ಬಸ್ರೂರು(ಫೆ.6): ಖ್ಯಾತ ಸ್ಯಾಂಡಲ್ ವುಡ್ ನಟ ಯಶ್ ಹಾಗೂ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಕೋಟೆ ಆಂಜನೇಯ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ಕೆರೆಕಟ್ಟೆ, ಸುಬ್ರಹ್ಮಣ್ಯ ಭಟ್,ಸದಾನಂದ ಮಾರ್ಗೋಳಿ, ಕೃಷ್ಣ ಪೈಂಟರ್, ಸಂಜೀವ ಮೇಸ್ತ್ರಿ, ಸುಬ್ರಹ್ಮಣ್ಯಕಾಂತ್ ಕೆರೆಕಟ್ಟೆ, ಬಾಲಕೃಷ್ಣ ಶೇರೆಗಾರ್,ಪ್ರದೀಪ ಕುಮಾರ್ ಬಸ್ರೂರು,ಗುರುಪ್ರಸಾದ್ ದೇವಾಡಿಗ,ಶಿವಪ್ರಸಾದ್ ಭಟ್,ಮಹೇಶ್ ಕಿಣಿ ಹಾಗೂ ಸಂತೋಷ್ ಬಳ್ಕೂರು ಉಪಸ್ಥಿತರಿದ್ದರು.
Day: February 6, 2022
ಬಗ್ವಾಡಿ: ರಸ್ತೆ ದುರಸ್ತಿಗೆ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿಯವರಿಗೆ ಮನವಿ
ವಂಡ್ಸೆ(ಫೆ.6): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸೇತುವೆ ನಂತರದ ಸುಮಾರು 600 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು , ರಸ್ತೆ ದುರಸ್ತಿ ಮಾಡಲು ಶಾಸಕ ಶ್ರ್ರೀ ಸುಕುಮಾರ್ ಶೆಟ್ಟಿ ಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಶಾಸಕರ ಗ್ರಹ ಕಛೇರಿಯಲ್ಲಿ ಮನವಿ ನೀಡಲಾಯಿತು. ದೇವಸ್ಥಾನದ ಜಾತ್ರೆಯೊಳಗೆ ರಸ್ತೆ ನಿರ್ಮಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮೊಗವೀರ ಮಹಾಜನ ಸಂಘ(ರಿ). ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ […]
ಸೈಬ್ರಕಟ್ಟೆ: ಆರೋಗ್ಯ ಅರಿವು ಕಾರ್ಯಕ್ರಮ
ಸೈಬ್ರಕಟ್ಟೆ(ಫೆ.6): ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬ್ರಕಟ್ಟೆ ಹಾಗೂ ರೋಟರಿ ಕ್ಲಬ್ ಸೈಬ್ರಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಜ್ರಹಳ್ಳಿ ಶ್ರೀ ವಿಘ್ನೇಶ್ವರ ಗೇರುಬೀಜ ಕಾರ್ಖಾನೆಯ ವಠಾರದಲ್ಲಿ ಕಲಾವಿದರಾದ ಡಾ.ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಜಾನಪದ ಕಲಾ ಪ್ರದರ್ಶನ ,ಬೀದಿನಾಟಕದ ಮೂಲಕ ತಾಯಿ ಮಕ್ಕಳ ಆರೋಗ್ಯ ಹಾಗೂ ಕರೋನ / ಸಾಂಕ್ರಾಮಿಕ ರೋಗಗಳ ಕುರಿತು […]
ಕುಂದಾಪುರ ಸ.ಪ.ಪೂ ಕಾಲೇಜು: ವಿಶ್ವಾಸ ಕಿರಣ ಕಾರ್ಯಕ್ರಮ
ಕುಂದಾಪುರ (ಫೆ.6): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಆಂಗ್ಲ ಭಾಷಾ ವಿಷಯದ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ವಿಶ್ವಾಸ ಕಿರಣ ತರಗತಿಗಳನ್ನು ಕುಂದಾಪುರ ಸ.ಪ.ಪೂ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 101 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿದ್ದು, ಪ್ರತಿ ದಿನವೂ ಮೂರು ತಂಡಗಳನ್ನು ಮಾಡಿ ತರಗತಿಗಳನ್ನು ನಡೆಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಶ್ರೀ […]