ಕುಂದಾಪುರ (ಫೆ.20): ಲಯನ್ಸ್ , ರೊಟ್ರ್ಯಾಕ್ಟ್, ಜೇಸಿ, ಹಳೆ ವಿದ್ಯಾರ್ಥಿ ಸಂಘ, ಯುವ ಬಂಟರ ಸಂಘ, ಉಪನ್ಯಾಸಕರ ಸಂಘ ಸೇರಿದಂತೆ ಹತ್ತು ಹಲವು ಸಂಘಟನೆಗಳಲ್ಲಿ ಅಧ್ಯಕ್ಷ ಗಾದಿಯೂ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ, ಲಯನ್ಸ್ ಇಂಟರ್ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್, ಮಲ್ಟಿಪಲ್ ಯಂಗ್ ಲಯನ್ ಅವಾರ್ಡ್ ,ರಾಷ್ಟ ಪ್ರಶಸ್ತಿ ಪುರಸ್ಕೃತ ನಿರೂಪಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಯವರು ಅಖಿಲ […]
Month: February 2022
ಕವನ ಸ್ಪರ್ಧೆ – ನರೇಂದ್ರ ಎಸ್. ಗಂಗೊಳ್ಳಿ ದ್ವಿತೀಯ ಸ್ಥಾನ
ಗಂಗೊಳ್ಳಿ (ಫೆ. 13) : ಕುಂದ ಸಿರಿ ಬಳಗ ತನ್ನ ಜಾಲತಾಣಗಳ ಮೂಲಕ ಆಯೋಜಿಸಿದ್ದ ಕನ್ನಡದಲ್ಲಿ ಕವನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ರಚಿಸಿದ “ಮೃತ್ಯು” ಕವನವು ಬಹುಮಾನಕ್ಕೆ ಭಾಜನವಾಗಿದ್ದು 1000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸಿ. ಎ. ಪರೀಕ್ಷೆಯಲ್ಲಿ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣ
ಕುಂದಾಪುರ (ಫೆ. 13) : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ತ್ರಾಸಿಯ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣರಾಗಿದ್ದಾರೆ. ಇವರು ತ್ರಾಸಿಯ ಅನಂತ ಮಧ್ಯಸ್ಥ ಮತ್ತು ಪೂರ್ಣಿಮಾ ಮಧ್ಯಸ್ಥ ಇವರ ಪುತ್ರಿ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಪಡುಗಡಲಿನಿಂದ ಕೃತಿ ಲೋಕಾರ್ಪಣೆ
ಕುಂದಾಪುರ (ಫೆ. 13) : ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ಅವರು ಹೇಳಿದರು. […]
ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಮಾರಣಕಟ್ಟೆ, (ಫೆಬ್ರವರಿ 13) : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ 2021- 22 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಫೆ.12ರಂದು ಶ್ರೀ ಕ್ಷೇತ್ರ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಿತು. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸದಾಶಿವ ಶೆಟ್ಟಿ ಯವರು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು […]
ಡಾI ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ
ಕುಂದಾಪುರ (ಫೆ.10): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಇದೇ ಫೆ.12 ರಿಂದ 18 ರ ತನಕ ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ನಡೆಯಲಿದೆ. ಫೆ.12 ರ ಬೆಳಿಗ್ಗೆ 11:00 ಕ್ಕೆ ಮಾರಣಕಟ್ಟೆಯ ಮಹಾಲಿಂಗೇಶ್ವರ ಸಭಾ ಭವನದಲ್ಲಿ ಶಿಬಿರದ ಉದ್ಘಾಟನೆ ನಡೆಯಲಿದ್ದು ,ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಕುಂದಾಪುರ ಇದರ ಅಧ್ಯಕ್ಷರು ಹಾಗೂ ಬೈಂದೂರಿನ ಶಾಸಕ ಶ್ರೀ. […]
ಫೆಬ್ರವರಿ 12ಕ್ಕೆ “ಪಡುಗಡಲಿನಿಂದ” ಕೃತಿ ಅನಾವರಣ
ಗಂಗೊಳ್ಳಿ(ಫೆ.10): ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿಯವರು ಕಡಲು, ಕರಾವಳಿ ಜೀವನ, ಮೀನುಗಾರಿಕೆ, ಮತ್ಸ್ಯ ಸಂಪತ್ತಿನ ಕುರಿತು ಜಯಕಿರಣದಲ್ಲಿ ಬರೆಯುತ್ತಿರುವ ಸರಣಿ ಅಂಕಣಗಳ ಸಂಕಲನ ಪಡುಗಡಲಿನಿಂದ ಕೃತಿ ಇದೇ ಫೆಬ್ರವರಿ 12 ರಂದು, ಮುಲ್ಕಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ದಶಕಗಳ ಕಾಲ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ನಾಗರಾಜ ಖಾರ್ವಿಯವರ ನೈಜ ಅನುಭವಗಳು, ರೋಚಕ ವಿಚಾರಗಳು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ನಾಯ್ಕ್ರವರ ಮುನ್ನುಡಿ, ಸಿದ್ಧಾಪುರ […]
ಗಂಗೊಳ್ಳಿ: ಶವ ಸ್ನಾನದ ಟೇಬಲ್ ಕೊಡುಗೆ
ಗಂಗೊಳ್ಳಿ(ಫೆ.10): ಇಲ್ಲಿನ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯ ಸಾರ್ವಜನಿಕರ ಉಪಯೋಗಕ್ಕಾಗಿ ಶವ ಸ್ನಾನಕ್ಕಾಗಿ ಬಳಸುವ ಟೇಬಲನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮಣ ಬಿಲ್ಲವ ಮತ್ತು ಶ್ರೀನಿವಾಸ ಜತ್ತನ್, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಿ.ಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ
ಕುಂದಾಪುರ(ಫೆ.10) ಕುಂದೇಶ್ವರ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆoಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿರುತ್ತಾರೆ. ಡಿಸೆಂಬರ್ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ […]
ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ
ಶಿರ್ವ(ಫೆ.9): ಸಂತ ಮೇರಿ ಮಹಾವಿದ್ಯಾಲಯದ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ ಮುಂದೆ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು […]