ಕುಂದಾಪುರ (ಮಾ.24): ಕ್ರೀಡಾ ಸಾಧಕ ಹಾಗೂ ಶಿಕ್ಷಕರಾದ ಪ್ರಶಾಂತ್ ಶೆಟ್ಟಿಯವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ನಾಲ್ಕು ಪದಕಗಳನ್ನು ಪಡೆಯುದರ ಜೊತೆಗೆ ಮುಂದಿನ ಮೇ 18ರಿಂದ 21ರವರೆಗೆ ಕೇರಳದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ಹಾಗೂ ಲಾಂಗ್ ಜಂಪ್ ವಿಭಾಗದಲ್ಲಿ ಕಂಚಿನ ಪದಕಗಳು, 400 ಮೀಟರ್ ಪುರುಷರ ರಿಲೇಯಲ್ಲಿ ಕಂಚಿನ ಪದಕ […]
Day: March 24, 2022
ಗುಜ್ಜಾಡಿ : ಮಹಿಳೆಯ ಮೂತ್ರ ಪಿಂಡದ ಕಸಿ ಆಪರೇಷನ್ ಗೆ ಆಸ್ಪತ್ರೆ ವೆಚ್ಚ ಭರಿಸಲು ಬೇಕಿದೆ ಸಹಾಯ ಹಸ್ತ
ಗುಜ್ಜಾಡಿ(ಮಾ.24): ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಶಾಲೆ ರಸ್ತೆ ಬಳಿಯ ವಾಸವಾಗಿರುವ ಕಂಟದಮನೆ ವಿದ್ಯಾವತಿ ಪೂಜಾರಿಯವರು ಸುಮಾರು ಒಂದು ವರ್ಷದಿಂದ ಮೂತ್ರ ಪಿಂಡದ ವೈಫಲ್ಯ ಖಾಯಿಲೆಯಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಾಲಿಸೀಸ್ ಮಾಡ ಬೇಕಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ರಿ ಖಾಯಿಲೆಗೆ ಮುಂದಿನ ತಪಾಸಣೆ ಮತ್ತು ಮೂತ್ರಪಿಂಡದ ಕಸಿ (Kidney Transplant) ಆಪರೇಷನ್, ಮತ್ತಿತರ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಆಸ್ಪತ್ರೆಯ ವೈದ್ಯರು ನೀಡಿದ್ದು, ಅದರಂತೆ […]
ಎಂಐಟಿ ಕುಂದಾಪುರ ಎಂಬಿಎ ವಿಭಾಗ ಸಿದ್ಧಪಡಿಸಿದ” ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ” ಪುಸ್ತಕದ ಬಿಡುಗಡೆ ಕಾರ್ಯಕ್ರಮ
ಕುಂದಾಪುರ(ಮಾ.24): ಎಂಐಟಿ ಕುಂದಾಪುರದ ಎಂಬಿಎ ವಿದ್ಯಾರ್ಥಿಗಳು ಸಿದ್ಧಪಡಿಸಿದ “ಜನತಾ ಗ್ರೂಪ್ಗಾಗಿ ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಕೋಟಾದ ಜನತಾ ಗ್ರೂಪ್ನಲ್ಲಿ ನಡೆಯಿತು. ಜನತಾ ಗ್ರೂಪ್ ಕೋಟ ಇದರ ಸಿಇಒ, ಡಾ.ಧಾನೇಶ್ ಜೇವಾನಿ, ಸಿಎಫ್ಒ ಅಶ್ವಥ್ ಶೆಟ್ಟಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್. ಕೃಷ್ಣ, ಪ್ರಮೋಟರ್ ಗಳಾದ ಶ್ರೀ ಪ್ರಶಾಂತ್ ಕುಂದರ್, ಶ್ರೀ ರಕ್ಷಿತ್ ಕುಂದರ್, ಕಾರ್ಖಾನೆಯ ಉಸ್ತುವಾರಿ ಶ್ರೀ ಶ್ರೀನಿವಾಸ ಕುಂದರ್, ಮೂಡ್ಲಕಟ್ಟೆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. […]
ಡಾ|ಬಿ. ಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಗೆ ಭೇಟಿ
ಕುಂದಾಪುರ (ಮಾ.24):ಇಲ್ಲಿನ ಡಾ|ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘ, ವಾಣಿಜ್ಯ ಸಂಘ ಹಾಗೂ ರೋಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ಕೋಟೇಶ್ವರದ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಗೆ ಕೌಶಲ್ಯ ಆಭಿವ್ರದ್ಧಿ ಹಾಗೂ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ.24 ರಂದು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ನ ಮಾಲಕರಾದ ಶ್ರೀ ಚಂದ್ರಶೇಖರ್ ಹಾಗೂ ಸಾತ್ವಿಕ್ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ […]