ಬೆಂಗಳೂರು (ಜ.9): ಬೆಂಗಳೂರಿನ ಪ್ರಸಿದ್ದ ಕ್ಯಾಟರಿಂಗ್ ಸಂಸ್ಥೆಯಾದ ಕುಂದಾಪುರ ಮೂಲದ ಶ್ರೀ ರಾಘವೇಂದ್ರ ಹಾರ್ಮಣ್ ಮಾಲಕತ್ವದ ಎಸ್.ಆರ್.ಕ್ಯಾಟರರ್ಸ ನ ಹೊಸ ವರ್ಷದ ಕ್ಯಾಲೆಂಡರ್ ನ್ನು ರಾಜ್ಯದ ಹಿರಿಯ ರಾಜಕಾರಣಿ ,ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಶ್ರೀ ವೈ.ಎಸ್.ವಿ.ದತ್ತಾರವರು ಇತ್ತೀಚೆಗೆ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕ್ಯಾಟರರ್ಸ ನ ಮಾಲಕ ಶ್ರೀ ರಾಘವೇಂದ್ರ ಹಾರ್ಮಣ್ ಉಪಸ್ಥಿತರಿದ್ದರು.
Day: January 9, 2022
ಪ್ರಧಾನಿ ಮೋದಿಜಿಯ ದೀರ್ಘಾಯುಷ್ಯಕ್ಕಾಗಿ ಕುಂದೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಮತ್ತು ವಿಶೇಷಪೂಜೆ
Views: 401
ಕುಂದಾಪುರ (ಜ.8): ಪ್ರಧಾನಿ ನರೇಂದ್ರ ಮೋದಿಜಿಯ ದೀರ್ಘಾಯುಷ್ಯಕ್ಕಾಗಿ ಕುಂದೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಮತ್ತು ವಿಶೇಷಪೂಜೆಯನ್ನುಕುಂದಾಪುರ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಜ.7 ರಂದು ಹಮ್ಮಿಕೊಳ್ಳಲಾಯಿತು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ನಿಗದಿತ ಭದ್ರತಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಅವಾಂತರ ಸ್ರಷ್ಠಿಸಿದ್ದ ಪಂಜಾಬ್ ಸರಕಾರದ ನಡೆಯನ್ನು ಖಂಡಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಮಂಡಲದ ಕ್ಷೇತ್ರಾಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ […]