ಆದಷ್ಟು ನಗದುರಹಿತ ವ್ಯವಹಾರ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನವನ್ನು ಪಡೆದು ದೇಶದ ಆರ್ಥಿಕ ಚೇತರಿಕೆಗೆ ಜನತೆ ಶ್ರಮಿಸ ಬೇಕು ಎಂದು ಹೆಮ್ಮಾಡಿ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ರಾವ್ ಹೇಳಿದರು.
Year: 2021
ಬಂಧ ಮುಕ್ತ.. ಇದು ಸ್ವಾವಲಂಬಿ ಬದುಕಿನ ಹುಡುಕಾಟ
ಇದೆಂಥಾ ವಿಪರ್ಯಾಸ ನೋಡಿ. ಓದಿನ್ನು ಮುಗಿಯದೇ ಇದ್ದ ಹುಡುಗಿ, ಊರ ಊಸಾಬರಿ ಅರಿಯದೇ ತನ್ನದೇ ತರಾತುರಿಯಲ್ಲಿದ್ದವಳಿಗೆ, ಪರಿಚಯಸ್ಥರು ಮನೆಯವರ ಮೇಲೆ ಹೇರುತ್ತಿದ್ದದ್ದು ಮದುವೆ ಎಂಬ ‘ಬಂಧನ ‘. ಆಡಿಕೊಳ್ಳೊರ ಬಾಯಿ ಮುಚ್ಚಿಸೋ ಪ್ರಯತ್ನದಲಿ ಹೆತ್ತವರು ಮಗಳ ಮೇಲೆ ಹೊರಿಸುತ್ತಿರೋ ಈ ‘ ಬಂಧನ ‘ ದ ಭಾರದಲಿ ಆಕೆ ಇನ್ನೇಷ್ಟು ನೊಂದು ಬೆಂದು ಬಂಧಿಯಾರಬಹುದು ನೀವೇ ಹೇಳಿ…!?
ಬಂಟಕಲ್ ಇಂಜಿನಿಯರಿಂಗ್ ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿಜ್ಞಾನ ವಿಭಾಗ ಹಾಗೂ ಕಾಲೇಜಿನ ಐಎಸ್ಟಿಇ ಘಟಕದ ಸಹಯೋಗದೊಂದಿಗೆ “ನ್ಯಾನೋ ತಂತ್ರಜ್ಞಾನ ಮತ್ತು ಅದರ ಅನ್ವಯಿಕೆಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶ್ರೇಷ್ಠ ಭಾರತೀಯ ಭೌತವಿಜ್ಞಾನಿ ಸರ್. ಸಿ. ವಿ ರಾಮನ್ ಅವರ ನೆನಪಿಗಾಗಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯ ಅಂಗವಾಗಿ 26 ಫೆಬ್ರವರಿ 2021ರಂದು ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು
ಪವರ್ ಲಿಪ್ಟರ್ ಸತೀಶ್ ಖಾರ್ವಿಗೆ ಚಿನ್ನದ ಪದಕ
ಇಂದು ಸಾಲಿಗ್ರಾಮ ದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ ಒಟ್ಟು 540 ಕೆ.ಜಿ. ಭಾರವನ್ನು ಎತ್ತಿ ಚಿನ್ನದ ಪದಕ ಪಡೆದಿದ್ದಾರೆ.
ಹೆಮ್ಮಾಡಿಯ ಹೆಮ್ಮೆಯ ಕ್ರೀಡಾಪಟು ರೈಸನ್ ಕರ್ನಾಟಕ ವಾಲಿಬಾಲ್ ತಂಡದ ನಾಯಕನಾಗಿ ಆಯ್ಕೆ
ಮಾರ್ಚ್5ರಿಂದ 11ರ ವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 69ನೇ ರಾಷ್ಟ್ರೀಯ ಸೀನಿಯರ್ ವಾಲಿಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಈ ಬಾರಿ ಕುಂದಾಪುರದ ಹೆಮ್ಮಾಡಿಯ ರೈಸನ್ ಬೆನೆಟ್ ರೆಬೆಲ್ಲೊ ನಾಯಕನಾಗಿ ಮುನ್ನಡೆಸಲಿದ್ದಾರೆ.
ಬೆಳದಿಂಗಳ ಬೆಳಕಿನಲಿ
ಚಂದಿರನ ಬೆಳಕಿನಲಿ ತಾರೆಗಳ ನಡುವಿನಲಿಸುಂದರಿಯ ಹಾಗೆ ಬಂದೆ ನನ್ನೆದೆ ಬಾಂದಳದಲಿಒಲವಿನ ಉಡುಗೊರೆಯ ಮುತ್ತಿನಮಾಲಿಕೆಯುನುಣುಪಾಗಿ ಪೋಣಿಸಿ ಕೊರಳಲಿ ಜಾರಿಸಿ ಬೆಳದಿಂಗಳಿಗೊಂದು ಹೆಣ್ಣಾಗಿ ಬಂದಂತೆ ಕಂಡೆಧರೆಗಿಳಿದ ದೇವತೆಯಾಗಿ ನನ್ನ ಎದುರಲಿ ನಿಂದೆನಕ್ಷತ್ರ ಲೋಕದ ಪಾರಿಜಾತದ ಸುಮವುಹುಣ್ಣಿಮೆಯ ಬೆಳಕಿನಲಿ ಬಾನಿಗೆ ಜಾರಿರುವೆ ಅಮೃತ ಸುಧೆಯ ಜರಿಯಾರೆಯ ನಾರಿಎಂದಿಗೂ ನೀ ಸರಿಯದಿರು ನನ್ನ ಕೈ ಜಾರಿತೂಗುಯ್ಯಾಲೆಯಲಿ ಜೋಕಾಲಿಯಾಡುತಾನಿನ್ನಲ್ಲಿ ಪವಡಿಸುವೆ ತಾರೆಗಳ ಜೊತೆಯಾಡುತಾ ಸೌಭಾಗ್ಯ ಲಕ್ಷ್ಮಿಯ ಅವತಾರದ ಪ್ರತೀಕ ಹೆಣ್ಣುಹೃದಯಂಗಳಕೆ ಜಾರಿರುವೆ ಹೊತ್ತು ನೀ ಹೊನ್ನುಪ್ರೀತಿಯ ಮಹಲಿನಲಿ […]
ಹುಡುಕಾಟ
ಹುಟ್ಟು ಹುಡುಗಾಟದಿಂದ ಹುಟ್ಟಿಕೊಂಡ ಹುಚ್ಚು ಈ ಹುಡುಕಾಟ, ಕಟ್ಟಿದ ಕನಸುಗಳಿಗೆ ಕಟ್ಟೆಯ ಕಟ್ಟಲು ಗಟ್ಟಿಯ ರಟ್ಟೆಗಾಗಿ ಹುಡುಕಾಟ, ಹೊಟ್ಟೆಯೆಂಬ ಪಟ್ಟಣವಾಸಿಗಳ ಹೊಟ್ಟೆಯ ಹೊರೆಯಲು ತುತ್ತಿನ ಪೊಟ್ಟಣಕ್ಕಾಗಿ ಹುಡುಕಾಟ, ಬೆಟ್ಟದಷ್ಟಿರುವ ಕಷ್ಟವ ಕುಟ್ಟಿ ಪುಡಿಗೈಯುವ ಬಲಿಷ್ಠ ಆ ಮುಷ್ಟಿಗಾಗಿ ಹುಡುಕಾಟ, ಸೃಷ್ಟಿಯ ಸೌಧದ ಮೆಟ್ಟಿಲ ಮೇಲೆ ನಿಂತು ಹಾಯಿಸಿದ ದೃಷ್ಟಿ ಆ ಸೃಷ್ಟಿಕರ್ತನಿಗಾಗಿ ಹುಡುಕಾಟ. #ಏನೇ_ಹೇಳಿ, ಸದಾ ನನ್ನನ್ನೇ ನಾ ಹುಡುಕಿಕೊಳ್ಳುವ #ಪಾಗಲ್ ಆಗದೆ, ಅನ್ಯರ ಅನಿಸಿಕೆ, ಅನುಮಾನಗಳ ಹುಡುಕಿ ಬಗೆಹರಿಸುವ […]
ಗಂಗೊಳ್ಳಿ ಮೀನುಗಾರಿಕಾ ಬಂದರು ಸಮಗ್ರ ಅಭಿವೃದ್ಧಿ – ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೀನುಗಾರಿಕೆ ಜೆಟ್ಟಿಯ ಸುಮಾರು 12 ಕೋಟಿ ರೂ. ವೆಚ್ಚದ ಪುನರ್ ನಿರ್ಮಾಣ ಕಾಮಗಾರಿ ಮತ್ತು ಒಂದು ಕೋಟಿ ರೂ. ವೆಚ್ಚದ ಮೀನುಗಾರಿಕಾ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ರಾಜ್ಯ ಮಟ್ಟದ ಭಾವ ಗೀತೆ ಗಾಯನ ಸ್ಪರ್ಧೆ
ಖಿದ್ಮಾ ಫೌಂಡೇಶನ್ ಕರ್ನಾಟಕ ಇವರ ಆಶ್ರಯದಲ್ಲಿ ಅಂಬಿಕಾ ತನಯದತ್ತ ನಾಮಾಂಕಿತ ದ.ರಾ. ಬೇಂದ್ರೆಯವರ ಸಾಹಿತ್ಯ ಆಧಾರಿತ ರಾಜ್ಯ ಮಟ್ಟದ ಭಾವ ಗೀತೆ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಪಾತ್ರ ಅತಿಮುಖ್ಯ : ಪ್ರೊ. ಕೆ. ಉಮೇಶ್ ಶೆಟ್ಟಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅನೇಕ ಅವಕಾಶಗಳಿದ್ದು ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.