ಗಂಗೊಳ್ಳಿ (ಫೆ. 13) : ಕುಂದ ಸಿರಿ ಬಳಗ ತನ್ನ ಜಾಲತಾಣಗಳ ಮೂಲಕ ಆಯೋಜಿಸಿದ್ದ ಕನ್ನಡದಲ್ಲಿ ಕವನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ರಚಿಸಿದ “ಮೃತ್ಯು” ಕವನವು ಬಹುಮಾನಕ್ಕೆ ಭಾಜನವಾಗಿದ್ದು 1000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
Day: February 13, 2022
ಸಿ. ಎ. ಪರೀಕ್ಷೆಯಲ್ಲಿ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣ
ಕುಂದಾಪುರ (ಫೆ. 13) : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ತ್ರಾಸಿಯ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣರಾಗಿದ್ದಾರೆ. ಇವರು ತ್ರಾಸಿಯ ಅನಂತ ಮಧ್ಯಸ್ಥ ಮತ್ತು ಪೂರ್ಣಿಮಾ ಮಧ್ಯಸ್ಥ ಇವರ ಪುತ್ರಿ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಪಡುಗಡಲಿನಿಂದ ಕೃತಿ ಲೋಕಾರ್ಪಣೆ
ಕುಂದಾಪುರ (ಫೆ. 13) : ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ಅವರು ಹೇಳಿದರು. […]
ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಮಾರಣಕಟ್ಟೆ, (ಫೆಬ್ರವರಿ 13) : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ 2021- 22 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಫೆ.12ರಂದು ಶ್ರೀ ಕ್ಷೇತ್ರ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಿತು. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸದಾಶಿವ ಶೆಟ್ಟಿ ಯವರು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು […]