ಕೋಟ(ಜ.8): ಇಲ್ಲಿನ ಮಣೂರು ಸರಕಾರಿ ಸಂಯುಕ್ತ ಫ್ರೌಢಶಾಲೆಯ 6ನೆ ತರಗತಿಯ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಸ್ಟ್ಯಾನಪೊರ್ಡ್ ಯುನಿವರ್ಸಿಟಿ ಯು ಎಸ್ ಎ, ಪೊಲ್ಡ್ ಸ್ಕೋಪ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ, ದಯಾಲಾಬಾಗ್ ಎ್ಯಜುಕೇಶನ್ ಇನ್ಸ್ಟಿಟ್ಯೂಟ್ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಳ ಮ್ಯೆಕ್ರೊಸ್ಕೋಪ್ ಮಾದರಿಯ ಸಾಧನ ಪೊಲ್ಡೆಸ್ಕೋಪ್ ನ್ನು ಉಚಿತವಾಗಿ ವಿತರಿಸುದರ ಜೊತೆಗೆ ಅದರ ಬಳಕೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. […]
Day: January 8, 2022
ಕನ್ನಡ ಭಾಷೆ – ರಕ್ಷಣೆ ಯಾರ ಹೊಣೆ ?
ಕನ್ನಡ ಇದು ಕನ್ನಡಿಗರ ಆಡುಭಾಷೆ. ಭಾಷಾ ಸೊಗಡಿನಲ್ಲಿ ಹಲವು ಕವಲುಗಳಿದ್ದರೂ ಕೊನೆಗೆ ಸ್ವಾಭಿಮಾನದ ಸಾಗರಕ್ಕೆ ಸೇರುವ ವಿಶಾಲವಾಗಿ ಹರಿಯುವ ನದಿ ನಮ್ಮ ಕನ್ನಡ . ಇಲ್ಲಿ ಊರಿಗೊಂದು ರೀತಿಯಲ್ಲಿ ಕನ್ನಡ ,ಹೊಸ ಅರ್ಥದ ಹೊಸ ಭಾವಗಳ ಪುಸ್ತಕ. ಈಗ ಈ ಪುಸ್ತಕ ನನ್ನದೂ ನಮ್ಮದು ಅನ್ನೋ ಹೆಮ್ಮೆಯಾಗಲಿ ಕಲಿಯುವ ಆಸೆಯಾಗಲಿ ಕಲಿತದ್ದನ್ನು ಬಳಸುವ ಔದಾರ್ಯವಾಗಲಿ ಎಲ್ಲವೂ ಬತ್ತಿ ಹೊಗುತ್ತಿರುವ ಸಾಗರದಂತೆನಿಸಿ ಬಿಟ್ಟಿದೆ. ಕನ್ನಡ ಬಳಸಬೇಕಾದ ನಾವು ಯಾರಿಗೋ ಕನ್ನಡ ಕಲಿಸೋ […]
ಜ.13 ರಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ
ಶಿರ್ವ( ಜ.8): ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಜನವರಿ 13ರಂದು ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಈಗಾಗಲೇ ಬಿಸಿಎ, ಬಿಎಸ್ಸಿ (ಸಿ. ಎಸ್),ಬಿಇ( ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ ಎಸ್),ಎಂಎಸ್ಸಿ, ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.00 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಆಧಾರ್ ಕಾರ್ಡ್, […]
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಲಸಿಕಾ ಅಭಿಯಾನ
ಶಿರ್ವ(ಜ.8): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನವನ್ನು ಕಾಲೇಜಿನ ದೃಶ್ಯ ಶ್ರವ್ಯ ಕೊಠಡಿದಲ್ಲಿ ಜನವರಿ 03 ರಿಂದ ಆಯೋಜಿಸಲಾಯಿತು. ಪದವಿ ಕಾಲೇಜುಗಳಲ್ಲಿ ಹೊಸತಾಗಿ ಸೇರ್ಪಡೆ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ […]
ಆಶ್ರಯದಾತನ ಆಸರೆ: ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ
ಮುಳ್ಳಿಕಟ್ಟೆ(ಜ.8): ಮುಳ್ಳಿಕಟ್ಟೆ ಸಮೀಪ ಹೊಸಾಡು ಗ್ರಾಮದ ನಿವಾಸಿಯಾದ ಸುಶೀಲಾ ಪೂಜಾರ್ತಿಯವರಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ವತಿಯಿಂದ ನೂತನ ಮನೆಯನ್ನು ಆಶ್ರಯದಾತ,ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಜ.7ರಂದು ಹಸ್ತಾಂತರಿಸಿದರು. ಡಾ .ಗೋವಿಂದಬಾಬು ಪೂಜಾರಿಯವರ ಪೂರ್ಣ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಆರನೇ ಮನೆ ಇದಾಗಿದ್ದು, ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಮನೆ ಗೃಹಪ್ರವೇಶ ಉದ್ಘಾಟನೆ ನೆರವೇರಿಸಿ ಆಶೀರ್ವಚಿಸಿದರು. ಸುಶೀಲಾ ಪೂಜಾರ್ತಿಯವರ ಪತಿ ಕೆಲ […]