ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಸಪ್ತಪದಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಯೋಜನೆಯಡಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಫೆ.25ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
Year: 2021
ಜೀವನ ಮೌಲ್ಯಗಳು : ವಿಶೇಷ ಉಪನ್ಯಾಸ
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಪ್ರಕೃತಿ ಸಹಜ ಮನುಷ್ಯರಾಗಬೇಕು ಎಂದು ಕುಂದಾಪುರದ ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲಚೇತನ್ ಶೆಟ್ಟಿ ಕೋವಾಡಿ ಹೇಳಿದರು.
ಗಂಗೊಳ್ಳಿ ಮಲ್ಯರಬೆಟ್ಟು ರಸ್ತೆ ಕಾಮಗಾರಿ – ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಇನ್ನು ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಮಲ್ಯರಬೆಟ್ಟು ದೇವಸ್ಥಾನದ ರಸ್ತೆಗೆ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು.
ಇ .ಸಿ .ಆರ್. ಕಾಲೇಜು ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ
ಮಧುವನ(ಫೆ.24) ಇ .ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 2020-21 ಶೈಕ್ಷಣಿಕ ಸಾಲಿನ ರೆಡ್ಕ್ರಾಸ್ ಘಟಕದ ಕಾರ್ಯ ಚಟುವಟಿಕೆ ಫೆಬ್ರವರಿ 23 ರಂದು ಉದ್ಘಾಟನೆಗೊಂಡಿತು. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿವಿಧ ವಿಭಾಗಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯ ಚಟುವಟಿಕೆ ಗಳನ್ನು ಪ್ರಾರಂಭಿಸಲಾಯಿತು. ಘಟಕದ ಯೋಜನಾಧಿಕಾರಿಗಳಾದ ಕುಮಾರಿ ಶ್ರೀನಿಧಿ ಹೆಗ್ಡೆ ಹಾಗೂ ಶ್ರೀಮತಿ ಕುಸುಮಾವತಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಪುರುಷ ವಸತಿ ನಿಲಯ ಹಾಗೂ ಮಹಿಳಾ ವಸತಿ ನಿಲಯದ ಮೇಲ್ವಿಚಾರಕರಿಗೆ , […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಅಂತರ್ಕಾಲೇಜು ಮಹಿಳೆಯರ ತ್ರೋಬಾಲ್ ಪಂದ್ಯಕೂಟ- ಸಮಾರೋಪ ಸಮಾರಂಭ
ಕುಂದಾಪುರ(ಫೆ.25): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ವಿ. ವಿ. ಕುಂದಾಪುರ ವಲಯ ಮಟ್ಟದ ಅಂತರ್ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭ ಫೆ. 24ರ ಸಂಜೆ 4.30ಕ್ಕೆ ಕಾಲೇಜಿನ ಬಿ.ಎಂ.ಎಸ್. ಕ್ರೀಡಾಂಗಣದಲ್ಲಿ ನಡೆಯಿತು. ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ವಹಿಸಿದ್ದರು. ಮುಖ್ಯ […]
ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಯೋಗಿಶ್ ಶಿರೂರು ಆಯ್ಕೆ
ರಾಷ್ಟ್ರೀಯ ಮೀನುಗಾರರ ಸಂಘ ನವದೆಹಲಿ ಇದರ ರಾಜ್ಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ನಾಯಕ ಯೋಗಿಶ್ ಶಿರೂರು ಆಯ್ಕೆಯಾಗಿದ್ದಾರೆ.
ಆಜ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುದೀಪ್ ಶೆಟ್ಟಿ ಆಯ್ಕೆ
ಕುಂದಾಪುರ(ಫೆ- 24) :ಸಿದ್ದಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆಜ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುದೀಪ್ ಶೆಟ್ಟಿ ಆಜ್ರಿ ಆಯ್ಕೆಯಾಗಿದ್ದಾರೆ. ಬಿ.ಜೆ.ಪಿ ಬೈಂದೂರು ಮಂಡಲದ ಅಧ್ಯಕ್ಷರಾಗಿರುವ ದೀಪಕ್ ಶೆಟ್ಟಿಯವರ ಸಲಹೆ ಮೆರೆಗೆ ಸಿದ್ದಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿರುವ ಪ್ರವೀಣ್ ಶೆಟ್ಟಿ ಕೊಡ್ಲಾಡಿಯವರು ಆಜ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುದೀಪ್ ಶೆಟ್ಟಿ ಆಜ್ರಿಯವರನ್ನು ಆಯ್ಕೆ ಮಾಡಿದ್ದಾರೆ.
ಇ ಸಿ ಆರ್ ಕಾಲೇಜು: ಎನ್.ಎಸ್.ಎಸ್ ಘಟಕ ಉದ್ಘಾಟನೆ
ಮಧುವನ (ಫೆ-24): ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ 2020-21ರ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭ ದಿನಾಂಕ 19-02-2021ರಂದು ನಡೆಯಿತು.ಲಕ್ಷ್ಮಿಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪಡುಕೆರೆ ಕೋಟ ಇದರ ಪ್ರಾಂಶುಪಾಲರಾದ ಪ್ರೋ.ನಿತ್ಯಾನಂದ ಗಾಂವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿವರಿಸುವುದರ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಯುವ ಪೀಳಿಗೆಯ ಕರ್ತವ್ಯದ ಬಗ್ಗೆ ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ಕಾಲೇಜು ಮಹಿಳೆಯರ ತ್ರೋಬಾಲ್ ಪಂದ್ಯಾಟ ಉದ್ಘಾಟನೆ
ಕ್ರೀಡೆಯಿಂದ ಅದೆಷ್ಟೋ ಯುವಜನತೆ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯನ್ನು ಮೆರೆಯುವುದರ ಜೊತೆಗೆ ತಮ್ಮ ವ್ಯಕ್ತಿತ್ವ ಮತ್ತು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಲೆಕ್ಕಪರಿಶೋಧಕರು ಹಾಗೂ ತರಿಗೆ ಸಲಹೆಗಾರರಾದ ಶ್ರೀ ಗಣೇಶ್ ಶೆಟ್ಟಿ ಮೊಳಹಳ್ಳಿ ಹೇಳಿದರು.
ಕರಾವಳಿಯಲ್ಲಿ ಕವಿರತ್ನ..!! ಇದು ಸವಿ ಸಂಜೆಯ ಕರೆಯೋಲೆ…
ಇವರು ಪೆನ್ನನೊಮ್ನೆ ಹಿಡಿದರೆ ಕಡಲ ಅಲೆಗಳ ನೀನಾದಕ್ಕು ಅಕ್ಷರಗಳಲ್ಲೆ ಹೊಂಬಣ್ಣ ಹೊದಿಸಬಲ್ಲರು, ಆಡುನುಡಿಗಳನ್ನೆ ಬಿಲ್ಲು ಮಾಡಿಕೊಂಡು ಹೂಬಾಣದಂತೆ ಎದೆಗೆ ನೂಗ್ಗ ಬಲ್ಲದು ಇವರ ಬತ್ತಳಕೆಯ ಅಕ್ಷರಾಸ್ತ್ರ…! D ಬಾಸ್ ಇಂಟ್ರೂಡಕ್ಷನ್ನು ,ರಾಕಿ ಬಾಯ್ಗೆ ಸಲಾಮು, ಕಿಚ್ಚನ ಸ್ಟೈಲು, ಅಪ್ಪು ಡ್ಯಾನ್ಸು ಇದೆಲ್ಲವಕ್ಕು ಇವರ ಸಾಲುಗಳೆ ಮಾಸು… ಪ್ರೀತಿ ಕಳೆದುಕೊಂಡವರಿಗೆ, ಪ್ರಣಯದಲ್ಲಿ ಬಿದ್ದೊರಿಗೆ ಇವರ ಹಾಡುಗಳೆ ಕ್ಲಾಸು…ಆಸ್ತಿಕರಿಗು, ನಾಸ್ತಿಕರಿಗೂ ಇವರು ಬರೆದಿರೊ ಹಾಡೇ ಫೆವರೇಟು.. ಕ್ವಾರ್ಟರ್ ಹಾಕೊಂಡು ಜೂಮಲ್ಲಿರುವವರ ಮೊಬೈಲ್ ಗ್ಯಾಲರಿಯಲ್ಲು […]