ ಕಾರ್ಯದರ್ಶಿಗಳಾಗಿ ಆಶಾ ಶೆಟ್ಟಿ ಹಾಗೂ ಸ್ವಸ್ತಿ ಶೆಟ್ಟಿ , ಕೋಶಾಧಿಕಾರಿಯಾಗಿ ಯೋಗೀಶ್ ಶ್ಯಾನುಭಾಗ್ ಆಯ್ಕೆಯಾಗಿದ್ದಾರೆ. ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 13 ರಂದು ನಡೆದ […]
ಕ್ರೀಡೆಗೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ : ಮನೀಷ್ ಪೂಜಾರಿ
ಕುಂದಾಪುರ, ಮಾ.(10) : ಅತ್ಯಂತ ಕಿರು ಅವಧಿಯಲ್ಲಿ ಕ್ರೀಡೆಯಲ್ಲಿ ಉತ್ಕ್ರಷ್ಟ ಸಾಧನೆ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದ ಗಮನ ಸೆಳೆದ ಸಂಸ್ಥೆ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆಕಾಲೇಜು. ವಿದ್ಯಾರ್ಥಿದೆಸೆಯಲ್ಲಿ ನನ್ನ ಕ್ರೀಡಾಪ್ರತಿಭೆಯನ್ನು ಗುರುತಿಸಿದ ಈ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು ಮತ್ತು ನಿರಂತರ ಪರಿಶ್ರಮ ಮುಖ್ಯ ಎಂದು ಖಾಸಗಿ ಕಂಪೆನಿ ಉದ್ಯೋಗಿ ಕಾಲೇಜಿನ ಪೂರ್ವ ವಿದ್ಯಾರ್ಥಿ ಮನೀಷ್ ಪೂಜಾರಿ ಹೇಳಿದರು.ಅವರು ನಗರದ […]