ಸೌಕೂರು(ಮಾ,13): ಸ್ವಾತಂತ್ರ್ಯ ಹೋರಾಟಗಾರ ಕೊಳ್ಕೈಬೈಲು ಮಹಾಬಲ ಶೆಟ್ಟಿಯವರ ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ ಮಾ.13ರಂದು ಕುಂದಾಪುರದ ಗುಳ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಕೂರು ಬೋಳ್ ಕಟ್ಟೆನಲ್ಲಿ ನಡೆಯಿತು. ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆ ಕಂಡ್ಲೂರು ಇದರ ಠಾಣಾಧಿಕಾರಿ ಶ್ರೀ ನಿರಂಜನ್ ಗೌಡ ರವರು ನಾಮ ಫಲಕ ಅನಾವರಣಗೈದರು. ಕೊಳ್ಕೈಬೈಲು ಮಹಾಬಲ ಶೆಟ್ಟಿ ಯವರ ಕೊಡುಗೆಯಕುರಿತು ಅಂತರಾಷ್ಟ್ರೀಯ ಚಿತ್ರ ಕಲಾವಿದ ಮಹೇಂದ್ರ ವಕ್ವಾಡಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಮೊಗವೀರ ದುರ್ಗಾ ನಗರ ಸೌಕೂರು […]
Day: March 21, 2022
ವರಸಿದ್ಧಿ ವಿನಾಯಕ ಪಿ.ಯು ಕಾಲೇಜು ಕೆರಾಡಿ:ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕೆರಾಡಿ(ಮಾ.20): ಇಲ್ಲಿನ ವರಸಿದ್ಧಿ ವಿನಾಯಕ ಪಿ.ಯು ಕಾಲೇಜಿನ 2021 – 2022 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಮಾ.17 ರಂದು ಕಾಲೇಜಿನ ಕ್ರಷ್ಣಮ್ಮ ಸಭಾಭವನದಲ್ಲಿ ಜರುಗಿತು. ಕಾಲೇಜಿನ ಸಂಸ್ಥಾಪಕರಾದ ಶ್ರೀ ಕೆರಾಡಿ ಚಂದ್ರಶೇಖರ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳು ಎರಡು ವರ್ಷದ ತಮ್ಮ ಕಾಲೇಜು ಜೀವನದ ಅನುಭವ ಅನಿಸಿಕೆಗಳನ್ನು ಹಂಚಿಕೊಂಡರು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪ್ರಾಂಶುಪಾಲರಾದ […]
ಸಂತ ಮೇರಿ ಕಾಲೇಜು ಶಿರ್ವ: ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಶಿವ೯(ಮಾ.20) : ಸಂತ ಮೇರಿ ಕಾಲೇಜಿನ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಜ್ಞಾನ ವೈಜ್ಞಾನಿಕ ಮನೋಧರ್ಮ ಕ್ಕಾಗಿ ಯುವಜನತೆ ಎಂಬ ಧ್ಯೇಯದ ಅಡಿಯಲ್ಲಿ ಪ್ರೌಢ ಶಾಲಾ ವಿಭಾಗ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾನಗರ ಮುದರಂಗಡಿಯಲ್ಲಿ ನಡೆಯಿತು. ಪ್ರತಿಯೊಬ್ಬ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಥಿ೯ಯು ನಿಷ್ಠೆಯಿಂದ ಪಾಲ್ಗೊಂಡು ತನ್ನ ಮುಂದಿನ ಜೀವನದಲ್ಲಿ ನಾಯಕನಾಗಿ ಹೊರಹೊಮ್ಮಲು ಸಾಧ್ಯವೆಂದು ಕಾರ್ಯಕ್ರಮ ಉದ್ಘಾಟಿಸಿ ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷಶ್ರೀ ಶರತ್ ಶೆಟ್ಟಿ ಮಾತನಾಡಿದರು. ಬದುಕಿನಲ್ಲಿ […]
ರಾಜ್ಯ ಮಟ್ಟದ ಕ್ವಿಜ್: ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ
ಕುಂದಾಪುರ (ಮಾ.20): ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಿದ ಜ್ಞಾನ ವಿಜ್ಞಾನ, ರಾಜ್ಯಮಟ್ಟದ ಕ್ವಿಜ್ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ವಿಜ್ಞಾನ ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಹಾಗೂ ಕುಮಾರಿ.ನಾಗಶ್ರೇಯಾ ಪ್ರಥಮ ಸ್ಥಾನಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಕಾಳಾವರ ಶ್ರೀ ಉದಯ […]
ಸಾಮಾಜಿಕ ಹಿತ ಚಿಂತನೆ ಯುವಕರಿಗೆ ಮುಖ್ಯ: ಯುವಶಕ್ತಿ ಬೆಳ್ಳಿ ಹಬ್ಬದಲ್ಲಿ ಸಚಿವ ಕೋಟ ಅಭಿಮತ
ವಕ್ವಾಡಿ(ಮಾ.20): ಸ್ವಾಸ್ಥ್ಯ ಸಮಾಜಕ್ಕೆ ಪ್ರಜ್ಞಾವಂತ ಯುವಕರ ಪಾಲು ಮಹತ್ತರವಾದದ್ದು. ಊರಿನ ಸಮಗ್ರ ಅಭಿವೃದ್ಧಿಗಾಗಿ ಯುವಕರು ದುಡಿಯಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಯುವಶಕ್ತಿ ಮಿತ್ರ ಮಂಡಲಿ (ರಿ.) ಹೆಗ್ಗಾರ್ ಬೈಲು, ವಕ್ವಾಡಿ ಇದರ ಬೆಳ್ಳಿ ಹಬ್ಬದ ಪ್ರಯಕ್ತ ಹಮ್ಮಿಕೊಂಡ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಪಂಚದ ಯಾವುದೇ ದೇಶಗಳಲ್ಲೂ ಇಲ್ಲದಷ್ಟು ಯುವಶಕ್ತಿ ನಮ್ಮ ದೇಶದಲ್ಲಿದೆ. ಯುವ ಪೀಳಿಗೆಯಲ್ಲಿರುವ […]