ಕುಂದಾಪುರ(ಜ.13): ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಎನ್.ಎಸ್.ಎಸ್ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಪ್ರವೀಣ್ ಶೆಟ್ಟಿಯವರು ಜ.12 ರಂದು ನೆರವೆರಿಸಿದರು. ಉದ್ಘಾಟನಾ ನೆಲೆಯ ಮಾತುಗಳನ್ನಾಡಿ ಅವರು ಎನ್.ಎಸ್.ಎಸ್ ನ ಮಹತ್ವ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಎನ್.ಎಸ್.ಎಸ್ ನ ಪಾತ್ರದ ಕುರಿತು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಎನ್.ಎಸ್.ಎಸ್ ಅನುಭವವನ್ನು ಹಂಚಿಕೊಂಡರು. […]
Month: January 2022
ಡಾ.ಬಿ. ಬಿ. ಹೆಗ್ಡೆ ಕಾಲೇಜು : ರಾಷ್ಟ್ರೀಯ ಯುವ ದಿನಾಚರಣೆ
ಕುಂದಾಪುರ(ಜ.13): ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಜ.12 ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಎನ್.ಎಸ್.ಎಸ್ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಪ್ರವೀಣ್ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದೇಶ ನಿರ್ಮಾಣದಲ್ಲಿ ಎನ್.ಎಸ್.ಎಸ್.ನ ಪಾತ್ರ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶವನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ […]
ಜ.14 ಮತ್ತು 15 ರಂದು ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜ.14 ಮತ್ತು 15 ರಂದು ನಡೆಯಲಿದೆ. ಜ.14 ರ ಶುಕ್ರವಾರ ಸಂಜೆ 6 ಗಂಟೆಗೆ ದೈವದರ್ಶನ ಹಾಗೂ ಗೆಂಡಸೇವೆ, 7 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಜ.15ರ ಶನಿವಾರಬೆಳಿಗ್ಗೆ ಗಂಟೆ 10-00ಕ್ಕೆ […]
ನಿವೇದಿತಾ ಪ್ರೌಢಶಾಲೆ ಬಸ್ರೂರು: ಕೋವಿಡ್ ಲಸಿಕಾಕರಣ ಅಭಿಯಾನ
ಬಸ್ರೂರು (ಜ.10): ಇಲ್ಲಿನ ನಿವೇದಿತಾ ಪ್ರೌಢಶಾಲೆಯಲ್ಲಿ 5 ರಿಂದ 18 ರವರೆಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾಕರಣ ಅಭಿಯಾನ ಪ್ರಾಥವಿುಕ ಆರೋಗ್ಯ ಕೇಂದ್ರ ಬಸ್ರೂರು ಇವರ ಸಹಕಾರದಿಂದ ಜ.10 ರಂದು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕ ಶ್ರೀ.ಬಿ ಅಪ್ಪಣ್ಣ ಹೆಗ್ಡೆಯವರು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಪೂಜಾರಿಯವರು ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ವಿದ್ಯಾರವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಲಾ […]
ಎಸ್.ಆರ್ .ಕ್ಯಾಟರರ್ಸ್ ಬೆಂಗಳೂರು: ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ವೈ.ಎಸ್.ವಿ ದತ್ತಾ
ಬೆಂಗಳೂರು (ಜ.9): ಬೆಂಗಳೂರಿನ ಪ್ರಸಿದ್ದ ಕ್ಯಾಟರಿಂಗ್ ಸಂಸ್ಥೆಯಾದ ಕುಂದಾಪುರ ಮೂಲದ ಶ್ರೀ ರಾಘವೇಂದ್ರ ಹಾರ್ಮಣ್ ಮಾಲಕತ್ವದ ಎಸ್.ಆರ್.ಕ್ಯಾಟರರ್ಸ ನ ಹೊಸ ವರ್ಷದ ಕ್ಯಾಲೆಂಡರ್ ನ್ನು ರಾಜ್ಯದ ಹಿರಿಯ ರಾಜಕಾರಣಿ ,ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಶ್ರೀ ವೈ.ಎಸ್.ವಿ.ದತ್ತಾರವರು ಇತ್ತೀಚೆಗೆ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕ್ಯಾಟರರ್ಸ ನ ಮಾಲಕ ಶ್ರೀ ರಾಘವೇಂದ್ರ ಹಾರ್ಮಣ್ ಉಪಸ್ಥಿತರಿದ್ದರು.
ಪ್ರಧಾನಿ ಮೋದಿಜಿಯ ದೀರ್ಘಾಯುಷ್ಯಕ್ಕಾಗಿ ಕುಂದೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಮತ್ತು ವಿಶೇಷಪೂಜೆ
ಕುಂದಾಪುರ (ಜ.8): ಪ್ರಧಾನಿ ನರೇಂದ್ರ ಮೋದಿಜಿಯ ದೀರ್ಘಾಯುಷ್ಯಕ್ಕಾಗಿ ಕುಂದೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಮತ್ತು ವಿಶೇಷಪೂಜೆಯನ್ನುಕುಂದಾಪುರ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಜ.7 ರಂದು ಹಮ್ಮಿಕೊಳ್ಳಲಾಯಿತು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿ ಸಂದರ್ಭದಲ್ಲಿ ನಿಗದಿತ ಭದ್ರತಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಅವಾಂತರ ಸ್ರಷ್ಠಿಸಿದ್ದ ಪಂಜಾಬ್ ಸರಕಾರದ ನಡೆಯನ್ನು ಖಂಡಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಬಿಜೆಪಿ ಮಂಡಲದ ಕ್ಷೇತ್ರಾಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ […]
ಮಣೂರು ಸರಕಾರಿ ಸಂಯುಕ್ತ ಫ್ರೌಢಶಾಲೆ:ಉಚಿತ ಪೊಲ್ಡ್ ಸ್ಕೋಪ್ ವಿತರಣೆ ಮತ್ತು ಬಳಕೆ ಕುರಿತು ಕಾರ್ಯಗಾರ
ಕೋಟ(ಜ.8): ಇಲ್ಲಿನ ಮಣೂರು ಸರಕಾರಿ ಸಂಯುಕ್ತ ಫ್ರೌಢಶಾಲೆಯ 6ನೆ ತರಗತಿಯ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಸ್ಟ್ಯಾನಪೊರ್ಡ್ ಯುನಿವರ್ಸಿಟಿ ಯು ಎಸ್ ಎ, ಪೊಲ್ಡ್ ಸ್ಕೋಪ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ, ದಯಾಲಾಬಾಗ್ ಎ್ಯಜುಕೇಶನ್ ಇನ್ಸ್ಟಿಟ್ಯೂಟ್ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಳ ಮ್ಯೆಕ್ರೊಸ್ಕೋಪ್ ಮಾದರಿಯ ಸಾಧನ ಪೊಲ್ಡೆಸ್ಕೋಪ್ ನ್ನು ಉಚಿತವಾಗಿ ವಿತರಿಸುದರ ಜೊತೆಗೆ ಅದರ ಬಳಕೆಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. […]
ಕನ್ನಡ ಭಾಷೆ – ರಕ್ಷಣೆ ಯಾರ ಹೊಣೆ ?
ಕನ್ನಡ ಇದು ಕನ್ನಡಿಗರ ಆಡುಭಾಷೆ. ಭಾಷಾ ಸೊಗಡಿನಲ್ಲಿ ಹಲವು ಕವಲುಗಳಿದ್ದರೂ ಕೊನೆಗೆ ಸ್ವಾಭಿಮಾನದ ಸಾಗರಕ್ಕೆ ಸೇರುವ ವಿಶಾಲವಾಗಿ ಹರಿಯುವ ನದಿ ನಮ್ಮ ಕನ್ನಡ . ಇಲ್ಲಿ ಊರಿಗೊಂದು ರೀತಿಯಲ್ಲಿ ಕನ್ನಡ ,ಹೊಸ ಅರ್ಥದ ಹೊಸ ಭಾವಗಳ ಪುಸ್ತಕ. ಈಗ ಈ ಪುಸ್ತಕ ನನ್ನದೂ ನಮ್ಮದು ಅನ್ನೋ ಹೆಮ್ಮೆಯಾಗಲಿ ಕಲಿಯುವ ಆಸೆಯಾಗಲಿ ಕಲಿತದ್ದನ್ನು ಬಳಸುವ ಔದಾರ್ಯವಾಗಲಿ ಎಲ್ಲವೂ ಬತ್ತಿ ಹೊಗುತ್ತಿರುವ ಸಾಗರದಂತೆನಿಸಿ ಬಿಟ್ಟಿದೆ. ಕನ್ನಡ ಬಳಸಬೇಕಾದ ನಾವು ಯಾರಿಗೋ ಕನ್ನಡ ಕಲಿಸೋ […]
ಜ.13 ರಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ
ಶಿರ್ವ( ಜ.8): ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಜನವರಿ 13ರಂದು ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಈಗಾಗಲೇ ಬಿಸಿಎ, ಬಿಎಸ್ಸಿ (ಸಿ. ಎಸ್),ಬಿಇ( ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ ಎಸ್),ಎಂಎಸ್ಸಿ, ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.00 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಆಧಾರ್ ಕಾರ್ಡ್, […]
ಸಂತ ಮೇರಿ ಮಹಾವಿದ್ಯಾಲಯದಲ್ಲಿ ಲಸಿಕಾ ಅಭಿಯಾನ
ಶಿರ್ವ(ಜ.8): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ಸಿಸಿ, ಎನ್ಎಸ್ಎಸ್, ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನವನ್ನು ಕಾಲೇಜಿನ ದೃಶ್ಯ ಶ್ರವ್ಯ ಕೊಠಡಿದಲ್ಲಿ ಜನವರಿ 03 ರಿಂದ ಆಯೋಜಿಸಲಾಯಿತು. ಪದವಿ ಕಾಲೇಜುಗಳಲ್ಲಿ ಹೊಸತಾಗಿ ಸೇರ್ಪಡೆ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ […]










