ಕುಂದಾಪುರ(ಫೆ.24):ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾತೃಭಾಷೆ ದಿವಸದ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಾತೃಭಾಷೆ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.ಪ್ರತಿಯೊಬ್ಬರಿಗೂ ಅವರ ಮಾತೃಭಾಷೆಯ ಮೇಲಿನ ಅಭಿಮಾನ ಹೆಚ್ಚಿಸುವ ಉದ್ದೇಶದಿಂದ ಪ್ರತೀ ವರ್ಷ ಫೆಬ್ರುವರಿ 21 ರಂದು ಅಂತರರಾಷ್ಟ್ರೀಯ ಮಾತೃಭಾಷೆ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಇ&ಸಿ ವಿಭಾಗದ ಪ್ರೊ. ಸೂಕ್ಷ್ಮ ಅಡಿಗ ಕಾರ್ಯಕ್ರಮ […]
Day: February 24, 2022
ಮೂಡ್ಲಕಟ್ಟೆ ಎಂ ಐ ಟಿ: ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಕುಂದಾಪುರ( ಫೆ.24): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಜನತಾ ಗ್ರೂಪ್, ಕೋಟ ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್. ಕೃಷ್ಣ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮುಂದಿನ ಎರಡು ವರ್ಷಗಳ ವಿದ್ಯಾರ್ಥಿ ಜೀವನವನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಹಾಗೆಯೇ ಅರ್ಹತೆ, ಸಾಮರ್ಥ್ಯ ಮತ್ತು ಉದ್ಯೋಗಕ್ಕೆ ಬೇಕಾದ ಸೂಕ್ತತೆಗಳನ್ನು ಬೆಳೆಸಿಕೊಳ್ಳಲು […]
ಶ್ರೀ ಚಂದ್ರಶೇಖರ್ ಬಸ್ರೂರು ರವರಿಗೆ “ಭಾರತ ಸೇವಾ ರತ್ನ ಪ್ರಶಸ್ತಿ”
ಕುಂದಾಪುರ (ಫೆ.24):ಸುದ್ದಿ ಕಿರಣ ಟಿವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಡಮಾಡುವ “ಭಾರತ ಸೇವಾ ರತ್ನ ಪ್ರಶಸ್ತಿ” ಯನ್ನು ಶ್ರೀ ಚಂದ್ರಶೇಖರ ಬಸ್ರೂರು ರವರಿಗೆ ಲಭಿಸಿದೆ. ಫೆ. 20 ರಂದು ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣ ಬೆಂಗಳೂರು ಇಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಂಗಭೂಮಿ ಕಲಾವಿದರಾಗಿ,ನಾಟಕ ರಚನೆ ಹಾಗೂ ನಿರ್ದೇಶಕರು,ಸಿನಿಮಾ ನಟ,ನಿರ್ದೇಶಕ,ನಿರ್ಮಾಪಕರಾಗಿ,ಸಾರ್ವಜನಿಕ ಹೋರಾಟದಲ್ಲಿ ಮುಂಚೂಣಿಯಾಗಿ ಇವರು ಸೇವೆ ಸಲ್ಲಿಸಿರುತ್ತಾರೆ.