ವೇಣೂರು ( ಏ,20):: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳಲು ಎನೆಸ್ಸೆಸ್ ಸಹಕಾರಿ. ಶಿಕ್ಷಣದ ಜತೆ ನಮ್ಮ ವ್ಯಕ್ತಿತ್ವವು ಶಕ್ತಿಯಾಗಿ ಹೊರಹೊಮ್ಮಲಿ ಎಂದು ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಅರುಣ್ ಕ್ರಾಸ್ತ ಹೇಳಿದರು. ಅವರು ಬಜಿರೆ ಸ.ಉ.ಪ್ರಾ. ಶಾಲೆಯ ಸಭಾಂಗಣದಲ್ಲಿ ರವಿವಾರ ಜರಗಿದ ಮೂಡಬಿದಿರೆ ಶ್ರೀ ಧವಲಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಧವಲಾ ಕಾಲೇಜಿನ ಪ್ರಾಚಾರ್ಯ ಡಾ| ಸುದರ್ಶನ ಕುಮಾರ್ […]
Day: April 20, 2022
ವೈಷ್ಣವಿ ಗೋಪಾಲ್ ಗೆ 5ನೇ ರ್ಯಾಂಕ್
ಗಂಗೊಳ್ಳಿ ( ಏ.20): ಮಂಗಳೂರು ವಿಶ್ವವಿದ್ಯಾನಿಲಯದ 20020-21 ನೇ ಸಾಲಿನ ಪರೀಕ್ಷೆಯಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ವೈಷ್ಣವಿ ಗೋಪಾಲ ಚಂದನ್ ಬಿಎ ಪದವಿ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಗಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ಇವರು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಚಲನ ಫೌಂಡೇಶನ್ ಕುಂದಾಪುರ ಇದರ ಉಪಾಧ್ಯಕ್ಷೆ. ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಖ್ಯಾತ ಆಯುರ್ವೇದ ವೈದ್ಯೆ ಡಾ. ವೀಣಾ ಕಾರಂತ್ ದಂಪತಿಯ ಪುತ್ರಿ.
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ: ಕಾವ್ಯ ದೇವಾಡಿಗ ಮಂಗಳೂರು ವಿ.ವಿ ಗೆ ಪ್ರಥಮ ರ್ಯಾಂಕ್
ಕುಂದಾಪುರ ( ಏ.18): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ .ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಸುಮಧುರ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ,ಪ್ರಾಂಶುಪಾಲರು ಹಾಗೂ ಭೋಧಕ &ಭೋಧಕೇತರ ವ್ರಂದ […]
ಸಮುದಾಯ ಕುಂದಾಪುರ: ಏ. 22 ರಂದು ಮಕ್ಕಳಿಗಾಗಿ ಒಂದು ದಿನದ ವಿಜ್ಞಾನ ಮೇಳ
ಕುಂದಾಪುರ (ಏ.19): ಸಮುದಾಯ ಕುಂದಾಪುರ ಇವರ ಆಶ್ರಯದಲ್ಲಿ ದಿ.ಕಾರ್ಕಡ ರಾಮಚಂದ್ರ ಉಡುಪ ನೆನಪಿನ ಕಾರ್ಯಕ್ರಮ “ಚುಕ್ಕಿ ಚಂದ್ರಮ”- ಮಕ್ಕಳಿಗಾಗಿ ಒಂದು ದಿನದ ವಿಜ್ಞಾನ ಮೇಳ ವನ್ನು ಇದೇ ಏ,22 ರಂದು ಪೂರ್ವಾಹ್ನ 9.30 ರಿಂದ ಅಪರಾಹ್ನ 4.30 ತನಕ ಕುಂದಾಪುರದ ಸಂತ ಜೊಸೆಫ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. 6 ರಿಂದ 10ನೆಯ ತರಗತಿಯವರೆಗಿನ ನಲವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಶ್ರೀಬಾಲಗಂಗಾಧರ ಶೆಟ್ಟಿ , ಉದಯ ಗಾಂವಕಾರ್ […]