ಗಂಗೊಳ್ಳಿ(ಫೆ.10): ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿಯವರು ಕಡಲು, ಕರಾವಳಿ ಜೀವನ, ಮೀನುಗಾರಿಕೆ, ಮತ್ಸ್ಯ ಸಂಪತ್ತಿನ ಕುರಿತು ಜಯಕಿರಣದಲ್ಲಿ ಬರೆಯುತ್ತಿರುವ ಸರಣಿ ಅಂಕಣಗಳ ಸಂಕಲನ ಪಡುಗಡಲಿನಿಂದ ಕೃತಿ ಇದೇ ಫೆಬ್ರವರಿ 12 ರಂದು, ಮುಲ್ಕಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ದಶಕಗಳ ಕಾಲ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ನಾಗರಾಜ ಖಾರ್ವಿಯವರ ನೈಜ ಅನುಭವಗಳು, ರೋಚಕ ವಿಚಾರಗಳು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ನಾಯ್ಕ್ರವರ ಮುನ್ನುಡಿ, ಸಿದ್ಧಾಪುರ […]
Day: February 10, 2022
ಗಂಗೊಳ್ಳಿ: ಶವ ಸ್ನಾನದ ಟೇಬಲ್ ಕೊಡುಗೆ
ಗಂಗೊಳ್ಳಿ(ಫೆ.10): ಇಲ್ಲಿನ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯ ಸಾರ್ವಜನಿಕರ ಉಪಯೋಗಕ್ಕಾಗಿ ಶವ ಸ್ನಾನಕ್ಕಾಗಿ ಬಳಸುವ ಟೇಬಲನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮಣ ಬಿಲ್ಲವ ಮತ್ತು ಶ್ರೀನಿವಾಸ ಜತ್ತನ್, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿ.ಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಕುಂದಾಪುರ(ಫೆ.10) ಕುಂದೇಶ್ವರ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆoಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿರುತ್ತಾರೆ. ಡಿಸೆಂಬರ್ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ […]